Advertisement

ಬಸವಣ್ಣನ ವಚನಗಳೇ ಪ್ರೇರಣೆ

09:58 AM May 08, 2019 | Team Udayavani |

ಕಲಬುರಗಿ: ರಸ್ತೆ, ಚರಂಡಿ, ಬೃಹತ್‌ ಕಟ್ಟಡ, ಮೇಲ್ಸೇತುವೆ ನಿರ್ಮಣವಾದರೆ ಅಭಿವೃದ್ಧಿಯಲ್ಲ, ಬದಲಾಗಿ ಪ್ರತಿಯೊಬ್ಬರು ವ್ಯಕ್ತಿಗತವಾಗಿ ಮೌಲ್ಯಯುತ ಜೀವನ ಸಾಗಿಸಿದರೇ ಅದೇ, ನಿಜವಾದ ಅಭಿವೃದ್ಧಿ. ಇಂತಹ ಮೌಲ್ಯಯುತ ಜೀವನ ನಡೆಸಲು ಬಸವಣ್ಣನವರ ವಚನಗಳೇ ನಮ್ಮೆಲರಿಗೂ ಪ್ರೇರಣೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಹೇಳಿದರು.

Advertisement

ಮಂಗಳವಾರ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಬಸವ ಜಯಂತಿ ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಜಗತ್‌ ವೃತ್ತದಲ್ಲಿ ಆಯೋಜಿಸಲಾಗಿದ್ದ 886ನೇ ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾನವತಾವಾದಿ ಬಸವಣ್ಣನವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ಸಾಗಿದಲ್ಲಿ ಸಮ-ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.

ಜಾತಿ, ಧರ್ಮ, ಮೇಲು-ಕೀಳು ಎನ್ನದೆ ಸರ್ವ ಜನಾಂಗದವರನ್ನು ಸಮನಾಗಿ ಕಂಡು ಮೂಡನಂಭಿಕೆ, ಕಂದಾಚಾರದ ವಿರುದ್ಧ ಹೋರಾಡಿ 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿ ಆಧ್ಯಾತ್ಮಿಕ ನಾಯಕರಾಗಿ ಹೊರಹೊಮ್ಮಿದವರು ಜಗಜ್ಯೋತಿ ಬಸವಣ್ಣನವರು ಎಂದು ಹೇಳಿದರು.

ಮಹಾರಾಷ್ಟ್ರ ಅಕ್ಕಲಕೋಟದ ಉಪನ್ಯಾಸಕ ಡಾ| ಗುರುಲಿಂಗಪ್ಪ ದಬಾಲೆ ವಿಶೇಷ ಉಪನ್ಯಾಸ ನೀಡಿ, ಬುದ್ಧನ ಕರುಣೆ, ಅಂಬೇಡ್ಕರನ ದಲಿತ ಪ್ರಜ್ಞೆ, ಗಾಂಧೀಜಿ ದೇಶಭಕ್ತಿ, ಯೇಸುವಿನ ಅಹಿಂಸೆ, ಒಐಗಂಬರನ ಆಚಾರ ವಿಚಾರದ ಮಾನವೀಯತೆಯ ಆದರ್ಶಗಳ ಸಂಗಮವೆ ವಿಶ್ವಗುರು ಬಸವಣ್ಣನಾಗಿದ್ದಾರೆ ಎಂದರು.

ಶ್ರೀಶೈಲ್ ಸಾರಂಗಮಠದ ಜಗದ್ಗುರು ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ, ಬಸವ ಧರ್ಮ ಬಡವರ, ದಲಿತರ, ಅನ್ಯಾಕ್ಕೊಳಗಾದವರ, ಧ್ವನಿಯಿಲ್ಲದವರ ಧರ್ಮವಾಗಿದೆ. ಬಸವಣ್ಣನವರ ಆಚಾರ, ವಿಚಾರಗಳೇ ನಮ್ಮೆಲ್ಲರಿಗೆ ದಾರಿದೀಪವಾಗಿದೆ ಎಂದರು.

Advertisement

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ರಾಜಾ ಪಿ., ಜಿಲ್ಲಾ ಪೊಲೀಸ್‌ ಅಧೀಕ್ಷಕ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಪಾಲಿಕೆ ಆಯುಕ್ತೆ ಬಿ.ಫೌಜಿಯಾ ತರನ್ನುಮ, ಅಪರ ಜಿಲ್ಲಾಧಿಕಾರಿ ಟಿ. ಯೊಗೇಶ, ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ, ಸಹಾಯಕ ಆಯುಕ್ತ ರಾಹುಲ ಪಾಂಡ್ವೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಬಸವ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ ಗುಡ್ಡಾ, ಕಾರ್ಯಾಧ್ಯಕ್ಷ ಕಲ್ಯಾಣರಾವ ಮೂಲಗೆ, ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ಮುಖಂಡರಾದ ಕಲ್ಯಾಣಪ್ಪ ಪಾಟೀಲ ಮಳಖೇಡ ಸಿದ್ಧರಾಜ ಬಿರಾದಾರ, ಬಿ.ಬಿ. ರಾಂಪೂರೆ ಪಾಲ್ಗೊಂಡಿದ್ದರು.

ಅಖೀಲ ಭಾರತ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ಅರುಣಕುಮಾರ ಪಾಟೀಲ ಸ್ವಾಗತಿಸಿದರು. ಶ್ರೀಶೈಲ ಘೂಳಿ ನಿರೂಪಿಸಿದರು. ಅತಿಥಿ ಗಣ್ಯರು ಜಗತ್‌ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಯುವಕರಿಂದ ರಕ್ತದಾನ ನಡೆಯಿತು.

ಮೆರವಣಿಗೆ: ಬಸವ ಜಯಂತ್ಯುತ್ಸವ ಸಮಿತಿ ವತಿಯಿಂದ ಮಂಗಳವಾರ ಸಂಜೆ ನಗರೇಶ್ವರ ಶಾಲೆಯಿಂದ ಜಗತ್‌ ವೃತ್ತದವರೆಗೂ ಬಸವ ಬ್ರಿಗೇಡ್‌ ವತಿಯಿಂದ ಬಸ್‌ ನಿಲ್ದಾಣದಿಂದ ಹಾಗೂ ಬಸವ ಮಿತ್ರ ಮಂಡಳಿ ವತಿಯಿಂದ ಜಗತ್‌ ವೃತ್ತದ ವರೆಗೂ ಬಸವೇಶ್ವರ ಮೂರ್ತಿ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next