Advertisement

ಅರಣ್ಯ ನೌಕರರು ಗಡಿ ಸೈನಿಕರಿದ್ದಂತೆ: ಎಂವೈಪಿ

06:15 PM Dec 16, 2019 | Team Udayavani |

ಕಲಬುರಗಿ: ದೇಶದ ಗಡಿ ಕಾಯುವ ಸೈನಿಕರಷ್ಟೇ ಅರಣ್ಯ ನೌಕರರ ಸೇವೆಯೂ ಮುಖ್ಯವಾಗಿದೆ ಎಂದು ಶಾಸಕ ಎಂ.ವೈ.ಪಾಟೀಲ ಹೇಳಿದರು.

Advertisement

ರವಿವಾರ ನಡೆದ ಕರ್ನಾಟಕ ಅರಣ್ಯ ಇಲಾಖೆ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ 23ನೇ ವಾರ್ಷಿಕ ಮಹಾಸಭೆ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಯೋಧರು ಗಡಿ ಕಾಯ್ದರೇ ಅರಣ್ಯ ನೌಕರರು ಕಾಡನ್ನು ಶ್ರದ್ಧೆಯಿಂದ ಕಾಯಬೇಕು. ಕಾಡು ಬೆಳೆಸಿ ನಾಡು ಉಳಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಹಾಗೂ ನೌಕರರ ಪಾತ್ರವೇ ಮುಖ್ಯವಾಗಿದೆ ಎಂದರು.

ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಉದ್ಘಾಟಿಸಿ ಮಾತನಾಡಿ, ಅರಣ್ಯ ಇಲಾಖೆಯ ವೀರಶೈವ ನೌಕರರ ಯಾವುದೇ ಸಮಸ್ಯೆಗಳ ನಿವಾರಣೆಗೆ ರಾಜ್ಯ ಬಿಜೆಪಿ ಸರ್ಕಾರ ಬದ್ಧವಿದೆ ಎಂದು ಹೇಳಿದರು. ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ ಮಾತನಾಡಿ, ನೌಕರರ ಸಹಾಯಕ್ಕೆ ತಾವೂ ಬದ್ಧರಾಗಿರುವುದಾಗಿ ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಹಾರಕೂಡ ಹಿರೇಮಠದ ಡಾ| ಚೆನ್ನವೀರ ಶಿವಾಚಾರ್ಯರು ಆಶೀರ್ವಚನ ನೀಡುತ್ತಾ, ನಾವೆಲ್ಲರೂ ಜನ್ಮ ದಿನ ಸೇರಿದಂತೆ ಇತರ ಸಮಾರಂಭಗಳಲ್ಲಿ ಸಸಿಗಳನ್ನು ನೀಡುವ ಮುಖಾಂತರ ಅರಣ್ಯಾಭಿವೃದ್ಧಿಗೆ ಶ್ರಮಿಸಬೇಕು ಎಂದರು.

Advertisement

ಮಹಿಳೆಯರ ಮೇಲಿನ ಗೌರವ ಕಡಿಮೆಯಾಗುತ್ತಿರುವುದು ಹಾಗೂ ದೌರ್ಜನ್ಯ ತಡೆಗಟ್ಟಲು ಉತ್ತಮ ಸಂಸ್ಕಾರ, ಧರ್ಮದ ಪರಿಹಾರವೇ ಮದ್ದಾಗಿದೆ ಎಂದು ಕಿವಿ ಹೇಳಿದರು.

ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಸಂಘದ ಅಧ್ಯಕ್ಷ ಅಶೋಕ ಬಸರಕೋಡ ಮಾತನಾಡಿ, ಸಂಘವು ಮುಂಬರುವ ದಿನಗಳಲ್ಲಿ ಇನ್ನಷ್ಟು ಸಮಾಜಮುಖೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಜತೆಗೆ ಸಂಘದ 25ನೇ ವಾರ್ಷಿಕ ಮಹಾಸಭೆ ವೇಳೆಗೆ ದಾವಣಗೆರೆಯಲ್ಲಿ ಸಂಘದ ರಾಜ್ಯ ಕಚೇರಿ ಸ್ವಂತ ಕಟ್ಟಡ ಹೊಂದಲಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಸುವರ್ಣ ಹಣಮಂತರಾವ್‌ ಮಲಾಜಿ, ಸಂಘದ ಕಾರ್ಯದರ್ಶಿ ಟಿ.ಜೆ. ರವಿಕುಮಾರ, ವೀರಶೈವ ಸಮಾಜದ ಮುಖಂಡರಾದ ಜಿ.ಡಿ. ಅಣಕಲ್‌, ಕಲ್ಯಾಣಪ್ಪ ಪಾಟೀಲ ಇದ್ದರು. ಸಂಘದ ಪದಾಧಿಕಾರಿಗಳಾದ ಬಾಬುರಾವ್‌ ಪಾಟೀಲ, ಬಸವರಾಜ ಡಾಂಗೆ, ಜಗನ್ನಾಥ ಕೊರಳ್ಳಿ, ಗುರುರಾಜ ಕಮತರ್‌, ರೇವಣಸಿದ್ದಪ್ಪ ತಾವರಕೇಡ, ಸೋಮಶೇಖರ ಸಜ್ಜನ್‌, ಮಹೆಶ ಮನ್ಮ, ಬಸವಂತಪ್ಪ ದಾನೋಜಿ ಮುಂತಾದವರಿದ್ದರು. ಸಹಾಯಕ ಅರಣ್ಯಾಧಿಕಾರಿ ಎ.ಬಿ.ಪಾಟೀಲ ಬಮ್ಮನಳ್ಳಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next