Advertisement

ಇಬ್ಬರು ಮಕ್ಕಳು ಸೇರಿ ಮತ್ತೆ ಐವರಿಗೆ ಕೋವಿಡ್

12:07 PM May 29, 2020 | Naveen |

‌ಕಲಬುರಗಿ: ಕೋವಿಡ್ ಮಹಾಮಾರಿಯಿಂದ ಈಗಾಗಲೇ ನಲುಗಿರುವ ಸೂರ್ಯನಗರಿಯಲ್ಲಿ ಮಹಾರಾಷ್ಟ್ರದ ಸೋಂಕಿನ ನಂಟು ನಿತ್ಯವೂ ಕಂಪನ ಉಂಟು ಮಾಡುತ್ತಲೇ ಇದ್ದು, ಗುರುವಾರ ಮತ್ತೆ ನಾಲ್ಕು ವರ್ಷ ಮತ್ತು ಒಂಭತ್ತು ವರ್ಷದ ಮಕ್ಕಳು ಸೇರಿ ಐವರಿಗೆ ಕೋವಿಡ್ ಸೋಂಕು ವಕ್ಕರಿಸಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 190ಕ್ಕೆ ಏರಿಕೆಯಾಗಿದೆ.

Advertisement

ಜಿಲ್ಲೆಯಲ್ಲಿ ಮೇ 10ರಿಂದಲೂ ಮುಂಬೈನಿಂದ ಬಂದವರಲ್ಲೇ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಬುಧವಾರ ಅಫಜಲಪುರದಲ್ಲಿ ಇಬ್ಬರು, ಸೇಡಂ, ಶಹಾಬಾದ ಮತ್ತು ಚಿತ್ತಾಪುರ ತಾಲೂಕಿನಲ್ಲಿ ತಲಾ ಒಬ್ಬರಿಗೆ ಹೆಮ್ಮಾರಿ ಪತ್ತೆಯಾಗಿದೆ. ಮುಂಬೈನಿಂದ ಬಂದ ಹಿನ್ನೆಲೆಯಲ್ಲಿ ಇವರೆಲ್ಲರೂ ಕ್ವಾರಂಟೈನ್‌ ಕೇಂದ್ರದಲ್ಲಿ ಕ್ವಾರಂಟೈನ್‌ ಆಗಿದ್ದರು. ಸೇಡಂ ತಾಲೂಕಿನ ಮೇದಕ್‌ ಗ್ರಾಮದ 30 ವರ್ಷದ ಮಹಿಳೆ (ಪಿ-2422), ಶಹಾಬಾದ ತಾಲೂಕಿನ ಭಂಕೂರ ಬಳಿಯ ತರಿ ತಾಂಡಾದ 30 ವರ್ಷದ ಮಹಿಳೆ (ಪಿ-2492) ಹಾಗೂ ಚಿತ್ತಾಪುರ ತಾಲೂಕಿನ ಅನಿಕೇರಿ ಬಳಿಯ ರಾಮಾನಾಯಕ ತಾಂಡಾದ ಒಂಭತ್ತು ವರ್ಷದ ಬಾಲಕ (ಪಿ-2493)ನಿಗೆ ಕೋವಿಡ್‌-19 ದೃಢವಾಗಿದೆ.

ಅಫಜಲಪುರ ತಾಲೂಕಿನ ಶಿರವಾಳ ಗ್ರಾಮದ 25 ವರ್ಷದ ಮಹಿಳೆ (ಪಿ-2520) ಮತ್ತು ನಂದರ್ಗಾ ಗ್ರಾಮದ 4 ವರ್ಷದ ಗಂಡು ಮಗು (ಪಿ-2521) ವಿಗೆ ಕೋವಿಡ್ ಪತ್ತೆಯಾಗಿದೆ. ಸೋಂಕು ಪತ್ತೆಯಾದ ಕೂಡಲೇ ಕ್ವಾರಂಟೈನ್‌ ಕೇಂದ್ರದಿಂದ ಕೋವಿಡ್‌-19 ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 190ಕ್ಕೆ ಹೆಚ್ಚಳವಾಗಿದ್ದು, ಇದರಲ್ಲಿ 75 ಜನ ಗುಣಮುಖರಾಗಿದ್ದಾರೆ. ಏಳು ಜನರು ಕೋವಿಡ್  ಗೆ ಬಲಿಯಾಗಿದ್ದಾರೆ. ಉಳಿದಂತೆ 108 ಜನ ಮಹಾಮಾರಿ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next