Advertisement

Kalaburagi; ಅಲ್ಟ್ರಾಟೆಕ್ ಐ.ಟಿ.ಎಫ್ ಪುರುಷರ ಮುಖ್ಯ ಪಂದ್ಯಗಳಿಗೆ ಚಾಲನೆ

12:03 PM Nov 28, 2023 | Team Udayavani |

ಕಲಬುರಗಿ: ಒಂಬತ್ತು ದೇಶಗಳ ಆಟಗಾರರು ಪಾಲ್ಗೊಂಡಿರುವ, ಎಂಟು ವರ್ಷಗಳ ನಂತರ ನಡೆಯುತ್ತಿರುವ ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಯುಎಸ್ $25000 ಡಾಲರ್ ಮೊತ್ತದ ಅಲ್ಟ್ರಾಟೆಕ್ ಪ್ರಾಯೋಜಕತ್ವದ ಐ.ಟಿ.ಎಫ್ ಕಲಬುರಗಿ ಓಪನ್-2023 ಮೆನ್ಸ್ ಪುರುಷರ ಕ್ರೀಡಾಕೂಟದ ಮುಖ್ಯ ಪಂದ್ಯಗಳಿಗೆ ಮಂಗಳವಾರ  ಚಾಲನೆ ನೀಡಲಾಯಿತು

Advertisement

ಚಂಪಾ ಕ್ರೀಡಾಂಗಣದ ಟೆನಿಸ್ ಕೋರ್ಟ್ ಒಂದರಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಬಲೂನ್ ಗಳನ್ನು ಹಾರಿಬಿಡುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು. ವಿಧಾನ ಪರಿಷತ್ ಶಾಸಕ ಶಶೀಲ ಜಿ‌. ನಮೋಶಿ, ತಿಪ್ಪಣ್ಣಪ್ಪ ಕಮಕನೂರ, ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಎಂ.ಸುಂದರೇಶ ಬಾಬು, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಆಕಾಶ ಶಂಕರ, ಕೆ.ಎಸ್.ಎಲ್.ಟಿ.ಎ ಟೂರ್ನಾಮೆಂಟ್ ಪೀಟರ್ ವಿಜಯಕುಮಾರ, ಐ.ಟಿ.ಎಫ್ ಸೂಪರವೈಸರ್ ಪಂದ್ಯಾವಳಿಯ ಮೇಲ್ವಿಚಾರಕ ಶ್ರೀಲಂಕಾದ ಧಾರಕ ಎಲ್ಲವಾಲಾ ಅವರು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

ಭಾರತದ ಆದಿಲ್ ಶಾ ಮತ್ತು ಆದಿಲ್ ಕಲ್ಯಾಣಪುರ ನಡುವಿನ ಮೊದಲನೇ ಮುಖ್ಯ ಪಂದ್ಯಕ್ಕೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಟಾಸ್ ಹಾರಿಸಿದರು. ಆದಿಲ್ ಕಲ್ಯಾಣಪುರ ಅವರು ಟಾಸ್ ಗೆದ್ದು ಸರ್ವ್ ಮಾಡುವುದರೊಂದಿಗೆ ಅಂತರಾಷ್ಟ್ರೀಯ ಐ.ಟಿ.ಎಫ್ ಅಧಿಕೃತ ಪಂದ್ಯಾವಳಿಗಳು ಆರಂಭಗೊಂಡಿತು.

ನಂತರ ನಡೆದ ಸರಳ ಸಮಾರಂಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ದೇಶಗಳ ನಡುವೆ ಸೌಹಾರ್ದ ವಾತಾವರಣ ನಿರ್ಮಾಣಕ್ಕೆ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳು ಸಹಕಾರಿಯಾಗಲಿವೆ. ಗೆಲುವು-ಸೋಲು ಕ್ರೀಡೆಯಲ್ಲಿ ಸಹಜ ಎಂದ ಅವರು ಅಚ್ಚುಕಟ್ಟಾಗಿ ಕ್ರೀಡಾಕೂಟ ಆಯೋಜಿಸಿದ ಜಿಲ್ಲಾಡಳಿತದ‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಶಶೀಲ ಜಿ. ನಮೋಶಿ ಮಾತನಾಡಿ, ಸ್ಥಳೀಯ ಕ್ರೀಡಾಪಟುಗಳ ಉತ್ತೇಜನಕ್ಕೆ ಕೆ.ಕೆ.ಆರ್.ಡಿ.ಬಿ. ಮಂಡಳಿ ಅನುದಾನ ನೀಡಿ ಕೋಚ್ ನೇಮಿಸುವ ಮೂಲಕ ಪ್ರದೇಶದಲ್ಲಿ ಟೆನಿಸ್ ಬೆಳವಣಿಗೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

