Advertisement

ಕೋವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಿ

11:50 AM Apr 23, 2020 | Naveen |

ಕ‌ಲಬುರಗಿ: ಕೋವಿಡ್ ಗೆ ದೇಶದಲ್ಲಿಯೇ ಬಲಿಯಾಗಿರುವ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ತರುವಲ್ಲಿ ಜಿಲ್ಲಾಡಳಿತದ ಜತೆಗೆ ಸಾರ್ವಜನಿಕರ ಪಾತ್ರವೂ ಬಹು ಮುಖ್ಯವಾಗಿದ್ದು, ವೈರಸ್‌ ವಿಸ್ತರಿಸದಿರುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಂಸದ ಡಾ.
ಉಮೇಶ ಜಾಧವ್‌, ಶಾಸಕರಾದ ದತ್ತಾತ್ರೇಯ ಪಾಟೀಲ್‌ ರೇವೂರ, ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ್‌ ತಿಳಿಸಿದರು.

Advertisement

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಕಿರಾಣಿ ವಸ್ತುಗಳು ಸಕಾಲಕ್ಕೆ ಸಿಗದೇ ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡು ವಾರದಲ್ಲಿ ನಾಲ್ಕು ದಿನ ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ ಕಿರಾಣಾ ಸಗಟು ಮಳಿಗೆ, ಸುಪರ್‌ ಶಾಪ್‌ ಗಳು ನಾಲ್ಕು ದಿನ ಕಾರ್ಯಾರಂಭಗೊಳ್ಳಲಿವೆ. ದಿನಸಿ ವಸ್ತುಗಳನ್ನು ಹೆಚ್ಚಿಗೆ ದರದಲ್ಲಿ ಮಾರಾಟ ಮಾಡುವಂತಿಲ್ಲ. ಹೆಚ್ಚಿಗೆ ದರದಲ್ಲಿ ಮಾರಾಟವಾಗದಂತೆ ನಿಗಾವಹಿಸಲು ಅಧಿಕಾರಿಗಳ ತಂಡ ಮಳಿಗೆಗಳ ಮೇಲೆ ದಾಳಿ ನಡೆಸಲಿದೆ. ಹೆಚ್ಚಿಗೆ ದರ ಪಡೆದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ ಎಂದು ವಿವರಿಸಿದರು.

ಸಹಾಯವಾಣಿ: ಡಯಾಲಿಸಿಸ್‌ ರೋಗಿಗಳಿಗೆ ಅನುಕೂಲವಾಗಲೆಂದು ಅಂಬ್ಯುಲೆನ್ಸ್‌ ಕಾರ್ಯನಿರ್ವಹಿಸುತಲಿದ್ದು, ರೋಗಿಗಳು ಸಹಾಯವಾಣಿ 08472-278677ಗೆ ದೂರವಾಣಿ ಮಾಡಿದರೆ ಸಾಕು ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತದೆ. ಅದೇ ರೀತಿ ಅಂಗವಿಕಲರಿಗೆ ಅಗತ್ಯ ಔಷಧಿಗಳನ್ನು ಮನೆಗೆ ಮುಟ್ಟಿಸಲಾಗುವುದು. ಜಿಮ್ಸ್‌ನಲ್ಲಿ ದಾಖಲಾಗುವ ರೋಗಿಗಳಿಗೆ ಸರಿಯಾದ ನಿಟ್ಟಿನಲ್ಲಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಬಂದಿವೆ.  ಇನ್ಮುಂದೆ ನಿರ್ಲಕ್ಷ್ಯ ಸಲ್ಲದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಸಂಸದರು, ಶಾಸಕರು ತಿಳಿಸಿದರು.

ವಿದ್ಯುತ್‌ ಸಂಪರ್ಕಕ್ಕೆ ಸೂಚನೆ: ಭೀಮಾ ನದಿ ತೀರದ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಕಡಿತ ಮಾಡಿರುವುದನ್ನು ಹಿಂದಕ್ಕೆ ಪಡೆದು ಪುನರ್‌ ಸಂಪರ್ಕ
ಕಲ್ಪಿಸುವಂತೆ ನಿರ್ದೇಶಿಸಲಾಗಿದೆ. ಹೀಗಾಗಿ ವಿದ್ಯುತ್‌ ಸಂಪರ್ಕ ಸಿಗುವುದಲ್ಲದೇ ನಾರಾಯಣಪುರ ಜಲಾಶಯದಿಂದ ನೀರು ಬಿಡುಗಡೆಯಾಗಲಿದೆ. ಒಟ್ಟಾರೆ ಕೊರೊನಾ ನಿಯಂತ್ರಣ ತರುವಲ್ಲಿ ಜನರು ಜಾತ್ರೆ ರದ್ದುಪಡಿಸುವುದರ ಜತೆಗೆ ಸಾಮಾಜಿಕ ಅಂತರ ಕಾಪಾಡಬೇಕು ಎಂದರು. ಶಾಸಕ ಡಾ. ಅವಿನಾಶ ಜಾಧವ್‌, ದೊಡ್ಡಪ್ಪಗೌಡ ಪಾಟೀಲ್‌ ನರಿಬೋಳ, ಶಿವರಾಜ ಪಾಟೀಲ್‌ ಹಾಜರಿದ್ದರು.

ದಿನಸಿ ವಸ್ತುಗಳನ್ನು ನಿಗದಿತ ದರದಲ್ಲೇ ಮಾರಾಟ ಮಾಡಬೇಕು. ಹೆಚ್ಚಿಗೆ ದರಕ್ಕೆ ಮಾಡಿವುದನ್ನು ದಾಳಿ ಮೂಲಕ ಪತ್ತೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು.
ಡಾ. ಉಮೇಶ ಜಾಧವ್‌,
ಸಂಸದ

Advertisement

ಬಿಜೆಪಿ ಪಕ್ಷದಿಂದ ಹಾಗೂ ಶಾಸಕರೆಲ್ಲರೂ ಬಡವರಿಗೆ ದವಸ ಧಾನ್ಯಗಳನ್ನು ವಿತರಿಸುತ್ತಿದ್ದು, ಈಗಾಗಲೇ ಬಡವರಿಗೆ ಮನೆ ಬಾಗಿಲಿಗೆ ತೆರಳಿ ವಿತರಿಸಲಾಗುತ್ತಿದೆ. ಈಗಾಗಲೇ 50 ಸಾವಿರ ಮಾಸ್ಕ್ ಗಳನ್ನು ವಿತರಿಸಲಾಗಿದೆ. ಜನರು ಆದಷ್ಟು ಲಾಕ್‌ಡೌನ್‌ ನಿಯಮಗಳನ್ನು ಪಾಲಿಸುವ ಮುಖಾಂತರ ಕೋವಿಡ್ ಜಿಲ್ಲೆಯಿಂದ ಹೊಡೆದೊಡಿಸೋಣ.
ಶಿವರಾಜ ಪಾಟೀಲ್‌ ರದ್ದೇವಾಡಗಿ,
ಬಿಜೆಪಿ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next