ಕಲಬುರಗಿ: ಹಾಡಹಗಲೇ ಗ್ಯಾಂಗ್ ವಾರ್ ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯೊಬ್ಬ ಮಂಗಳವಾರ ತಡರಾತ್ರಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೊಲೆಯಾದ ವಿದ್ಯಾರ್ಥಿ ಇಲ್ಲಿನ ಶರಣಬಸಪ್ಪ ಅಪ್ಪಾ ಮಹಾವಿದ್ಯಾಲಯದಲ್ಲಿ ಓದುತ್ತಿದ್ದ ಮೊಹಮ್ಮದ್ ಮುದ್ದಸೀರ್(19) ಎಂದು ಗುರುತಿಸಲಾಗಿದೆ.
ಮಂಗಳವಾರ ಸಂಜೆ ಛೋಟಾ ರೋಜಾ ಬಡಾವಣೆಯ ಬೌವುಲಿಗಲ್ಲಿಯ ಅಮಿರ್ ಗುಲಶನ್ ಫಂಕ್ಷನ್ ಹಾಲ್ ಹತ್ತಿರ ಆರೋಪಿಗಳು ಮಾರಾಕಾಸ್ತ್ರದಿಂದ ದಾಳಿ ನಡೆಸಿ ಕೊಚ್ಚಿ ಪರಾರಿಯಾಗಿದ್ದರು.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಮುದ್ದಸೀರ್ ನನ್ನು ನಗರದ ಮಣೂರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸತತ ಚಿಕಿತ್ಸೆಯ ಬಳಿಕವೂ ತಡ ರಾತ್ರಿ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Related Articles
ಕೊಲೆ ಮಾಡಿರುವ ಘಟನೆ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿತ್ತು.
ನಗರದಲ್ಲಿ ಹಗಲಿನಲ್ಲಿ ಹತ್ಯೆಗಳು ನಡೆಯುತ್ತಿದ್ದು, ಪೊಲೀಸ್ ಇಲಾಖೆಯ ವೈಫಲ್ಯ ಕಾರಣ,ತಕ್ಷಣ ಕೊಲೆ ಮಾಡಿರುವ ಆರೋಪಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಿಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ನಗರದಲ್ಲಿ ಘಟನೆ ಮರುಕಳಿಸದ ರೀತಿಯಲ್ಲಿ ಕಾನೂನು ವ್ಯವಸ್ಥೆ ಕಾಪಾಡಬೇಕೆಂದು ಮುದ್ದಸೀರ್ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಮತಾಂತರಕ್ಕೆ ಅಮೆಜಾನ್ ನೆರವು; ಆರ್‌ಎಸ್‌ಎಸ್ ಮುಖವಾಣಿ “ಆರ್ಗನೈಸರ್’ ಆರೋಪ