Advertisement
ಸಂಸದ ಡಾ| ಉಮೇಶ ಜಾಧವ, ಶಾಸಕಿ ಖನೀಜ್ ಫಾತೀಮಾ, ಪ್ರಾದೇಶಿಕ ಆಯುಕ್ತ ಸುಬೋಧ ಯಾದವ, ಜಿಲ್ಲಾಧಿಕಾರಿ ಬಿ.ಶರತ್, ಜಿಲ್ಲಾ ಪಂಚಾಯಿತಿ ಸಿಇಒ ಡಾ| ಪಿ. ರಾಜಾ ಪೊರಕೆ ಹಿಡಿದು ಕಸಗೂಡಿಸಿದರು. ಕಸದ ಬುಟ್ಟಿಗಳನ್ನು ಹಿಡಿದು ಗಿಡಗಳಲ್ಲಿ ಮರೆಯಾದ ಕುಡಿಯುವ ನೀರಿನ ಪ್ಲಾಸ್ಟಿಕ್ ಗ್ಲಾಸ್, ಬಾಟಲಿ, ಗುಟ್ಕಾ ಚೀಟಿಗಳ ತ್ಯಾಜ್ಯ ಸಂಗ್ರಹಿಸಿದರು.
Related Articles
Advertisement
ಮಿನಿ ವಿಧಾನಸೌಧ ಆವರಣ: ಸಾರ್ವಜನಿಕ ಉದ್ಯಾನವನದ ನಂತರ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ, ಜಿಲ್ಲಾಧಿಕಾರಿ ಬಿ.ಶರತ್ ಮಿನಿ ವಿಧಾನಸೌಧ ಆವರಣದಲ್ಲೂ ಶ್ರಮದಾನ ಮಾಡಿದರು.
ಅಪರ ಜಿಲ್ಲಾ ಧಿಕಾರಿ ಬಿ.ಶರಣಪ್ಪ, ಶಿಷ್ಟಾಚಾರ ತಹಶೀಲ್ದಾರ್ ಪ್ರಕಾಶ ಚಿಂಚೋಳಿಕರ ಸೇರಿದಂತೆ ಮಿನಿ ವಿಧಾನಸೌಧದ ಅಧಿಕಾರಿ ಮತ್ತು ಸಿಬ್ಬಂದಿ ಸಾಥ್ ನೀಡಿದರು.
ಸ್ವಚ್ಛತಾ ಅಭಿಯಾನ: ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕಸಗೂಡಿಸುವ ಮೂಲಕ ಜಿಲ್ಲಾ ಛಾಯಾಗ್ರಾಹಕರ ಸಂಘದ ಸದಸ್ಯರು ಮಹಾತ್ಮ ಗಾಂಧಿಧೀಜಿ ಜಯಂತಿಯನ್ನು ವಿಭಿನ್ನವಾಗಿ ಆಚರಿಸಿದರು. ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಶರಣು ಮೋದಿ, ಸಂಘದ ರಾಜ್ಯಾಧ್ಯಕ್ಷ ಎಸ್. ಪರಮೇಶ, ಬಸವರಾಜ ಮಾಲಿಪಾಟೀಲ ಹಾಗೂ ಛಾಯಾಗ್ರಾಹಕರು, ವಿಡಿಯೋಗ್ರಾಫರ್ ಗಳು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
ದರ್ಗಾ ಸ್ವತ್ಛತಾ ಕಾರ್ಯ: ಕೆಬಿಎನ್ ಶಿಕ್ಷಣ ಸಂಸ್ಥೆ ಮತ್ತು ಪಾಲಿಕೆ ಸಹಯೋಗದಲ್ಲಿ ಖಾಜಾ ಬಂದೇನವಾಜ್ ದರ್ಗಾ ಎದುರು ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಮತ್ತು ಸಂಸ್ಥೆ ಆಡಳಿತ ಮಂಡಳಿಯವರು ಭಾಗವಹಿಸಿದ್ದರು. ಅಲ್ಲದೇ, ಬೀಬೀ ರಜಾ ಕಾಲೇಜು ವತಿಯಿಂದ ವಿದ್ಯಾರ್ಥಿನಿಯರು ಪ್ಲಾಸ್ಟಿಕ್ ನಿಷೇಧ ಬಗ್ಗೆ ಜಾಗೃತಿ ಜಾಥಾ ನಡೆಸಿದರು.
ಭವಾನಿ ನಗರ: ವಾರ್ಡ್ ನಂ.3ರ ಭವಾನಿ ನಗರದಲ್ಲಿ ಬಿಜೆಪಿ ಯುವ ಮುಖಂಡ ಚಂದು ಪಾಟೀಲ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಸಂಸದ ಡಾ| ಉಮೇಶ ಜಾಧವ ಚಾಲನೆ ನೀಡಿದರು. ಶಾಸಕ ಬಸವರಾಜ ಮತ್ತಿಮಡು, ಎಂಎಲ್‌ಸಿ ಬಿ.ಜಿ. ಪಾಟೀಲ, ದೊಡ್ಡಪ್ಪಗೌಡ ಪಾಟೀಲ ನರಿಬೋಳ ಇದ್ದರು.
ಆರ್‌ಜಿಪಿಆರ್‌ಎಸ್: ಜಿಲ್ಲಾ ಕಾಂಗ್ರೆಸ್‌ನ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಗಾಂಧೀಜಿ ಆಶಯದಂತೆ ನಗರದ ಕೆ.ಎಚ್.ಬಿ ಕಾಲೋನಿಯಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ಗಾಂಧಿ ಕಂಡಿರುವ ಗ್ರಾಮ ಸ್ವರಾಜ್ ಕನಸು ಸಾಕಾರಗೊಳಿಸುವ ಉದ್ದೇಶದಿಂದ ಸಂಘಟನೆ ರಾಜ್ಯಾದ್ಯಂತ ಅ.30ರ ವರೆಗೆ ಗ್ರಾಮ ಸ್ವರಾಜ್ ಅಭಿಯಾನ ನಡೆಸುತ್ತಿದೆ ಎಂದು ವಿಭಾಗೀಯ ಸಂಚಾಲಕ ಶೌಕತ್ ಅಲಿ ಆಲೂರ ತಿಳಿಸಿದರು.