Advertisement

ಮಹಿಳಾ ವಿಕಾಸದಿಂದ ಮಾತ್ರ ರಾಷ್ಟ್ರ ವಿಕಾಸ

12:09 PM Mar 09, 2020 | Naveen |

ಕಲಬುರಗಿ: ಹೆಣ್ಣು ವಿಕಾಸಹೊಂದಿದ್ದಾಗ ಮಾತ್ರ, ರಾಷ್ಟ್ರ ವಿಕಾಸವಾಗುತ್ತದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ದಾಕ್ಷಾಯಿಣಿ ಅವ್ವ ಹೇಳಿದರು.

Advertisement

ನಗರದ ಶರಣಬಸವ ದಶಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಿಶ್ವ ಮಹಿಳಾ ದಿನಾಚರಣೆಯು ನ್ಯೂಯಾರ್ಕ್‌ ಕ್ಲಾರಾ ಜೆಟ್‌ ಶಿನ್‌ ಎನ್ನುವ ಮಹಿಳಾ ಕಾರ್ಮಿಕಳ ಹೋರಾಟದ ಫಲವಾಗಿದೆ. ಆಕೆಯ ಸಂಘರ್ಷದ ಫಲವಾಗಿ 1975ರಲ್ಲಿ ವಿಶ್ವ ಸಂಸ್ಥೆಯು ಈ ದಿನವನ್ನು ವಿಶ್ವ ಮಹಿಳಾ ದಿನಯೆಂದು ಘೊಷಿಸಿದೆ ಎಂದು ಹೇಳಿದರು.

ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿ ಪತಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಮಾತನಾಡಿ, ಶಿವನು ಅರ್ಧನಾರೀಶ್ವರ ಎಂಬ ಹೆಸರು ಪಡೆದುಕೊಳ್ಳಲು ಸ್ತ್ರೀಶಕ್ತಿ ಕಾರಣವಾಗಿದೆ. ಸ್ತ್ರೀ ಶಕ್ತಿ ಅಮೂಲ್ಯವಾಗಿದೆ. ಸ್ತ್ರೀ ಪ್ರತಿ ಕುಟುಂಬದ ಬೆನ್ನೆಲಬಾಗಿದ್ದಾಳೆ ಎಂದರು.

ಬೀದರನ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಮಾತನಾಡಿ, ಶಿಕ್ಷಣ ಸಾಮ್ರಾಜ್ಯ ನಿರ್ಮಿಸಿ, ಶಿಕ್ಷಣ ದಾಸೋಹ ನೀಡುತ್ತಿರುವ ಈ ಸಂಸ್ಥೆ ಹೆಣ್ಣಿನ ಶಕ್ತಿಯನ್ನು ಬಲಗೊಳಿಸುತ್ತಿದೆ.
12ನೇ ಶತಮಾನದಲ್ಲಿಯೇ ಹೆಣ್ಣಿಗೆ ವಿಮೋಚನೆ ಸಿಕ್ಕಿದೆ. ಆದರೆ ತುಂಬಾ ತಡವಾಗಿ ಬೆಳಕಿಗೆ ಬಂದಿದೆ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಕರ್ತವ್ಯದಲ್ಲಿ ಉತ್ತಮ ಸಾಧನೆ ಮಾಡಿದ ಮಹಿಳೆಯರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಮಾತೋಶ್ರೀ ನೀಲಮ್ಮ ತಾಯಿ ನಿಷ್ಠಿ, ಡಾ| ವಿಲಾಸವತಿ ಖುಬಾ, ಶಾಸಕಿ ಅರುಣಾ ಸಿ. ಪಾಟೀಲ, ಪ್ರಭಾವತಿ ಧರ್ಮಸಿಂಗ್‌, ಶಕುಂತಲಾ ಭೀಮಳ್ಳಿಯವರಿಗೆ “ಸ್ತ್ರೀ ರತ್ನ ಪ್ರಶಸ್ತಿ’  ನೀಡಿ ಗೌರವಿಸಲಾಯಿತು.