Advertisement

ಕೆ.ಪಿ‌.ಟಿ.ಸಿ.ಎಲ್ ಎಂ.ಡಿ. ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ ಕುಮಾರ ಪಾಂಡೆ ಮಾತನಾಡಿ, ಈ ಹಿಂದೆ ತಾವು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ 2002, 2007ರಲ್ಲಿ ಐ.ಟಿ.ಎಫ್. ಟೂರ್ನಿ ಆಯೋಜಿಸಲಾಗಿತ್ತು. ಕೋರ್ಟ್ ಸೇರಿದಂತೆ ಎಲ್ಲಾ ರೀತಿಯ ಮೂಲಸೌಕರ್ಯ ಇದೀಗ ಮತ್ತಷ್ಟು ಉತ್ತಮಗೊಂಡಿದೆ. ಕ್ರೀಡಾಪಟುಗಳ ಪ್ರತಿಭೆ ಅನಾವರಣಕ್ಕೆ ಪ್ರಾಯೋಜಕತ್ವದ ಅವಶ್ಯವಿರುವ ಕಾರಣ ಸ್ಥಳೀಯ ಸಿಮೆಂಟ್ ಕಂಪನಿಗಳು ಮುಂದೆ ಬರಬೇಕು ಎಂದರು.

ಡಿಸಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಅಂತಾರಾಷ್ಟ್ರೀಯ ಟೂರ್ನಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ವಸತಿ‌ ನಿಲಯದ ಮಕ್ಕಳಿಗೆ 3 ದಿನ‌ ವಿಶೇಷ ತರಬೇತಿ ನೀಡಿ ಬಾಲ್ ಬಾಯ್ಸ್ ಆಗಿ ನಿಯೋಜಿಸಿದೆ. ಪಂದ್ಯ ವೀಕ್ಷಣೆ ಉಚಿತವಾಗಿ ಜಿಲ್ಲೆಯ ಸಾರ್ವಜನಿಕರು, ಶಾಲಾ-ಕಾಲೇಜು ಮಕ್ಕಳು ಬಂದು ಕ್ರೀಡಾಪಟುಗಳನ್ನು ಹುರಿದುಂಬಿಸಬೇಕು ಎಂದರು.

ಕಲಬುರಗಿ‌ ನಗರ ಪೊಲೀಸ್ ಆಯುಕ್ತ ಚೇತನಕುಮಾರ್ ಆರ್. ಮಾತನಾಡಿ ಬೆಂಗಳೂರು ಹೊರತುಪಡಿಸಿದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಹೆಚ್ಚಿನ ಟೆನಿಸ್ ಕ್ರೀಡಾಪಟುಗಳು ಇದ್ದಾರೆ ಎಂದರು.

32 ಜನ ಕ್ರೀಡಾಟಪಟುಗಳು ಕಲಬುರಗಿ ಓಪನ್ ಕಿರೀಟಕ್ಕೆ ತೀವ್ರ ಜಿದ್ದಾಜಿದ್ದಿನ ಆಟ ಇಂದಿನಿಂದ ಆರಂಭವಾಗಿದ್ದು, 8 ಜನ ಕ್ವಾಲಿಪೈ ಪಂದ್ಯವಾಡಿ ಪ್ರಮುಖ ಘಟಕ್ಕೆ ತಲುಪಿದರೆ, 20 ಜನ ಅಟಗಾರರು ಐಟಿಎಫ್ ರ್ಯಾಂಕಿಂಗ್ ಮತ್ತು 4 ಜನ ವೈಲ್ಡ್ ಕಾರ್ಡ್ ಪಡೆದು ಮುಖ್ಯ ಪಂದ್ಯಗಳಿಗೆ ನೇರ ಪ್ರವೇಶ ಪಡೆದಿದ್ದಾರೆ.

ಐಟಿಎಫ್ ಪಂದ್ಯಾವಳಿ ಡಿ.‌3 ರವರೆಗೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next