Advertisement

ಸಭೆ-ಸಮಾರಂಭಗಳಿಗೆ ಅನುಮತಿ ಕಡ್ಡಾಯ

01:35 PM Apr 10, 2019 | Team Udayavani |

ಕಲಬುರಗಿ: ಪ್ರಸಕ್ತ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅನುಮತಿಯಿಲ್ಲದೇ ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳು ಬಹಿರಂಗ ಸಭೆ-ಸಮಾರಂಭ, ಕಾರ್ಯಕ್ರಮ, ಮೆರವಣಿಗೆ ಮುಂತಾದವುಗಳನ್ನು ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್‌.
ವೆಂಕಟೇಶಕುಮಾರ ತಿಳಿಸಿದ್ದಾರೆ.

Advertisement

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಅಭ್ಯರ್ಥಿಗಳಿಗೆ ಕೈಪಿಡಿ, ವಹಿ ನಮೂನೆ ಹಾಗೂ ಇತರ ಸೂಚನಾ
ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು. ಅಭ್ಯರ್ಥಿಗಳು ಆಯಾ ವಿಧಾನಸಭೆ ಕ್ಷೇತ್ರದ ಸಹಾಯಕ ಚುನಾವಣಾಧಿ ಕಾರಿಗಳಿಂದ ಬಹಿರಂಗ ಸಭೆ-ಸಮಾರಂಭ, ಮೆರವಣಿಗೆ ಕುರಿತು
ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಕಾರ್ಯಕ್ರಮಗಳು ನಡೆಯುವ ದಿನದಂದು ಸ್ಥಳಕ್ಕೆ ವಿಡಿಯೋ ಕಣ್ಗಾವಲು ತಂಡ ಎಲ್ಲ ವಿಡಿಯೋ ಚಿತ್ರೀಕರಿಸಿ ಚುನಾವಣಾ ಧಿಕಾರಿಗಳಿಗೆ ಸಲ್ಲಿಸಲಿದೆ
ಎಂದು ವಿವರಿಸಿದರು.

ಒಂದು ವೇಳೆ ಅನುಮತಿ ಪಡೆಯದೇ ಸಭೆ-ಸಮಾರಂಭ ಮುಂತಾದವುಗಳನ್ನು ಮಾಡುವ ಅಭ್ಯರ್ಥಿಗಳ ವಿರುದ್ಧ ಪ್ರಜಾಪ್ರಾತಿನಿಧ್ಯ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಪ್ರಚಾರಕ್ಕೆ ಬಳಸುವ ವಾಹನಗಳನ್ನು ಆಯಾ
ಜಿಲ್ಲಾ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಬೇಕು. ಹಾಗಾದಲ್ಲಿ ಇಡೀ ಕ್ಷೇತ್ರದಲ್ಲಿ ಈ ವಾಹನ ಓಡಾಡಬಹುದು. ಒಂದು ವೇಳೆ ಸಹಾಯಕ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದರೆ ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾತ್ರ ವಾಹನ ಸಂಚರಿಸಬೇಕು ಎಂದು ಸ್ಪಷ್ಟಪಡಿಸಿದರು.

ಗುಲಬರ್ಗಾ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ಬ್ರಿಟೀಷಚಂದ್ರ ಬರ್ಮನ್‌ ಮಾತನಾಡಿ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಎಲ್ಲ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಸಹಕರಿಸಬೇಕೆಂದು ಕೋರಿದರು.

ತಾವು ಕಲಬುರಗಿ ನಗರದ ಹಳೆಯ ಐವಾನ್‌ ಶಾಹಿ ಅತಿಥಿ ಗೃಹದ ಕೋಣೆ ಸಂಖ್ಯೆ 4 ರಲ್ಲಿ ತಂಗಿದ್ದು, ಚುನಾವಣೆಗೆ ಸಂಬಂಧಿ ಸಿದಂತೆ
ಯಾವುದೇ ದೂರುಗಳಿದ್ದಲ್ಲಿ ಮೊ. ಸಂಖ್ಯೆ 7338134578 ಅಥವಾ ಪ್ರತಿದಿನ ಸಂಜೆ 6 ರಿಂದ 7 ರವರೆಗೆ ಖುದ್ದಾಗಿ ಭೇಟಿಯಾಗಿ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ನಮೂನೆ-7 (ಪ್ರತಿನಿಧಿಸುವ ಅಭ್ಯರ್ಥಿಗಳ ಪಟ್ಟಿ), ಅಭ್ಯರ್ಥಿಗಳ ಕೈಪಿಡಿ, ಚುನಾವಣಾ ವೆಚ್ಚ ಮೇಲ್ವಿಚಾರಣಾ
ಕೈಪಿಡಿ, ಪೋಲಿಂಗ್‌ ಏಜೆಂಟರ ಕೈಪಿಡಿ, ಕೌಂಟಿಗ್‌ ಏಜೆಂಟರ ಕೈಪಿಡಿ, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಅನುಸರಿಸಬೇಕಾದ ಮಾದರಿ ನೀತಿ ಸಂಹಿತೆ ಮಾರ್ಗಸೂಚಿ, ಖರ್ಚು ವೆಚ್ಚದ ದರಪಟ್ಟಿ, ಸ್ಟ್ರಾಂಗ್‌ ರೂಂ ಮತ್ತು ಕೌಟಿಂಗ್‌ ಕೇಂದ್ರಗಳ
ಮಾಹಿತಿ ಕುರಿತ ಮುಂತಾದ ಕೈಪಿಡಿಗಳನ್ನು ವಿತರಿಸಿದರು.

Advertisement

ಹೆಚ್ಚುವರಿ ಜಿಲ್ಲಾ ಧಿಕಾರಿ ಟಿ.ಯೋಗೇಶ, ಪ್ರೊಬೇಷನರಿ ಐಎಎಸ್‌ ಅ ಧಿಕಾರಿ ಸ್ನೇಹಲ್‌ ಸುಧಾಕರ ಲೋಖಂಡೆ, ವೀಕ್ಷಕರ ಲೈಸನ್‌ ಅಧಿಕಾರಿಗಳು ಮತ್ತಿತರರು ಇದ್ದರು.

ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ತಮ್ಮ ಕರ್ತವ್ಯ. ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಬಾರದು. ಶಾಂತಿ, ಸೌಹಾರ್ದತೆ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಬೇಕು. ಕಾನೂನು ಸುವ್ಯವಸ್ಥೆ ಸೇರಿದಂತೆ ಮತ್ತಿತರ ಯಾವುದೇ ದೂರುಗಳಿದ್ದಲ್ಲಿ ತಮ್ಮ ಮೊ.ಸಂ. 88619 11181ಗೆ ಸಂಪರ್ಕಿಸಿ.
ಡಾ| ರಾಜಶ್ರೀ ಸಿಂಗ್‌, ಪೊಲೀಸ್‌ ವೀಕ್ಷಕ

Advertisement

Udayavani is now on Telegram. Click here to join our channel and stay updated with the latest news.

Next