Advertisement
ನಾಮಪತ್ರ ಸಲ್ಲಿಸಲು ಹಾಗೂಚುನಾವಣೆ ಪ್ರಚಾರಕ್ಕೆ ವಾರ ಕಾಲ ಮಾತ್ರಸಮಯಾವಕಾಶ ಇರುವುದರಿಂದಚುನಾವಣೆ ಹೇಗೆ ಎದುರಿಸುವುದು?ಮತದಾರರ ಮನ ಗೆಲ್ಲುವುದು ಹೇಗೆಎನ್ನುವ ನಿಟ್ಟಿನಲ್ಲಿ ಪಕ್ಷಗಳ ಮುಖಂಡರಲ್ಲಿಹಾಗೂ ಸ್ಪರ್ಧಾ ಆಕಾಂಕ್ಷಿಗಳಲ್ಲಿ ಆತಂಕ,ಅನಿಶ್ಚಿತತೆ ಕಾಡಲಾರಂಭಿಸಿದೆ.
Related Articles
ಹಲವು ಗ್ರಾಮ ಪಂಚಾಯಿತಿ, ಸ್ಥಳೀಯಸಂಸ್ಥೆಗಳ ಪುರಸಭೆ, ಪಟ್ಟಣ ಪಂಚಾಯತ್‌ಜತೆಗೆ ತಾಲೂಕು ಪಂಚಾಯತ್‌ಹಾಗೂ ಜಿಲ್ಲಾ ಪಂಚಾಯತ್‌ನಲ್ಲಿಬಿಜೆಪಿ ಅಧಿ ಕಾರದ ಚುಕ್ಕಾಣಿ ಹಿಡಿದುಆಡಳಿತ ನಡೆಸಿದೆ. ಆದರೆ ಕಲಬುರಗಿಮಹಾನಗರ ಪಾಲಿಕೆಯಲ್ಲಿ ಮಾತ್ರಕಮಲಪಡೆಗೆ ಆಡಳಿತ ನಡೆಸುವ ಭಾಗ್ಯದೊರಕದಿರುವುದು ಆತ್ಮಾವಲೋಕನಕ್ಕೆದಾರಿ ಮಾಡಿಕೊಟ್ಟಿದೆ.
Advertisement
ಈಚೆಗೆ ನಡೆದ ಬಿಜೆಪಿ ಮಹಾನಗರಕಾರ್ಯಕಾರಿಣಿ ಸಭೆಯಲ್ಲಿ ಪಾಲಿಕೆ ಈ ಸಲಅ ಧಿಕಾರ ಹಿಡಿಯಲೇಬೇಕೆಂಬ ದೃಢನಿರ್ಧಾರ ಮಾಡಲಾಗಿದೆ. ಪಾಲಿಕೆಯಲ್ಲಿಅಧಿ ಕಾರಕ್ಕೆ ಬರುವುದು ಅಷ್ಟು ಸರಳವಲ್ಲಎನ್ನುವುದು ಪ್ರತಿ ಬಿಜೆಪಿ ಮುಖಂಡರಿಗೂಹಾಗೂ ಕಾರ್ಯಕರ್ತರಿಗೂ ತಿಳಿದ ವಿಷಯ.ಆದರೆ ಸುಮ್ಮನೆ ಕೂಡುವಂತಿಲ್ಲ.
ಅಪ್ಪುಗೌಡಗೆ ಅಗ್ನಿ ಪರೀಕ್ಷೆ
ಕ್ಷೇತ್ರ ಬಿಟ್ಟರೆ ಪಕ್ಷಕ್ಕೆ ಅಷ್ಟೇನು ಕೊಡುಗೆ ನೀಡುತ್ತಿಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನುಕಡೆಗಣಿಸಿ ಬೆರಳಣಿಕೆಯಷ್ಟು ತಂಡ ಮಾತ್ರ ಕಟ್ಟಿಕೊಂಡು ಮುನ್ನಡೆಯಲಾಗುತ್ತಿದೆಎನ್ನುವ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಪಾಲಿಕೆಯ 25 ವಾರ್ಡ್‌ಗಳು ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಬರುವುದರಿಂದ ಕಲಬುರಗಿ ದಕ್ಷಿಣ ಮತಕ್ಷೇತ್ರದಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿರುವದತ್ತಾತ್ರೇಯ ಪಾಟೀಲ ರೇವೂರ ಅವರಿಗೆ ಈ ಪಾಲಿಕೆ ಚುನಾವಣೆ ಅಗ್ನಿ ಪರೀಕ್ಷೆಯಾಗಿದೆ.
ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಕಾರ್ಯದರ್ಶಿಯಾಗಿದ್ದಾಗಲೂ ಸಕ್ರಿಯವಾಗಿತೊಡಗಿಸಿಕೊಂಡು ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಲಿಲ್ಲ. ಕೆಕೆಆರ್‌ಡಿಬಿಅಧ್ಯಕ್ಷರಾಗಿಯೂ ವಿಭಾಗ ಮಟ್ಟದಲ್ಲಿ ಪಕ್ಷದ ಸಂಘಟನೆಗೆ ಕ್ರಿಯಾಶೀಲತೆಯಿಂದತೊಡಗಿಸಿಕೊಳ್ಳುತ್ತಿಲ್ಲ ಎನ್ನುವ ಆರೋಪವೂ ಸಚಿವ ಸ್ಥಾನ ಕೈ ತಪ್ಪಲು ಒಂದು ಸಣ್ಣ ಕಾರಣಎನ್ನಲಾಗುತ್ತಿದೆ.
ಆದರೀಗ ತಮ್ಮ ಶಕ್ತಿ ಸಾಬೀತುಪಡಿಸಲು ಹಾಗೂ ಕ್ಷೇತ್ರದಲ್ಲಿ ತಮ್ಮಪ್ರಾಬಲ್ಯ ಕುಗ್ಗಿಲ್ಲ ಎನ್ನುವುದನ್ನು ನಿರೂಪಿಸಲು, ಜತೆಗೆ ಪಕ್ಷದ ವರಿಷ್ಠರಿಗೆ ಫಲಿತಾಂಶದಮೂಲಕ ಉತ್ತರ ನೀಡಬೇಕಾಗಿರುವುದರಿಂದ ಅಪ್ಪುಗೌಡರಿಗೆ ಪಾಲಿಕೆ ಚುನಾವಣೆಸವಾಲಿನ ಪರಿಸ್ಥಿತಿ ನಿರ್ಮಾಣ ಮಾಡಿದೆ. ಇನ್ನುಳಿದಂತೆ ಕಲಬುರಗಿ ಉತ್ತರ ಕ್ಷೇತ್ರದಲ್ಲೇ30 ವಾರ್ಡ್‌ಗಳು ಬರುತ್ತವೆ.
ಇಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ,ಕರ್ನಾಟಕ ನವೀಕರಿಸಬಹುದಾದ ಇಂಧನ ನಿಗಮ-ಮಂಡಳಿ (ಕ್ರೆಡಲ್) ಅಧ್ಯಕ್ಷ ಚಂದುಪಾಟೀಲ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಉತ್ತರದಲ್ಲೂ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಂಡುಬರುವಲ್ಲಿ ಇವರ ಜವಾಬ್ದಾರಿಯೂ ಅಡಗಿದೆ.
ಹಣಮಂತರಾವ ಭೈರಾಮಡಗಿ