Advertisement

ಕಲಬುರಗಿ: ಅತಿವೃಷ್ಟಿ ಸಂತ್ರಸ್ತರಿಗೆ 1.13 ಕೋಟಿ ರೂ. ಮೊತ್ತದ ದಿನಬಳಕೆ ಸಾಮಾಗ್ರಿ ವಿತರಣೆ

06:59 PM Dec 25, 2020 | Mithun PG |

ಕಲಬುರಗಿ: ಕಳೆದ ಅಕ್ಟೋಬರ್ ತಿಂಗಳಲ್ಲಿ ಶತಮಾನದ ಮೇಘಸ್ಪೋಟಕ್ಕೆ ತುತ್ತಾದ ಜಿಲ್ಲೆಯ ಭೀಮಾ ನದಿ ತೀರದ ಸಂತ್ರಸ್ತರಿಗೆ 1.13 ಕೋ ಮೊತ್ತದ ದಿನಬಳಕೆಯ ದವಸ ಧಾನ್ಯ ಹಾಗೂ ಅಗತ್ಯ ಸಾಮಾಗ್ರಿಗಳ ಕಿಟ್ ವಿತರಿಸಲಾಗಿದೆ ಎಂದು ರೋಟರಿ ಕ್ಲಬ್ ಆಫ್ ಗುಲ್ಬರ್ಗ ಮಿಡ್ ಟೌನ್ ಅಧ್ಯಕ್ಷ ರೊ. ಡಾ. ಸುಧಾ ಹಾಲಕಾಯಿ ತಿಳಿಸಿದರು.

Advertisement

ಸಾರ್ವಜನಿಕ ಉದ್ಯಾನವನದಲ್ಲಿರುವ ರೋಟರಿ ಕ್ಲಬ್ ಸಭಾಂಗಣದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ಫೋಸಿಸ್ ಹಾಗೂ ರಾಮಕೃಷ್ಣ ಸೇವಾಶ್ರಮ  ಮತ್ತು ಇತರ ಸಹಾಯದೊಂದಿಗೆ ರೋಟರಿ ಕ್ಲಬ್ ಮುಂದೆ ನಿಂತು ಸಂತ್ರಸ್ತರಿಗೆ ನೇರವಾಗಿ ಅವರ ಬಳಿ ತೆರಳಿ ಸಹಾಯ ಕಲ್ಪಿಸಲಾಗಿದೆ ಎಂದು ವಿವರಣೆ ನೀಡಿದರು.

ಅತಿವೃಷ್ಟಿ ಸಂದರ್ಭದಲ್ಲೇ ಗ್ರಾಮಗಳಿಗೆ ತೆರಳಲು ಕಷ್ಟಸಾಧ್ಯವಿದ್ದರೂ ಹರಸಾಹಸದೊಂದಿಗೆ ತೀವ್ರ ಸಂಕಷ್ಟದಲ್ಲಿದ್ದ 15 ಗ್ರಾಮಗಳ ಸುಮಾರು 2900 ಕುಟುಂಬಗಳಿಗೆ ತಲಾ ನಾಲ್ಕು ಸಾವಿರ ಮೌಲ್ಯದ  ಅಕ್ಕಿ, ತೊಗರಿ ಬೇಳೆ, ಸಕ್ಕರೆ, ಎಣ್ಣೆ, ರವಾ, ಬಟರ್ ಸೇರಿ ಇತರ ಸಾಮಾಗ್ರಿಗಳನ್ನು ಒಳಗೊಂಡ ಕಿಟ್ ವಿತರಿಸಲಾಗಿದೆ. ಇನ್ಫೋಸಿಸ್ ನ ಸುಧಾ ನಾರಾಯಣಮೂರ್ತಿ ಸಾಮಾಗ್ರಿಗಳನ್ನು ಅವರ ತಂಡದೊಂದಿಗೆ ಕಳುಹಿಸಿದ್ದರಿಂದ ಜತೆಗೆ ರಾಮಕೃಷ್ಣ ಸೇವಾಶ್ರಮ ಸ್ವಾಮಿ ಜಪಾನಂದ ಅವರ ಸಹಾಯ, ಸಹಕಾರದೊಂದಿಗೆ, ರೆಡ್ ಕ್ರಾಸ್ ಸಂಸ್ಥೆ ಮತ್ತು ರೊಟರಿ ಕ್ಲಬ್ ಮಿಡ್ ಟೌನ್ ಪದಾಧಿಕಾರಿಗಳು ಮತ್ತು ಸದಸ್ಯರೊಂದಿಗೆ ಪ್ರವಾಹ ಸಂತ್ರಸ್ತರಿಗೆ ಕಿಟ್ ವಿತರಿಸಿದ್ದಲ್ಲದೇ ಇತರ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ: ಭಾರತದ ರೈತ ಪ್ರತಿಭಟನೆ: ಸಮಸ್ಯೆ ಬಗೆಹರಿಸಲು ಮೈಕ್ ಪೊಂಪಿಯೊಗೆ ಪತ್ರ ಬರೆದ ಅಮೆರಿಕನ್ ಸಂಸದರು

