Advertisement
ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಬುಧವಾರ ಸಂಜೆ ಡಾ| ಪಿ.ಎಸ್. ಶಂಕರ ಪ್ರತಿಷ್ಠಾನದ 20ನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಿ.ಎಸ್. ಶಂಕರ ಅವರದ್ದು ಎತ್ತಿದ ಕೈಯಾಗಿದ್ದು, ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ ಎಂದರು. ಕಳೆದ 20 ವರ್ಷಗಳಿಂದ ವಿದ್ಯಾರ್ಥಿ ವೇತನ ಕೊಡುವ ಮೂಲಕ ಬಡ ವೈದ್ಯ ವಿದ್ಯಾರ್ಥಿಗಳಿಗೆ ಡಾ| ಪಿ.ಎಸ್.ಶಂಕರ ನೆರವಾಗುತ್ತಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಅವರು ತಮ್ಮದೇ ಪ್ರತಿಷ್ಠಾನ ಸ್ಥಾಪಿಸಿ ಮಾಡುತ್ತಿರುವುದು ದೊಡ್ಡ ಸಾಧನೆ ಎಂದು ಶ್ಲಾಘಿಸಿದರು.
Related Articles
Advertisement
ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಚ್.ಎಲ್. ಚಲುವರಾಜು, ನಾನು ಹಿಂದುಳಿದ ಚಾಮರಾಜನಗರ ಜಿಲ್ಲೆಯಿಂದ ಬಂದವನು. ಕನ್ನಡ ಮತ್ತು ಇಂಗ್ಲಿಷ್ ಭಾಷೆ ಮೇಲೆ ಹಿಡಿತ ಇರಲಿಲ್ಲ. ಆದರೂ, ಕನ್ನಡದಲ್ಲಿ ವೈದ್ಯಕೀಯ ಮಾಹಿತಿ ಸಿಗಬೇಕೆಂಬ ಉದ್ದೇಶದಿಂದ ಪುಸ್ತಕಗಳ ರಚನೆ ಮಾಡಿದೆ. ಬೆಲೆ ಜಾಸ್ತಿಯಾದರೆ ಯಾರು ಕೊಂಡುಕೊಳ್ಳತ್ತಾರೆ ಎನ್ನುವ ಭಯ ಇತ್ತು. ಆದರೀಗ ನನ್ನ ಸಾಹಿತ್ಯ ಗುರುತಿಸಿ ಪ್ರಶಸ್ತಿ ಸಂದಿರುವುದು ಸಂತೋಷ ತಂದಿದೆ ಎಂದರು.
ವೈದ್ಯಶ್ರೀ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಡಾ| ಲಕ್ಷ್ಮಣ ಎಚ್. ಬಿದರಿ ಮಾತನಾಡಿ, ನಾವು ಸಮಾಜಕ್ಕೆ ಏನಾದರೂ ಕೊಟ್ಟರೆ, ಸಮಾಜ ನಮಗೆ ಮರಳಿ ಕೊಡುತ್ತದೆ. ನೂರು ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆ, ಹೃದಯದ ರಂಧ್ರಗಳ ಮುಚ್ಚುವ ಶಸ್ತ್ರಚಿಕಿತ್ಸೆ, ಹಿರಿಯರಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸಮಾಜಕ್ಕೆ ಅನುಕೂಲವಾಗುವ ಕೆಲಸ ಮಾಡಲಾಗಿದೆ. ನಮ್ಮ ಆಸ್ಪತ್ರೆಗೆ ಕಲಬುರಗಿ ವೈದ್ಯರ ಕೊಡುಗೆ, ಸಹಕಾರ ಬಳಹವಿದೆ ಎಂದು ಹೇಳಿದರು.
ಖ್ಯಾತ ವೈದ್ಯ ಡಾ| ಪಿ.ಎಸ್. ಶಂಕರ, ಡಾ| ಪಿ.ಎಸ್. ಶಂಕರ ಪ್ರತಿಷ್ಠಾನದ ಅಧ್ಯಕ್ಷೆ ಅಂಬಿಕಾ ಶಂಕರ್, ಕಾರ್ಯಾಧ್ಯಕ್ಷ ಡಾ| ಎಚ್. ವೀರಭದ್ರಪ್ಪ, ಕಾರ್ಯದರ್ಶಿ ಪ್ರೊ| ನರೇಂದ್ರ ಬಡಶೇಷಿ,ಎಂ.ಸದಾನಂದ, ಡಾ| ಎಸ್.ಎ. ಮಾಲಿಪಾಟೀಲ, ಡಾ| ಪಿ.ಎಂ. ಬಿರಾದಾರ ಸೇರಿದಂತೆ ವಿದ್ಯಾರ್ಥಿವೇತನ ಫಲಾನುಭವಿಗಳು, ಪೋಷಕರು ಹಾಜರಿದ್ದರು.