Advertisement

ಅನ್ನ ದಾಸೋಹ ಸೇವಾಕಾರ್ಯ ದೊಡ್ಡದು

11:52 AM May 28, 2020 | Naveen |

ಕಲಬುರಗಿ: ಅನ್ನದಾಸೋಹ ಹಾಗೂ ಆಶ್ರಯ ಕಲ್ಪಿಸುವುದು ದೊಡ್ಡ ಸೇವಾ ಕಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ಹೇಳಿದರು. ಕೋವಿಡ್ ವಾರಿಯರ್ಗೆ ಆಹಾರ ಪೂರೈಸುತ್ತಿರುವ ನಗರದ ಹೊರ ವಲಯದಲ್ಲಿರುವ ತಾಲೂಕಿನ ಖಣದಾಳ ಗ್ರಾಮದ ಶ್ರೀಗುರು ವಿದ್ಯಾಪೀಠ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ, ಅಡುಗೆ ನಿರ್ಮಾಣ ಕಾರ್ಯ ವೀಕ್ಷಿಸಿ, ಜತೆಗೆ ಊಟ ಮಾಡಿ ಅವರು ಮಾತನಾಡಿದರು.

Advertisement

ಈ ಹಿಂದೆ ಬರಗಾಲದ ಸಮಯದಲ್ಲಿ ನಂದಿವನದಲ್ಲಿ ಎತ್ತುಗಳಿಗೆ ಹಾಗೂ ರೈತರಿಗೆ ಆಶ್ರಯ ಕಲ್ಪಿಸಿ, ಉಚಿತ ಮೇವು ಮತ್ತು ಊಟ ನೀಡುವ ಮೂಲಕ ಜತೆಗೆ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರಿನ ಸೌಕರ್ಯ ಹಾಗೂ ಕೋವಿಡ್‌ -19 ವಾರಿಯರ್ಸ್‌ಗೆ ಉಚಿತವಾಗಿ ಆಹಾರ ಪೂರೈಸುತ್ತಿರುವುದು ನಿಜಕ್ಕೂ ಮಾದರಿ ಕಾರ್ಯಗಳಾಗಿವೆ ಎಂದರು.

ವಿದ್ಯಾಪೀಠ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ದಿಗ್ಗಾವಿ ನೇತೃತ್ವದಲ್ಲಿ ವಸತಿ ನಿಲಯದ ಉಪಹಾರ ಗೃಹದಲ್ಲಿ ಸತತವಾಗಿ ಸುಮಾರು ಎರಡು ತಿಂಗಳುಗಳಿಂದ ವೈದ್ಯರು, ನರ್ಸ್‌ಗಳು, ರೋಗಿಗಳಿಗೆ ಮತ್ತು ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಕೋವಿಡ್ ವಾರಿಯರ್ಗಳಿಗಾಗಿ ಆಹಾರ ತಯಾರಿಸಿ ಪೂರೈಸಲಾಗುತ್ತಿದೆ. ಇದಕ್ಕೆ ಜಿಲ್ಲಾಡಳಿತದಿಂದ ಅಭಿನಂದನೆ ಸಲ್ಲಿಸಲಾಗುತ್ತದೆ ಎಂದು ಹೇಳಿದರು.

ಶ್ರೀಗುರುವಿದ್ಯಾ ಪೀಠದ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಡಿಗ್ಗಾವಿ, ಕಾರ್ಯದರ್ಶಿ ಶಿವರಾಜ ಡಿಗ್ಗಾವಿ ಡಿಸಿ ಹಾಗೂ ಸಿಇಒ ಅವರನ್ನು ಸನ್ಮಾನಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ| ರಾಜಾ ಪಿ, ಪ್ರೊಬೇಷನರಿ ಐಎಎಸ್‌ ಅಧಿಕಾರಿ ಗೋಪಾಲ ಕೃಷ್ಣ, ಪವನಕುಮಾರ ವಳಕೇರಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್‌ ಠಾಕೂರ್‌, ಬಸವರಾಜ ದಿಗ್ಗಾವಿ ಅವರ ತಾಯಿ ಪ್ರಮೀಳಾಬಾಯಿ ದಿಗ್ಗಾವಿ, ನಾಗರತ್ನ ಬಿ. ದಿಗ್ಗಾವಿ ಮತ್ತು ಸಂಸ್ಥೆಯ ಸಿಬ್ಬಂದಿ ಮತ್ತಿತರರು ಇದ್ದರು.

ಪತ್ರಿ ನಿತ್ಯ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿಯ ಊಟ ಸೇರಿ ದಿನವೂ ಸುಮಾರು 1600 ಜನರಿಗೆ ಊಟದ ವ್ಯವಸ್ಥೆ ಒದಗಿಸುತ್ತಿರುವ ಬಸವರಾಜ ಡಿಗ್ಗಾವಿ ಹಾಗೂ ಶಿವರಾಜ ಡಿಗ್ಗಾವಿ ಸಹೋದರರು ಸದಾ ಸಮಾಜ ಸೇವೆಯಲ್ಲಿ ನಿರತರಾಗಿತ್ತಾರೆ. ಇದು ಎಲ್ಲರಿಗೂ ಮಾದರಿ.
ಶರತ್‌ ಬಿ.,
ಜಿಲ್ಲಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next