Advertisement

ಶಿಲಾಶಾಸನ ಅಧ್ಯಯನಕ್ಕೆ ಮುಕ್ತ ಅವಕಾಶ ನೀಡಿ: ಬೋದಿ ಧಮ್ಮ

02:28 PM Oct 17, 2021 | Team Udayavani |

ವಾಡಿ: ಚಿತ್ತಾಪುರ ತಾಲೂಕಿನ ಸನ್ನತಿಯ ಶಿಲಾ ಶಾಸನಗಳ ಅಧ್ಯಯನಕ್ಕೆ ಮುಕ್ತಅವಕಾಶ ಕಲ್ಪಿಸುವ ಜತೆಗೆ ಸತ್ಯಾಸತ್ಯತೆ ತೆರೆದಿಡಬೇಕು ಎಂದು ಬೌದ್ಧ ಭಿಕ್ಷುಬೋದಿಧಮ್ಮ ಭಂತೇಜಿ ಸರ್ಕಾರಕ್ಕೆ ಆಗ್ರಹಿಸಿದರು.

Advertisement

ಅಶೋಕ ವಿಜಯದಶಮಿ ನಿಮಿತ್ತ ಪಟ್ಟಣದಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ತರುಣ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಧಮ್ಮ ಉಪದೇಶ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.ಸನ್ನತಿ ಪರಿಸರದಲ್ಲಿ ದೊರೆತಿರುವ ಕ್ರಿ.ಪೂ 3ನೇ ಶತಮಾನಕ್ಕೆ ಸೇರಿದ ಐತಿಹಾಸಿಕ ಬೌದ್ಧ ಸ್ತೂಪ ಸಾಮ್ರಾಟ್‌ ಅಶೋಕನ ಕಾಲದ್ದಾಗಿದೆ. ಇಲ್ಲಿ ದೊರೆತಿರುವ ಬುದ್ಧನಮೂರ್ತಿಗಳ ಮೇಲೆ ಪ್ರಾಣಿಗಳು ಮಲ ಮೂತ್ರ ವಿಸರ್ಜಿಸುತ್ತಿವೆ. ಇದನ್ನು ಕಂಡರೂಈ ಭಾಗದ ಜನರು ಮೌನವಾಗಿದ್ದಾರೆ.

ಅಲ್ಲದೇ ಕೇಂದ್ರ ಪ್ರಾಚ್ಯವಸ್ತು ಇಲಾಖೆ ಬೌದ್ಧಇತಿಹಾಸ ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮೌರ್ಯ ಸಾಮ್ರಾಜ್ಯದ ದೊರೆ ಸಾಮ್ರಾಟ್‌ ಅಶೋಕ ಚಕ್ರವರ್ತಿ ಸನ್ನತಿಯಬುದ್ಧವಿಹಾರದಲ್ಲಿ ಬುದ್ಧನ ಒಂದು ಹಲ್ಲು ತಂದಿಟ್ಟು ಬೌದ್ಧ ಧಮ್ಮದ ಪ್ರಚಾರಕ್ಕೆಮುಂದಾಗಿದ್ದ ಎಂದು ಇತಿಹಾಸ ಹೇಳುತ್ತದೆ. ಹಾಗಾದರೆ ಇಲ್ಲಿ ಇಡಲಾಗಿದ್ದಗೌತಮ ಬುದ್ಧನ ಹಲ್ಲು ಕಧ್ದೋಯ್ದವರು ಯಾರು ಎಂದು ಪ್ರಶ್ನಿಸಿದರು.

ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಅಧ್ಯಕ್ಷತೆ ವಹಿಸಿದ್ದರು.ಅಂಬೇಡ್ಕರ್‌ ತರುಣ ಸಂಘದ ಅಧ್ಯಕ್ಷ ಸಂದೀಪ ಕಟ್ಟಿ, ಬೌದ್ಧ ಸಮಾಜದಖಜಾಂಚಿ ಚಂದ್ರಸೇನ ಮೇನಗಾರ, ಗೊಲ್ಲಾಳಪ್ಪ ಬಡಿಗೇರ, ಮಲ್ಲಿಕಾರ್ಜುನಕಟ್ಟಿ, ಕಿಶೋರಕುಮಾರ ಸಿಂಗೆ, ಅರುಣಕುಮಾರ ಹುಗ್ಗಿ, ಸುರೇಶ ಬನಸೋಡೆ,ವಿಜಯಕುಮಾರ ಸಿಂಗೆ, ಗೌತಮ ಕಟ್ಟಿ, ಬಾಬು ಕಾಂಬಳೆ, ಚಂದ್ರಶೇಖರ ಧನ್ನೇಕರ,ಸುರೇಶ ಹೇರೂರ, ಶರಣಪ್ಪ ವಾಡೇಕರ, ಸಂತೋಷ ಜೋಗೂರ, ಆನಂದ ಕಟ್ಟಿ,ವಿಜಯಕುಮಾರ ