Advertisement

350 ರೆಮ್‌ಡೆಸಿವಿಯರ್‌ ತಂದ ಸಂಸದ

10:18 PM Apr 29, 2021 | Team Udayavani |

ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ ರೆಮ್‌ಡೆಸಿವಿಯರ್‌ ಇಂಜೆಕ್ಷನ್‌ ಕೊರತೆ ಇರುವ ಹಿನ್ನೆಲೆಯಲ್ಲಿ ಸಂಸದ ಡಾ| ಉಮೇಶ ಜಾಧವ ಸ್ವತಃ ಬೆಂಗಳೂರಿನಿಂದ ವಿಮಾನದ ಮೂಲಕ 350 ಇಂಜೆಕ್ಷನ್‌ ವಯಲ್ಸ್‌ಗಳನ್ನು ತೆಗೆದುಕೊಂಡು ಬಂದರು.

Advertisement

ಮಂಗಳವಾರ ರಾತ್ರಿ ಬೆಂಗಳೂರಿನ ಔಷಧ ನಿಯಂತ್ರಕರ ಕಚೇರಿಯ ವಾರ್‌ ರೂಮ್‌ಗೆ ತೆರಳಿದ ಸಂಸದರು ಇಂಜೆಕ್ಷನ್‌ ಗಳನ್ನು ತುಂಬಿದ ಡಬ್ಬಿ ಪಡೆದುಕೊಂಡು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬುಧವಾರ ಬೆಳಗ್ಗೆ ತಂದರು. ಜಿಲ್ಲೆಯಲ್ಲಿ ರೆಮ್‌ಡೆಸಿವಿಯರ್‌ ಇಂಜೆ ಕ್ಷನ್‌ ದಾಸ್ತಾನು ಖಾಲಿಯಾಗಿರುವ ಕುರಿತು ಸಂಸದ ಡಾ| ಉಮೇಶ ಜಾಧವ ಅವರಿಗೆ ಜಿಲ್ಲೆಯ ಸಹಾಯಕ ಔಷಧ ನಿಯಂತ್ರಕ ಗೋಪಾಲ ಭಂಡಾರಿ ಗಮನಕ್ಕೆ ತಂದಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಜಾಧವ, ತಾವೇ ಬೆಂಗಳೂರಿನ ಕೋವಿಡ್‌ ವಾರ್‌ ರೂಮ್‌ಗೆ ಭೇಟಿ ಕೊಟ್ಟು, ಜಿಲ್ಲೆಯ ಪರಿಸ್ಥಿತಿ ಬಗ್ಗೆ ಅಲ್ಲಿನ ಅಧಿ ಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು. ತಕ್ಷಣ ಜಿಲ್ಲೆಗೆ 350 ವಯಲ್ಸ್‌ ರೆಮ್‌ ಡೆಸಿವಿಯರ್‌ ಇಂಜೆಕ್ಷನ್‌ ಮಂಜೂರು ಮಾಡಿಸಿಕೊಂಡರು.

ಅದನ್ನು ಬುಧ ವಾರ ಬೆಳಗ್ಗೆ ಕಳಿಸಿದ್ದರೆ ಗುರು ವಾರ (ಏ.29) ತಲುಪುವ ಸಾಧ್ಯತೆ ಇತ್ತು. ಆದರೆ, ರೋಗಿಗಳಿಗೆ ತುರ್ತಾಗಿ ಬೇಕಾಗಿರುವುದರಿಂದ ಇಂಜೆಕ್ಷನ್‌ಗಳನ್ನು ತಮ್ಮ ಕಾರಿನಲ್ಲಿ ದಾಸ್ತಾನು ಮಾಡಿಕೊಂಡು ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ನಗರಕ್ಕೆ ತಂದರು.

Advertisement

Udayavani is now on Telegram. Click here to join our channel and stay updated with the latest news.

Next