Advertisement
ಚಿಂಚೋಳಿ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಅಬಕಾರಿ ಮತ್ತು ಪೊಲೀಸ್ ನೋಡಲ್ ಅಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್, ವಿವಿಟಿ, ಎಸ್.ಎಸ್.ಟಿ., ವಿ.ಎಸ್.ಟಿ. ಸೇರಿದಂತೆ ಇನ್ನಿತರ ತಂಡದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಚಿಂಚೋಳಿ ಸೂಕ್ಷ್ತ್ರ ಕ್ಷೇತ್ರವಾಗಿ ಮಾರ್ಪಟ್ಟಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ತುಂಬಾ ಜಾಗರೂಕತೆಯಿಂದ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕಾಗಿದೆ ಎಂದರು.
Related Articles
Advertisement
ವೆಚ್ಚ ವೀಕ್ಷಕ ಜೆ. ಆನಂದಕುಮಾರ ಮಾತನಾಡಿ, ಅನುಮತಿವಿಲ್ಲದೆ ಉಪಯೋಗಿಸುವ ವಸ್ತುಗಳ ಮತ್ತು ವಾಹನಗಳ ಬಾಡಿಗೆ ವೆಚ್ಚವನ್ನು ಖರ್ಚು ವೆಚ್ಚದ ಲೆಕ್ಕಕ್ಕೆ ತೆಗೆದುಕೊಳ್ಳುವುದಲ್ಲದೆ ಉಲ್ಲಂಘಿಸದವರ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಹಂತದಲ್ಲಿ ವಿವಿಧ ವಸ್ತುಗಳ ಬಳಕೆಗೆ ದರ ನಿಗದಿಪಡಿಸಿದ್ದು, ಅದರಂತೆ ನಿಖರವಾಗಿ ವೆಚ್ಚದ ಲೆಕ್ಕವನ್ನು ಆಯಾ ಪಕ್ಷ, ಅಭ್ಯರ್ಥಿಗಳ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಸಾರ್ವಜನಿಕ ಸಭೆ-ಸಮಾರಂಭ ಮುಗಿದ ಎರಡು ಗಂಟೆಯಲ್ಲಿ ಕಾರ್ಯಕ್ರಮದ ಆಯೋಜಕರು ಕಾರ್ಯಕ್ರಮದ ಸ್ಥಳದಲ್ಲಿನ ಎಲ್ಲಾ ಪರಿಕರಗಳನ್ನು ಅಲ್ಲಿಂದ ತೆರವುಗೊಳಿಸಬೇಕಾಗುತ್ತದೆ ಎಂದರು.
ಚಿಂಚೋಳಿ ಚುನಾವಣಾಧಿಕಾರಿ ಸೋಮಶೇಖರ್ ಎಸ್.ಜಿ., ಸಹಾಯಕ ಚುನಾವಣಾಧಿಕಾರಿ ಪಂಡಿತ ಬಿರಾದಾರ, ಚಿಂಚೋಳಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಕ್ಷಯ ಸೇರಿದಂತೆ ಚಿಂಚೋಳಿ ಉಪ ಚುನಾವಣೆಗೆ ನೇಮಿಸಲಾಗಿರುವ ವಿವಿಧ ತಂಡಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಚೆಕ್ ಪೋಸ್ಟ್‌ಗಳಿಗೆ ಭೇಟಿಸಭೆ ನಂತರ ಸಾಮಾನ್ಯ ವೀಕ್ಷಕ ಬಿ.ರಾಮರಾವ ಹಾಗೂ ವೆಚ್ಚ ವೀಕ್ಷಕ ಜೆ. ಆನಂದಕುಮಾರ ಅವರು ಕ್ಷೇತ್ರದ ಸುಲೇಪೇಟ್, ನಿಡಗುಂದಾ, ತಡಕಲ್ ಹಾಗೂ ಕಾಳಗಿ ಚೆಕ್ ಪೋಸ್ಟ್‌ಗಳಿಗೆ ಭೇಟಿ ನೀಡಿ ಅಲ್ಲಿ ಎಸ್.ಎಸ್.ಟಿ. ತಂಡಗಳು ನಡೆಸುವ ತಪಾಸಣಾ ಕಾರ್ಯವನ್ನು ವೀಕ್ಷಿಸಿದರು.