Advertisement
ನಗರದ ಹೃದಯ ಭಾಗ ಸೂಪರ್ ಮಾರ್ಕೆಟ್ ಮಲ್ಲಿರುವ ಕಚೇರಿ ವಿಶಾಲವಾದ ಜಾಗವಿದೆ. ಹಳೆಯ ಕಟ್ಟಡ ಹಾಗೂ ಸೂಕ್ತ ನಿರ್ವಹಣೆ ಇಲ್ಲದಿದ್ದಕ್ಕೆ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದು ಗಬ್ಬೆದ್ದು ನಾರುತ್ತಿತ್ತು. ಇತ್ತೀಚೆಗೆ ಕಟ್ಟಡ ಮೇಲ್ಚಾವಣಿ ಮಹಿಳಾ ಸಿಬ್ಬಂದಿ ಮೇಲೆ ಕುಸಿದು ಬಿದ್ದಿತ್ತು. ಆದರೆ ಕಳೆದ ಫೆ. 8ರಂದು ಶಿಗ್ಗಾಂವಿಯಿಂದ ವರ್ಗಾವಣೆಯಾಗಿ ಕಲಬುರಗಿ ತಹಶೀಲ್ದಾರರಾಗಿ ಕಾರ್ಯಭಾರ ವಹಿಸಿಕೊಂಡಿರುವ ಪ್ರಕಾಶ ಕುದರಿ ಅವರು ಕಚೇರಿ ಹಾಗೂ ಆವರಣದಲ್ಲಿನ ಕಸದ ರಾಶಿಯ ಸ್ವಚ್ಚತಾ ಕಾರ್ಯಕ್ಕೆ ಮುಂದಾಗಿದ್ದಾರೆ.
Related Articles
Advertisement
ಕಚೇರಿ ಬಾಳಿಕೆ ಕುರಿತಾಗಿ ಲೋಕೋಪಯೋಗಿ ಇಲಾಖೆಯಿಂದ ವರದಿ ಪಡೆದು ನೆಲಸಮ ಮಾಡುವ ಸಂಬಂಧ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲಾಗುವುದು. ನೆಲಸಮಗೊಳಿಸಲು ಪ್ರಾಚ್ಯ ವಸ್ತು ಇಲಾಖೆ ಅನುಮತಿ ನೀಡಲಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕು. ತಹಶಿಲ್ದಾರ ಕಚೇರಿಯ ಮಿನಿ ವಿಧಾನಸೌಧ ಬೇರೆಡೆ ಹೊಸದಾಗಿ ನಿರ್ಮಿಸಲು ಮೂರ್ನಾಲ್ಕು ಕಡೆ ಸ್ಥಳ ಗುರುತಿಸಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಪಕ್ಕದ ಎನ್ ಸಿಸಿ ಕಚೇರಿ ಸ್ಥಳಾಂತರವಾಗುತ್ತಿರುವುದರಿಂದ ಈ ಸ್ಥಳದಲ್ಲೇ ತಹಶಿಲ್ದಾರ ಕಚೇರಿ ನಿರ್ಮಾಣವಾಗಬೇಕು ಇಲ್ಲವೇ ಈಗಿರುವ ತಹಶಿಲ್ದಾರ ಕಚೇರಿ ಆವರಣದಲ್ಲೇ ಕಚೇರಿ ಸ್ಥಾಪನೆಯಾದರೆ ಸೂಕ್ತ ಎಂಬುದು ಸಾರ್ವಜನಿಕರ ಹಾಗೂ ತಮ್ಮ ಅಭಿಪ್ರಾಯವಾಗಿದೆ ಎಂದು ತಹಶಿಲ್ದಾರ ಪ್ರಕಾಶ ಕುದರಿ ಈ ಸಂದರ್ಭದಲ್ಲಿ ತಿಳಿಸಿದರು.