Advertisement

ಭೀಮಾ ನದಿ ಪ್ರವಾಹದಲ್ಲಿ ಪಿಎಸ್ಐಯ ನಕಲಿ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ವೈರಲ್ !

12:07 PM Nov 03, 2015 | sudhir |

ಕಲಬುರಗಿ: ಭೀಮಾ ನದಿ ಪ್ರವಾಹದಲ್ಲಿ ಸಿಲುಕಿದ್ದ ಕುರಿ ಮರಿಗಳನ್ನು ರಕ್ಷಣೆ ಮಾಡಿದ್ದೇನೆ ಎಂಬ ರೀತಿಯಲ್ಲಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಪಿಎಸ್ಐಯ ನಕಲಿ ರಕ್ಷಣಾ ಕಾರ್ಯದ ವಿಡಿಯೋ ವೈರಲ್ ಆಗಿದ್ದು, ಇಡೀ ಪೊಲೀಸ್ ಇಲಾಖೆಗೆ ಇರುಸುಮುರುಸು ಉಂಟಾಗುವಂತೆ ಆಗಿದೆ.

ಪಿಎಸ್ಐ ಮಲ್ಲಣ್ಣ ‌ಯಲಗೋಡ ಬೇರೆ ಕಡೆಯಿಂದ ‌ಕುರಿ‌ ಮರಿಗಳನ್ನು ತರಿಸಿ ಅವುಗಳನ್ನು ಎತ್ತಿಹಿಡಿದು, ‌ಇವು ಭೀಮಾ ಪ್ರವಾಹದಲ್ಲಿ ಸಿಲುಕಿದ್ದವು. ಇವುಗಳನ್ನು ತಾನೇ ರಕ್ಷಿಸಿರುವುದಾಗಿ ಗ್ರಾಮಸ್ಥರಿಂದ ಹೇಳಿಸಿ ವಿಡಿಯೋವನ್ನೂ ಮಾಡಿಸಿದ್ದಾರೆ.

Advertisement

ತಾಲೂಕಿನ ಕೂಡಲಗಿ ಗ್ರಾಮ ಪ್ರವಾಹಕ್ಕೆ ಜಲಾವೃತವಾಗಿದ್ದು, ನೀರಿನಲ್ಲಿ ನಾಲ್ವರು ಯುವಕರ ಸಹಾಯದಿಂದ ಥರ್ಮಾಕೋಲ್‌ ಮೇಲೆ ಪಿಎಸ್ಐ ನಿಂತಿದ್ದಾರೆ.‌ ಆರಂಭದಲ್ಲಿ ಸ್ವಲ್ಪವೇ ನೀರಿದ್ದರೂ ಯುವಕರಿಂದ ಥರ್ಮಾಕೋಲ್ ತಳ್ಳಿಸಿಕೊಂಡು ತಾನು ಹೀರೋ ತರಹ ಪೋಸ್ ಕೊಟ್ಟಿದ್ದಾರೆ. ಅಲ್ಲದೇ, ಮುಂದೆ ಸೊಂಟದವರೆಗೆ ನೀರಿರುವಲ್ಲಿಗೆ ಹೋಗಿ ಕುರಿ ಮರಿ ರಕ್ಷಣೆ ಮಾಡಿರುವ ರೀತಿಯ ಪೋಸ್ ನೀಡಿದ್ದಾರೆ.

ಇದನ್ನೂ ಓದಿ :ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಬಿ.ವೈ. ವಿಜಯೇಂದ್ರ

ವಿಚಿತ್ರವೆಂದರೆ ಈ ಪಿಎಸ್ಐ ‘ಹುಚ್ಚಾಟ’ಕ್ಕೆ ಗ್ರಾಮಸ್ಥರೂ ಸಾಥ್ ನೀಡಿದ್ದಾರೆ.‌ ವಿಡಿಯೋವನ್ನು ಅವರೇ ಮಾಡಿ, ಸುರಕ್ಷಿತ ಸ್ಥಳದಲ್ಲಿದ್ದ ಎರಡು ಕುರಿಗಳನ್ನು ತಂದಿದ್ದಾರೆ. ಕುರಿಮರಿ ಇದ್ದರೆ ತರಿಸಿಕೊಡಿ. ಅದನ್ನೇ ರಕ್ಷಣೆ ಮಾಡಿದಂತೆ ಮಾಡಿದ್ದೀನಿ ಎಂದು ತೋರಿಸೋಣ. ವಿಡಿಯೋ ಟಿವಿಯಲ್ಲಿ ಬಿಡೋಣ ಎಂದು ಪಿಎಸ್ಐ ಮಲ್ಲಣ್ಣ ‌ಯಲಗೋಡ ಹೇಳಿದ್ದಾರೆ. ಜತೆಗೆ ಪಿಎಸ್ಐ ಸರ್ ಕುರಿ ಮರಿಗಳ ಜೀವ ಉಳಿಸಿದ್ದಾರೆ ಎಂದು ಗ್ರಾಮಸ್ಥರಿಂದಲೂ ಹೇಳಿಸಿದ್ದಾರೆ. ಇದೆಲ್ಲವೂ ವಿಡಿಯೋ ಮಾಡಿದ್ದು, ಸದ್ಯ ವೈರಲ್ ಆಗಿದೆ.

Advertisement

ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಜನ್ಮದಿನ ಆಚರಿಸಿಕೊಂಡಿದ್ದ ಪಿಎಸ್ಐ ಮಲ್ಲಣ್ಣ ಹಾಲಿನಲ್ಲಿ ಅಭಿಷೇಕ ಮಾಡಿಸಿಕೊಂಡು ಟೀಕೆಗೆ ಗುರಿಯಾಗಿದ್ದರು. ಮೂಲತಃ ‌ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನವರಾದ ಪಿಎಸ್ಐ ಇದಕ್ಕೂ ಮುನ್ನ ಭಾರತೀಯ ‌ಸೇನೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next