Advertisement
ತೊಗರಿ ಕಟಾವು ಆಗುತ್ತಿದ್ದು, ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ರೈತರು ನಷ್ಟ ಅನುಭಸುವಂತೆ ಆಗಿದೆ. ಹೀಗಾಗಿ ತಕ್ಷಣವೇ ರೈತರಿಂದ ತೊಗರಿ ನೋಂದಣಿ ಆರಂಭಿಸಿ, ಖರೀದಿಸುವ ಪ್ರಕ್ರಿಯೆ ಶುರು ಮಾಡಬೇಕು. ಈ ವರ್ಷ ರಾಜ್ಯದಲ್ಲಿ 11 ಲಕ್ಷ ಟನ್ ತೊಗರಿ ಉತ್ಪಾದನೆ ನಿರೀಕ್ಷೆ ಇದೆ. ಆದರೆ, ರಾಜ್ಯ ಸರ್ಕಾರವು 10.70 ಲಕ್ಷ ಟನ್ ಉತ್ಪಾದನೆಯೆಂದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಮಾತ್ರ ಖರೀದಿ ಮಾಡಲು ಆದೇಶ ಹೊರಡಿಸಿದೆ. ಜತೆಗೆ ಈಗಾಗಲೇ ಕೇಂದ್ರ ಸರ್ಕಾರವು 1.85 ಲಕ್ಷ ಟನ್ ಮಾತ್ರ ಖರೀದಿಗೆ ಒಪ್ಪಿಗೆ ನೀಡಿದ್ದು, ರೈತರಿಗೆ ಅನ್ಯಾಯ ಆಗುತ್ತಿದೆ. 5.5 ಲಕ್ಷ ಟನ್ ಖರೀದಿಗೆ ಕೇಂದ್ರವು ಒಪ್ಪಿಗೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ತೊಗರಿ ಖರೀದಿಗೆ ಕೇಂದ್ರ ಸರ್ಕಾರದ ಹಣ ಬಿಡುಗಡೆಗೆ ವಿಳಂಬವಾದರೆ, ರಾಜ್ಯ ಸರ್ಕಾರವೇ ಖರೀದಿಗೆ ಹಣ ನೀಡುವ ತೀರ್ಮಾನ ತೆಗೆದುಕೊಳ್ಳಬೇಕು. ಪ್ರತಿ ರೈತರಿಂದ 10 ಕ್ವಿಂಟಲ್ ಖರೀದಿ ನಿಗದಿ ಸಡಿಲಿಸಿ ಕನಿಷ್ಠ 25 ಕ್ವಿಂಟಲ್ ತೊಗರಿ ಖರೀದಿಸಬೇಕು. ದೇಶದ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ವಿದೇಶದಿಂದ ಆಮದು ಮಾಡಿಕೊಳ್ಳುವ ಬೇಳೆ ಕಾಳುಗಳ ಮೇಲೆ ಶೇ.30ರಷ್ಟು ಸುಂಕ ವಿಧಿ ಸಬೇಕೆಂದು ಒತ್ತಾಯಿಸಿದರು.
Related Articles
ಕೆಲಸ ಮಾಡುತ್ತಿದ್ದು, ಈಗ ಯೋಜನೆಯ ಲಾಭ ಇಲ್ಲದಂತಾಗಿದೆ.
Advertisement
ಆದ್ದರಿದ ಅಲ್ಲಿನ ಗ್ರಾಮಸ್ಥರು ವಲಸೆ ಹೋಗುವುದನ್ನು ತಡೆಯಲು ಪರ್ಯಾಯ ಕೆಲಸ ಒದಗಿಸಬೇಕು. ಇಲ್ಲವೇ ಉದ್ಯೋಗ ಖಾತ್ರಿ ಯೋಜನೆ ಪುನರ್ ಪ್ರಾರಂಭಿಸಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಅಖೀಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶರಣಬಸಪ್ಪ ಮಮಶೆಟ್ಟಿ, ಭೀಮಾಶಂಕರ್ ಮಾಡಿಯಾಳ್, ಮೌಲಾ ಮುಲ್ಲಾ ಅಲ್ತಾಫ್ ಇನಾಂದಾರ್, ಅಶೋಕ್ ಮ್ಯಾಗೇರಿ, ಮಂಜುನಾಥ ಪಾಟೀಲ, ಮಲ್ಲಣ್ಣಗೌಡ ಬನ್ನೂರ, ಶಾಂತಪ್ಪ ಪಾಟೀಲ, ಪಾಂಡುರಂಗ ಮಾನವಿ ಮತ್ತಿತರರು ಪಾಲ್ಗೊಂಡಿದ್ದರು.