Advertisement
ನಗರದ ಶರಣಬಸವ ವಿಶ್ವವಿದ್ಯಾಲಯದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ, ಕಲಬುರಗಿ-ಬಳ್ಳಾರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನೆ (ಗ್ರಾಮೀಣ) ಹಾಗೂ ಶರಣಬಸವೇಶ್ವರ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮಹಾತ್ಮ ಗಾಂಧೀಜಿಯವರ 150ನೇ ಜಯಂತ್ಯುತ್ಸವ, ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ದಾಸೋಹ ಮನೆಯಲ್ಲಿ ದೊಡ್ಡಪ್ಪ ಅಪ್ಪ ಅವರನ್ನು ಕಂಡ ಗಾಂಧಿಧೀಜಿ ಅವರು ಹೊರಗಡೆಯೇ ತಮ್ಮ ಪಾದರಕ್ಷೆ ಬಿಟ್ಟು ಶರಣರೇ, ಪೂಜ್ಯರೇ ನಾನು ಒಳಗಡೆ ಬರಬಹುದಾ ಎಂದು ಅತಿವಿನಯದಿಂದ ಕೇಳುತ್ತಾರೆ. ಗಾಂಧಿಧೀಜಿ ಅವರ ಈ ನಡೆಗೆ ಮಾರುಹೋಗಿ ಅವರಿದ್ದೆಡೆಗೆ ದೊಡ್ಡಪ್ಪ ಅಪ್ಪ ಅವರು ಹೋಗಿ ಪ್ರೀತಿಯಿಂದ ಅಪ್ಪಿಕೊಂಡಿದ್ದರು ಎಂದು ಆ ಕ್ಷಣವನ್ನು ಸ್ಮರಿಸಿದರು.
ಗಾಂಧೀಜಿ ಭೇಟಿಕೊಟ್ಟ ಈ ಸ್ಥಳದಲ್ಲಿ 150ನೇ ಜಯಂತ್ಯುತ್ಸವ ನಡೆಯುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಕಲಬುರಗಿ ತಾ.ಪಂ ಅಧ್ಯಕ್ಷ ಶಿವರಾಜ ಕಲ್ಲಪ್ಪ ಸಜ್ಜನ್ ಮಾತನಾಡಿ, ಬಯಲು ಮುಕ್ತ ಶೌಚಾಲಯ ಹಾಗೂ ಪ್ಲಾಸ್ಟಿಕ್ ನಿಷೇಧ ಕುರಿತು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಅರಿವು ಮೂಡಿಸಬೇಕು ಎಂದರು.
ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಸಹ ಪ್ರಾಚಾರ್ಯ ಡಾ| ಸುರೇಶಕುಮಾರ ನಂದಗಾಂವ, ಕಲಬುರಗಿ-ಬಳ್ಳಾರಿ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಉಪ ನಿರ್ದೇಶಕ ಡಾ| ಜಿ.ಡಿ. ಹಳ್ಳಿಕ್ಕೇರಿ ಮಾತನಾಡಿದರು. ಜಿ.ಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾವ ಮಲಾಜಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಜಿ.ಬಿ. ಸಿದ್ದೇಶ್ವರಪ್ಪ, ಶರಣ ಬಸವೇಶ್ವರ ಬಿಎಡ್ ಕಾಲೇಜಿನ ಉಪನ್ಯಾಸಕಿ ಗೀತಾ ಹಾಗೂ ವಿದ್ಯಾರ್ಥಿಗಳು ಇದ್ದರು.
ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಧರ್ಮವೀರ ಮಾಣಿಕರಾವ ಗಂಪಾ ಮತ್ತು ಶ್ಯಾಮರಾವ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ಲೊಹಿಯಾ ಕಲಾತಂಡ ಅಸ್ಟಗಿ, ರೇವಣಸಿದ್ದೇಶ್ವರ ಕಲಾ ತಂಡಗಳು ಸ್ವಚ್ಛ ಭಾರತ ಕುರಿತು ಬೀದಿನಾಟಕ, ಹಾಡು, ಡೊಳ್ಳು ಕುಣಿತ ಪ್ರದರ್ಶನ ನೀಡಿದವು.
ರೇಣುಕಮ್ಮ ವಾರದ ನಿರೂಪಿಸಿದರು. ಬೆಂಗಳೂರಿನ ಪಿಐಬಿ ಮಾಧ್ಯಮ ಮತ್ತು ಸಂವಹನ ಅಧಿಕಾರಿ ಪಿ.ಜಿ ಪಾಟೀಲ ಸ್ವಾಗತಿಸಿದರು. ಎನ್. ರಾಮಕೃಷ್ಣ ವಂದಿಸಿದರು.