ಕೊಳ್ಳೇಗಾಲ: ವ್ಯಕ್ತಿಯೋರ್ವನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆಯೊಂದು ತಾಲ್ಲೂಕಿನ ಮದುವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಹದೇವಸ್ವಾಮಿ (47) ಎಂಬಾತನೇ ಹತ್ಯೆಯಾದ ದುರ್ದೈವಿ.
ಮೃತನ ಪುತ್ರಿ ಸ್ನೇಹ ಕಾಲೇಜಿನಿಂದ ಬಂದು ಮನೆಯ ಬಾಗಿಲನ್ನು ತಳ್ಳಿ ನೋಡಿದಾಗ ತಂದೆ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿರುವುದನ್ನು ಕಂಡು ಗ್ರಾಮಾಂತರ ಪೋಲೀಸ್ ರಾಣಿಗೆ ದೂರು ನೀಡಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಪುಕರಣ ದಾಖಲಾದ ಕೂಡಲೇ ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶಿವ ಕುಮಾರ್. ಎ.ಎಸ್.ಪಿ ಸುಂದರ್ ರಾಜ ಸಿಬಂದಿ ವರ್ಗ ಪರಿಶೀಲನೆ ನಡೆಸಿದರು.
ಕೊಲೆ ಶಂಕೆ ಹಿನ್ನಲೆಯಲ್ಲಿ ಮೈಸೂರಿನಿಂದ ಬೆರಳಚ್ಚು ತಜ್ಞರನ್ನು ಮತ್ತು ಪೋಲೀಸ್ ನಾಯಿ ಕರೆಸಿ ತನಿಖೆ ಕೈಗೊಂಡು ಶವವನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರಗೆ ರವಾನಿಸಲಾಗಿದೆ.
ಗ್ರಾಮಾಂತರ ಪೋಲೀಸ್ ರಾಣಿಯ ಪಿ.ಎಸ್.ಐ. ಮಂಜುನಾಥ್ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಬೆಚ್ಚಿ ಬೀಳಿಸುವ ಘಟನೆ: ಜನವಸತಿ ಪ್ರದೇಶದಲ್ಲೇ ತಂಡದಿಂದ ಯುವಕನ ಬರ್ಬರ ಹತ್ಯೆ…