Advertisement

ಚರಗ ಚಲ್ಲಿ ಸಂಭ್ರಮಿಸಿದ ನೇಗಿಲಯೋಗಿ

07:32 PM Dec 26, 2019 | Naveen |

ಕಲಬುರಗಿ: ಗುರುವಾರ ಸೂರ್ಯ ಗ್ರಹಣ ಇರುವುದರಿಂದ ಎಳ್ಳ ಅಮಾವಾಸ್ಯೆಯನ್ನು ಬುಧವಾರ ದಿನವೇ ನೇಗಿಲಯೋಗಿ ಭೂತಾಯಿಗೆ ಚರಗದ ನೈವೇದ್ಯ ಅರ್ಪಿಸಿ, ಧನ್ಯತೆ ಸಮರ್ಪಿಸಿದ. ಪ್ರಸಕ್ತವಾಗಿ ಮಳೆ ಬಂದು ಬೆಳೆಗಳು ಉತ್ತಮವಾಗಿದ್ದರಿಂದ ನೇಗಿಲಯೋಗಿ ಎಳ್ಳ ಅಮಾವಾಸ್ಯೆ ಸಂಭ್ರಮದಿಂದ ಆಚರಿಸಿರುವುದು ಜಿಲ್ಲೆಯಾದ್ಯಂತ ಕಂಡು ಬಂತು.

Advertisement

ತರಹ-ತರಹ ಪಲ್ಯ ಅದರಲ್ಲೂ ಭಜ್ಜಿ, ಕಡುಬ, ಅನ್ನ-ಸಾರು ಸೇರಿದಂತೆ ಭರ್ಜರಿ ಅಡುಗೆಯನ್ನು ಕುಟುಂಬದರೊಡನೆ ಹಾಗೂ ಹಿತೈಷಿಗಳೊಂದಿಗೆ ಎತ್ತುಗಳ ಚಕ್ಕಡಿಯಲ್ಲಿಟ್ಟುಕೊಂಡು ಹೊರಟ ರೈತರು ಗದ್ದೆ, ತೋಟ ಹಾಗೂ ಹೊಲಕ್ಕೆ ತೆರಳಿ ಜೋಳದ ಹೊಲದಲ್ಲಿ ಪಾಂಡವರ ಪೂಜೆ ಸಲ್ಲಿಸಿ, ಉತ್ತಮ ಫಸಲು ಬರಲಿ, ಬೆಳೆಗಳಿಗೆ ಯಾವುದೇ ರೋಗಗಳು ಬಾರದಿರಲಿ ಎಂದು ಪ್ರಾರ್ಥಿಸಿದರು.

ಪೂಜೆ ಸಲ್ಲಿಸಿದ ನಂತರ ಕುಟುಂಬ ವರ್ಗದವರು ಹಾಗೂ ಹಿತೈಷಿಗಳು ಭರ್ಜರಿ ಭೋಜನ ಸೇವಿಸಿದರು. ಪುಂಡಿ ಪಲ್ಯೆ, ವಿವಿಧ ತರಕಾರಿಗಳು, ಕಾಳು ಹಾಕಿ ಮಾಡಲಾದ ಭಜ್ಜಿ ಪಲ್ಯೆ, ಜೋಳ ಮತ್ತು ಸಜ್ಜೆಯ ಕಡುಬನ್ನು ಸವಿದರು. ಸಂಜೆ ರೈತ ಚರಗದ ಬುಟ್ಟಿಯೊಂದಿಗೆ ಜೋಳದ ಹಸಿ ತೆನೆಗಳನ್ನು ತಂದು ಗ್ರಾಮದಲ್ಲಿನ ದೇವಾಲಯಗಳಿಗೆ ಸಮರ್ಪಿಸುತ್ತಿರುವುದು ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next