Advertisement

ಡಾ| ಅರುಂಧತಿ ಪಾಟೀಲ, ಯಶೋಧಾ ಕಟ್ಕೆ, ಅಕ್ಕಮಹಾದೇವಿ ಎನ್‌. ಭಾರತಿ ಧನ್ನಿ ಅವರಿಗೆ “ವೀರ ಮಹಿಳೆ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು. ಡಾ| ಗಂಗಾಂಬಿಕಾ ಮಲ್ಲಿಕಾರ್ಜುನ ನಿಷ್ಠಿ, ಡಾ| ಶಾಂತಲಾ ಶರಣಬಸಪ್ಪ ನಿಷ್ಠಿ, ಲಿಂಗಮ್ಮ ಪತಂಗೆ, ನಂದಿನಿ ನಿರಂಜನ್‌ ನಿಷ್ಠಿ, ಡಾ| ಉಮಾ ಬಸವರಾಜ ದೇಶಮುಖ, ಶೈಲಜಾ ಪಾಟೀಲರ ಅನುಪಸ್ಥಿತಿಯಲ್ಲಿ ಪಂಚಮ್ಮ ಅವ್ವನವರಿಗೆ ಸ್ತ್ರೀ ಶಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಾ| ನೀಲಾಂಬಿಕಾ ಪೊಲೀಸ್‌ ಪಾಟೀಲ, ಡಾ| ಲಕ್ಷ್ಮೀ ಮಾಕಾರಿಗೆ ಕಾಯಕರತ್ನ ಪ್ರಶಸ್ತಿ ನೀಡಲಾಯಿತು. ಡಾ| ನಾನಾಸಾಹೇಬ್‌ ಹಚ್ಚಡದ್‌ ನಿರೂಪಿಸಿದರು. ಡಾ| ಸೀಮಾ ಪಾಟೀಲ ಮತ್ತು ಪ್ರೊ| ರೇವಯ್ಯ ವಸ್ತ್ರದಮಠ ಹಾಗೂ ಶೋಭಾ ಮತ್ತು ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಪ್ರವಾಸೋದ್ಯಮ ವಿಭಾಗದ ವಿದ್ಯಾರ್ಥಿನಿ ವಜ್ರೇಶ್ವರಿ ಉದ್ಘಾಟನಾ ನೃತ್ಯ ಮಾಡಿದರು. ಡಾ| ಲಕ್ಷ್ಮೀ ಮಾಕಾ ಸ್ವಾಗತಿಸಿದರು. ಡಾ| ವಾಣಿಶ್ರೀ ವಂದಿಸಿದರು. ದೊಡ್ಡಪ್ಪ ನಿಷ್ಠಿ, ಶರಣಬಸವಪ್ಪ ನಿಷ್ಠಿ, ಮಲ್ಲಿಕಾರ್ಜುನ ನಿಷ್ಠಿ, ಡಾ| ಶಿವಲಿಂಗ ನಿಷ್ಠಿ, ಕಡಗಂಚಿ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ| ಸಫೀಯಾ ಪರವೀನ್‌. ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದರು. ಶರಣಬಸವ ವಿವಿಕುಲಪತಿ ಡಾ| ನಿರಂಜನ್‌ ವಿ.ನಿಷ್ಠಿ ಅಧ್ಯಕ್ಷತೆ ವಹಿಸಿದ್ದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿವಿ ಸಮಕುಲಪತಿ, ಡಾ| ವಿಡಿ. ಮೈತ್ರಿ, ಎನ್‌.ಎಸ್‌.ದೇವರಕಲ್‌, ಕುಲಸಚಿವ ಡಾ| ಅನೀಲಕುಮಾರ ಬಿಡವೆ ಡಾ| ಶಶಿಕಲಾ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next