Advertisement

ಕಲಬುರಗಿ ಆಕಾಶವಾಣಿಗೆ 54ರ ಸಂಭ್ರಮ

04:18 PM Nov 08, 2019 | Naveen |

ಕಲಬುರಗಿ: ಆಕಾಶವಾಣಿ ಕೇಂದ್ರದ 54ನೇ ಸಂಸ್ಥಾಪನಾ ದಿನವನ್ನು ನ. 11ರಂದು ಬೆಳಗ್ಗೆ 10:30 ರಿಂದ 11:30ರ ವರೆಗೆ ವಿಶೇಷ ನೇರ ಫೋನ್‌ ಇನ್‌ ಕಾರ್ಯಕ್ರಮದ ಮೂಲಕ ನಡೆಸಲು ನಿರ್ಧರಿಸಲಾಗಿದೆ ಎಂದು ಕಾರ್ಯಕ್ರಮ ಮುಖ್ಯಸ್ಥ ರಾಜೇಂದ್ರ ಆರ್‌. ಕುಲಕರ್ಣಿ ತಿಳಿಸಿದ್ದಾರೆ.

Advertisement

ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿ ಸುವ ಗಣ್ಯರು ಹಾಗೂ ಕೇಳುಗರ ಮಧ್ಯೆ ಸೇತುಬಂಧವಾಗಿ ಕಾರ್ಯಕ್ರಮ ಮೂಡಿಬರಲಿದೆ. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ, ರಂಗಭೂಮಿ ಕಲಾವಿದೆ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಸವಕಲ್ಯಾಣದ ಪ್ರಾಧ್ಯಾಪಕ ಡಾ| ಸುಜಾತಾ ಜಂಗಮಶೆಟ್ಟಿ, ಬೀದರ ರೈತ ಹಾಗೂ ಸಂಘಟಕ ರವಿ ಶಂಭು, ಕೇಳುಗ ಹಳ್ಳಿಖೇಡ (ಬಿ)ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಕುಪೇಂದ್ರ ಶಾಸ್ತ್ರೀ ಕೃಷ್ಣಮೂರ್ತಿ ಪಾಲ್ಗೊಳಲಿದ್ದಾರೆ. ಕಾರ್ಯಕ್ರಮ ಮುಖ್ಯಸ್ಥ ರಾಜೇಂದ್ರ ಆರ್‌. ಕುಲಕರ್ಣಿ, ನಿರ್ವಾಹಕ ಸೋಮಶೇಖರ ಎಸ್‌. ರುಳಿ ನಡೆಸಿಕೊಡಲಿದ್ದಾರೆ.

1966 ನ. 11ರಂದು ಕೇಂದ್ರ ಸರ್ಕಾರದ ಆಗಿನ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದ ರಾಜ್‌ ಬಹಾದ್ದೂರ್‌ ಆಕಾಶವಾಣಿ ಕೇಂದ್ರವನ್ನು ಲೋಕಾರ್ಪಣೆ ಮಾಡಿದ್ದರು.

ಈ ಸಮಾರಂಭದಲ್ಲಿ ಮೈಸೂರು ಸರ್ಕಾರದ ಲೋಕೋಪಯೋಗಿ ಸಚಿವರಾಗಿದ್ದ ವೀರೇಂದ್ರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಂಬೈ ಆಕಾಶವಾಣಿ ಕೇಂದ್ರದ ನಿರ್ದೇಶಕರಾಗಿದ್ದ ಡಿ.ಎನ್‌. ದಿಕ್ಷೀತ್‌ ಹಾಗೂ ಮುಖ್ಯ ಅಭಿಯಂತರರಾದ ಮೌಲುಂಗೆ ಪಾಲ್ಗೊಂಡಿದ್ದರು. ಬಳಿಕ ಹಿಂದೂಸ್ತಾನಿ ಕಲಾವಿದರಾದ ಮಲ್ಲಿಕಾರ್ಜುನ ಮನ್ಸೂರ ಸಂಗೀತ ಕಾರ್ಯಕ್ರಮ ನೀಡಿದ್ದರು.

53 ವರ್ಷಗಳಿಂದ ವಿವಿಧ ಸಾಧನೆಗಳ ಮಜಲುಗಳನ್ನು ದಾಟಿ ದಾಖಲೆ ಮಾಡಿದ ಕಲಬುರಗಿ ಆಕಾಶವಾಣಿ ಕೇಂದ್ರ ನಿತ್ಯ ನಿರಂತರ ಹೊಸತನದೊಂದಿಗೆ ಶೋತೃ ವರ್ಗದ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ.

Advertisement

ನವೆಂಬರ್‌ ತಿಂಗಳಿನಲ್ಲಿ ರಾಜ್ಯ ಮಟ್ಟದ ಆಕಾಶವಾಣಿ ಸ್ಪರ್ಧೆಯಲ್ಲಿ ನಾಟಕಕ್ಕೆ ಪ್ರಥಮ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಪೋಷಣ್‌ ಅಭಿಯಾನ ವಿಭಾಗದಲ್ಲಿ ದ್ವಿತೀಯ ಬಹುಮಾನ ಲಭಿಸಿರುವುದನ್ನು ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next