Advertisement
ಗಣರಾಜ್ಯೋತ್ಸವ ಅಂಗವಾಗಿ ಹಲವೆಡೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಶೇಷವೆಂಬಂತೆ ಯುವಕರು ತಿರಂಗ ಧ್ವಜ ಹಿಡಿದು ನಗರದಾದ್ಯಂತ ಬೈಕ್ ರ್ಯಾಲಿ ನಡೆಸಿ ಗಮನ ಸೆಳೆದರು. 50ಕ್ಕೂ ಅಧಿಕ ಆಟೋ ಚಾಲಕರು ರ‍್ಯಾಲಿ ನಡೆಸಿ ಗಣರಾಜ್ಯೋತ್ಸವವನ್ನು ಸಂಭ್ರಮಿಸಿದರು.
ಡಿಎಚ್‌ಒ ಕಚೇರಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆವರಣದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ವತಿಯಿಂದ ಆಯೋಜಿಸಿದ್ದ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಡಾ| ವಿವೇಕಾನಂದ ರೆಡ್ಡಿ ನೆರವೇರಿಸಿದರು. ಡಾ| ಅವಿನಾಶ ಕಸ್ಕೆ, ಡಾ| ರತ್ನವೀರ, ಸಂತೋಷ ಕುಡಳ್ಳಿ, ಗುಂಡಪ್ಪ ದೊಡ್ಡಮನಿ, ಶೌಖತ್ ಅಲಿ, ಮಂಜುನಾಥ ಕಂಬಾಳಿಮಠ, ಸುರೇಖಾ ಹೇರಲಗಿ, ಅಬ್ದುಲ್ ಜಬ್ಬರ್, ಸುರೇಶ ದೊಡ್ಡಮನಿ, ವಿಶಾಲ ಸಜ್ಜನ್, ಅರ್ಚನಾ ಇದ್ದರು. ಬಿಜೆಪಿ ಕಚೇರಿ: ನಗರದ ಬಿಜೆಪಿ ಕಚೇರಿಯಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ ಧ್ವಜಾರೋಹಣ ಮಾಡಿದರು. ಜಿ.ಪಂ ಅಧ್ಯಕ್ಷೆ ಸುವರ್ಣಾ ಎಚ್. ಮಲಾಜಿ, ಮಾಜಿ ಎಂಎಲ್‌ಸಿ ಶಶೀಲ ನಮೋಶಿ, ವಿಠ್ಠಲ ಜಾಧವ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
Related Articles
Advertisement
ಜೆಡಿಎಸ್ ಕಚೇರಿ: ನಗರದ ಜಾತ್ಯತೀತ ಜನತಾ ದಳ ಪಕ್ಷದ ಕಾರ್ಯಾಲಯದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಧ್ವಜಾರೋಹಣ ಮಾಡಿದರು. ಮುಖಂಡರಾದ ಶಾಮರಾವ್ ಸೂರನ್, ನಾಸೀರ್ ಹುಸೇನ್ ಉಸ್ತಾದ್ ಹಾಗೂ ಪಕ್ಷದ ನಾಯಕರು ಇದ್ದರು.
ಜಿ.ಪಂ ಕಚೇರಿ: ಜಿಲ್ಲಾ ಪಂಚಾಯಿತಿ ಕಾರ್ಯಾಲಯದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಜಿ.ಪಂ ಅಧ್ಯಕ್ಷೆ ಸುವರ್ಣಾ ಎಚ್. ಮಲಾಜಿ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಸಿಇಒ ರಾಜಾ ಪಿ. ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಜರಿದ್ದರು.
ಕೆಬಿಎನ್ ವಿಶ್ವವಿದ್ಯಾಲಯ: ನಗರದ ಖಾಜಾ ಬಂದಾ ನವಾಜ್ ವಿಶ್ವವಿದ್ಯಾಲಯದಲ್ಲಿ ಸಮ ಕುಲಪತಿ ಎಫ್.ಯು. ಅಹ್ಮದ್ ಗಣರಾಜ್ಯೋತ್ಸವ ಧ್ವಜಾರೋಹಣ ಮಾಡಿದರು. ಪ್ರೊ| ಎ.ಎಚ್. ರಾಜಾಸಾಬ, ಕೆಬಿಎನ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಎ. ಲತೀಫ್ ಶರೀಫ್, ಡಾ| ರುಕ್ಷರ್ ಫಾತೀಮಾ, ಮೊಹಮ್ಮದ್ ಅಜಂ ಕಮಲ್, ಶೇಖ್ ಜುನೈದ್ ಸೌದ್ ಹಾಗೂ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮಾರ್ಗದರ್ಶಿ ಸೊಸೈಟಿ: ನಗರದ ಮಾರ್ಗದರ್ಶಿ ಸಂಸ್ಥೆ ವತಿಯಿಂದ ನಗರ ರಾತ್ರಿ, ಹಗಲುವಸತಿ ರಹಿತ ನಿರ್ಗತಿಕರ ತಂಗುದಾನದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಸಂಸ್ಥೆಯ ನಿರ್ದೇಶಕ ಆನಂದರಾಜ, ಶಿವಕುಮಾರ ಹೊಳಕರ್, ರಾಹುಲ್ ಮಾಳಗೆ, ಶ್ರೀನಿವಾಸ ಕುಲಕರ್ಣಿ, ಭೀಮರಾಯ, ಬಸವರಾಜ ಬಿರಾದಾರ, ನಾಗರಾಜ ಇದ್ದರು. ಮಾರ್ಗದರ್ಶಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೆಮ್ಮದಿ ಹಿರಿಯರ ಮನೆ ವೃದ್ಧಾಶ್ರಮದಲ್ಲಿ ಹಿರಿಯ ಜೀವಿಗಳೊಂದಿಗೆ ಗಣರಾಜ್ಯೋತ್ಸವ ಆಚರಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ಸಂಧ್ಯಾರಾಜ್ ಸಾಮ್ಯುವೆಲ್ ಧ್ವಜಾರೋಹಣ ಮಾಡಿದರು. ಯೋಜನಾ ನಿರ್ದೇಶಕಿ ವಿಜಯಲಕ್ಷ್ಮೀ , ಶಿವಕುಮಾರ ಹೊಳಕರ್, ರಾಹುಲ್ ಮಾಳಗೆ ಮತ್ತಿತರರು ಇದ್ದರು.