ಕಲಬುರಗಿ: ಆಳಂದ ತಾಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ವಿವಿ ಆವರಣದಲ್ಲಿನ ಗಿಡ ಮರಗಳಾದಿಯಾಗಿ ಪ್ರಾಣಿ–ಪಕ್ಷಿಗಳು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದ್ದು, ಇದು ಮೂರ್ ನಾಲ್ಕು ದಿನಗಳಿಂದ ನಡೆಯುತ್ತಿದೆ ಎಂದು ವಿವಿ ಮೂಲಗಳು ತಿಳಿಸಿವೆ.
‘ವಿಶ್ವವಿದ್ಯಾಲಯ ಆವರಣದ ಎಸ್‌ಟಿಪಿ, ಪಿಬಿಸಿ ವಸತಿ ಮತ್ತು ಕೆರೆ ಸಮೀಪದ ಒಣ ಹುಲ್ಲಿಗೆ ಸೋಮವಾರ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಭಾರಿ ಪ್ರಮಾಣದ ಹೋಗೆ ಮೂಗಿನ ಮುಟ್ಟಿದೆ ಹೊಗೆ ಮುಗಿಲು ಮುಟ್ಟಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಬೇಸಿಗೆ ಇರುವುದರಿಂದ ಕಳೆದ ನಾಲ್ಕು ದಿನಗಳಿಂದ ಪಿವಿ ಆಭರಣದಲ್ಲಿರುವ ಒಣಗಿದ ಹುಲ್ಲು ಕಡ್ಡಿಗಳನ್ನು ಕತ್ತರಿಸಲಾಗುತ್ತಿತ್ತು. ಹೀಗೆ ಕತ್ತರಿಸಿ ಗುಡ್ಡೆ ಹಾಕಿರುವ ಒಣ ಹುಲ್ಲಿನ ಬಣ್ಣಿಮೆಗೆ ಕೆಲವು ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿ ಮತ್ತು ವ್ಯವಸ್ಥಿತವಾಗಿ ಬೆಂಕಿ ಹಚ್ಚಲಾಗುತ್ತಿದ್ದು, ಕಳೆದ ಮೂರು ದಿನಗಳಿಂದ ಇಂತಹ ಕೃತ್ಯ ನಡೆಯುತ್ತಿವೆ’ ಎಂದು ಸಿಯುಕೆ ಬಸವ ಪೀಠದ ಸಂಯೋಜಕ ಡಾ. ಗಣಪತಿ ಬಿ ಸಿನ್ನೂರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಈ ವರ್ಷ ಜೆಸಿಬಿ, ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಒಣಹುಲ್ಲು ಕತ್ತರಿಸಲಾಗುತ್ತಿದೆ. ಸೋಮವಾರ ಏಕಕಾಲದಲ್ಲಿ ಮೂರು ಕಡೆ ಬೆಂಕಿಹಚ್ಚಿದರಿಂದ ಬೆಂಕಿಯ ಕೆನ್ನಾಲಿಗೆ 4–5 ಅಡಿ ಎತ್ತರ ಚಾಚಿಕೊಂಡಿದೆ. ಇದರಿಂದ ಸೋಲಾರ್ ಪ್ಲಾಂಟ್, ಕಾಂಪೌಂಡ್, ಎಸ್‌ಟಿಪಿ, ಪಿಬಿಸಿ ವಸತಿ, ಕೆರೆ ಸಮೀಪದ ಮರಗಳು ಸುಟ್ಟಿವೆ. ಪ್ರಾಣಿ– ಪಕ್ಷಿಗಳು ಸುಟ್ಟು ಭಸ್ಮವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಅಪಾರ ಪ್ರಮಾಣದಲ್ಲಿ ಬೆಳೆದಿರುವ ಹುಲ್ಲಿನ ನಡುವೆ ಹುಳು ಹುಪ್ಪಟಗಳು, ಕಪ್ಪೆಗಳು, ಹಾವುಗಳು, ಓತಿಕೇತ, ಮಿಡತೆಗಳು, ಚಿಟ್ಟೆಗಳು, ನೆಲದೊಳಗೆ ಇರುವೆಗಳು, ಗೆದ್ದಲು ಬೆಂಕಿಗೆ ಆಹುತಿಯಾಗಿವೆ. ಕ್ಯಾಂಪಸ್‌ನಲ್ಲಿ ಪದೇ ಪದೇ ಬೆಂಕಿ ಕಾಣಿಸಿಕೊಂಡು, ಅದರ ಹೊಗೆ ಸುತ್ತಲಿನ ವಸತಿ ಪ್ರದೇಶಗಳಲ್ಲಿ ಹರಡುತ್ತಿದೆ. ಈ ಘಟನೆಯಿಂದ ಸಿಯುಕೆ ಆಡಳಿತ ವರ್ಗವು ಕೂಡ ವಿಚಲಿತಗೊಂಡಿದೆ.
ಇದನ್ನೂ ಓದಿ: ಬ್ರೆಜಿಲ್ ಭೂಕುಸಿತ: ಮೃತರ ಸಂಖ್ಯೆ 65ಕ್ಕೆ ಏರಿಕೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