Advertisement

ಕಲಬುರಗಿ: ಕನ್ಹಯ್ಯ ಕುಮಾರ್ ಉಪನ್ಯಾಸಕ್ಕೆ ಅನುಮತಿ 

03:29 PM Oct 14, 2019 | Team Udayavani |

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಯುವ ಮುಖಂಡ ಕನ್ಹಯ್ಯ ಕುಮಾರ್ ಉಪನ್ಯಾಸಕ್ಕೆ ಕೊನೆಗೂ ಅನುಮತಿ ನೀಡಲಾಗಿದೆ. ಅ.15 ರಂದು ವಿವಿಯ ಅಂಬೇಡ್ಕರ್ ಅಧ್ಯಯನ ಸಂಸ್ಥೆಯಲ್ಲಿ ಕನ್ಹಯ್ಯ ಕುಮಾರ್ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

Advertisement

ಕನ್ಹಯ್ಯಕುಮಾರ್‌ ಉಪನ್ಯಾಸಕ್ಕೆ ಅನುಮತಿ ನೀಡಿದಕ್ಕೆ ಶ್ರೀ ರಾಮಸೇನೆ ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ಈ ಕುರಿತು ಸೋಮವಾರ ವಿವಿ ಹಂಗಾಮಿ ಕುಲಪತಿ ಪ್ರೊ.ಪರಿಮಳಾ ಅಂಬೇಕರ್‌ ಸಿಂಡಿಕೇಟ್‌ ಸಭೆ ನಡೆಸಿ, ಚರ್ಚಿಸಿ ಕನ್ಹಯ್ಯ ಕುಮಾರ್ ಉಪನ್ಯಾಸಕ್ಕೆ  ಒಪ್ಪಿಗೆ ಸೂಚಿಸಿದರು.

ಕನ್ಹಯ್ಯ ಅವರಿಗೆ ವಿಶ್ವವಿದ್ಯಾಲಯದ ಅಂಬೇಡ್ಕರ್‌ ಅಧ್ಯಯನ ವಿಭಾಗವೇ ಆಹ್ವಾನಿಸಿದ್ದು, ಆಹ್ವಾನ ಪತ್ರಿಕೆ ಸಹ ಮುದ್ರಣವಾಗಿದೆ. ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ . ಅಲ್ಲದೇ, ಕನ್ಹಯ್ಯಕುಮಾರ್ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕೆಂದು ಕುಲಪತಿ ಕಚೇರಿ ಎದುರು ವಿವಿಧ ಮುಖಂಡರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next