ಅತಿವೃಷ್ಟಿ ಸಂತ್ರಸ್ತರಿಗೆ ವಿತರಿಸಲಾದ 1.13 ಕೋ. ರೂ ಮೊತ್ತದಲ್ಲಿ ರೊಟರಿ ಕ್ಲಬ್ ಮಿಡ್ ಟೌನ್ ಕ್ಲಬ್ ದಿಂದ 19.50 ಲಕ್ಷ ರೂ ದೇಣಿಗೆ ಸಂಗ್ರಹವಾಗಿದೆ. ಕ್ಲಬ್ ಸಾಮಾಜಿಕ ಸೇವಾ ಕಾರ್ಯಗಳು ಪ್ರಮಾಣಿಕ ನಿಟ್ಟಿನಲ್ಲಿ ಇರುತ್ತದೆ ಎಂಬ  ಮನೋಬಲ ಹಿನ್ನೆಲೆಯಲ್ಲಿ ಕ್ಲಬ್ ಬೆಳೆಯಲು ಜತೆಗೆ ವಿಶ್ವಾಸದೊಂದಿಗೆ ಹೆಜ್ಜೆ ಇಡಲು ಸಾಧ್ಯವಾಗಿದೆ ಎಂದರು.

Advertisement

ಯಾದಗಿರಿ ಜಿಲ್ಲೆಯ ಹತ್ತಿಕುಣಿಯ 80 ಬಡ ವಿದ್ಯಾರ್ಥಿಗಳಿಗೆ ಸಹಾಯ ಕಲ್ಪಿಸಿರುವುದು, ಸಸಿಗಳ‌ ನೆಡುವಿಕೆ, ಕುಷ್ಟ ರೋಗಿಗಳ ಕಾಲೋನಿಯಲ್ಲಿ ಚಾಪೆ, ಹೊದಿಕೆ, ಕೊಡ, ಬಕೆಟ್ ಸೇರಿದಂತೆ ಇತರ ಸಾಮಾಗ್ರಿಗಳನ್ನು ವಿತರಿಸಿರುವುದು ಸೇರಿ ಹತ್ತಾರು ನಿಟ್ಟಿನ ಸಾಮಾಜಿಕ ಸೇವೆಗಳನ್ನು ರೋಟರಿ ಕ್ಲಬ್ ಮಾಡಿದೆ ಎಂದು ಡಾ. ಸುಧಾ ಹಾಲಕಾಯಿ ತಿಳಿಸಿದರು.

ಇದನ್ನೂ ಓದಿ:  ಜನವರಿಯಲ್ಲಿ ಅಮಿತ್ ಶಾ ರಾಜ್ಯಕ್ಕೆ ಆಗಮನ; ಅಷ್ಟರಲ್ಲಿ ಸಾಕಷ್ಟು ಬದಲಾವಣೆ ಖಂಡಿತಾ: ಯತ್ನಾಳ್

ಕಷ್ಟದಲ್ಲಿ ಇರುವವರು ಇಂತಹ ಸಂಕಷ್ಟ ಕ್ಕೆ ಒಳಗಾಗಿದ್ದೇವೆ ಎಂದು ತಮ್ಮ ಕ್ಲಬ್‌ ಗೆ ತಿಳಿಸಿದರೆ ಸಾಕು ಅವರಿಗೆ ನೆರವು ಬದ್ದತೆ ಹೊಂದಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಕ್ಲಬ್ ನ ಕಾರ್ಯದರ್ಶಿ ಶಿವಚಂದ್ರ ರತ್ನಾಕರ್, ಮೇಘಾ ಶಿವಕುಮಾರ್, ಮುರಳೀಧರ ಸೇರಿದಂತೆ ಮುಂತಾದವರಿದ್ದರು

ಇದನ್ನೂ ಓದಿ:  ಮೋದಿ ಪ್ರಧಾನಿಯಾಗಿರುವವರೆಗೂ ರೈತರ ಜಮೀನು ಸುರಕ್ಷಿತ: ಅಮಿತ್ ಶಾ

Advertisement

Udayavani is now on Telegram. Click here to join our channel and stay updated with the latest news.

Next