ಕಲಬುರಗಿ: ಜಿಲ್ಲೆಯ ಜೀವನಾಡಿ ಭೀಮಾ ನದಿ ತೀರದ ತಾಲೂಕಿನ ಹೇರೂರ ಬಿ. ಗ್ರಾಮದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೂ. 22ರಂದು ವಾಸ್ತವ್ಯ ಹೂಡುತ್ತಿರುವ ಹಿನ್ನೆಲೆಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.
Advertisement
ಕಲಬುರಗಿ ಮಹಾನಗರದಿಂದ 40 ಕಿ.ಮೀ. ದೂರದ ಅಫಜಲಪುರ ವಿಧಾನಸಭಾ ಕ್ಷೇತ್ರದ ಹೇರೂರ ಬಿ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಮುಖ್ಯಮಂತ್ರಿಗಳು ವಾಸ್ತವ್ಯ ಹೂಡಲಿದ್ದಾರೆ. ಹೀಗಾಗಿ ಶಾಲೆಗೆ ಬಣ್ಣ ಹೊಡೆಯುವುದು, ಶೌಚಾಲಯ ನಿರ್ಮಿಸುವ ಕಾರ್ಯ ಹಗಲಿರಳು ನಡೆದಿವೆ. ಅಲ್ಲದೇ ಮುರಿದು ಹೋಗಿದ್ದ ಬಾಗಿಲು ಹಚ್ಚುವ ಜತೆಗೆ ಮುಖ್ಯವಾಗಿ ಐದಾರು ವರ್ಷಗಳ ಹಿಂದೆಯಷ್ಟೇ ನಿರ್ಮಾಣವಾಗಿರುವ ಶಾಲಾ ಕಟ್ಟಡದ ಕಳಪೆ ಕಾಮಗಾರಿ ಕಾಣದ ಹಾಗೆ ದುರಸ್ಥಿಗೊಳಿಸುವ ಕಾರ್ಯವೂ ನಡೆದಿದೆ.
Related Articles
Advertisement
ಗ್ರಾಮಸ್ಥರ ಬೇಡಿಕೆಗಳು?.ಹೇರೂರ ಬಿ- ಜೇವರ್ಗಿ ತಾಲೂಕಿನ ಹರವಾಳ ನಡುವೆ ಭೀಮಾ ನದಿ ಮೇಲೆ ಸೇತುವೆ ನಿರ್ಮಾಣ. . ಸಮರ್ಪಕ ಕುಡಿಯುವ ನೀರಿನ ಸೌಕರ್ಯ ಕಲ್ಪಿಸುವುದು. . ಪೊಲೀಸ್ ಠಾಣೆ ಸ್ಥಾಪಿಸುವುದು. . 20 ವರ್ಷಗಳ ಹಿಂದೆ ಗ್ರಾಮದಲ್ಲಿದ್ದ ಕೃಷ್ಣಾ ಗ್ರಾಮೀಣ ಬ್ಯಾಂಕ್ ಶಾಖೆ ಪುನರಾರಂಭ ಆಗಲಿ. . ಪ್ರಾಥಮಿಕ ಕೃಷಿ ಪತ್ತಿನ ಸಹಕಾರ (ವಿಎಸ್‌ಎಸ್‌ಎನ್) ಸಂಘ ಸ್ಥಾಪಿಸುವುದು. . ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವುದು. . ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಜಲಸಂಗ್ರಹಾಲಯ ಸದುಪಯೋಗಪಡಿಸುವುದು.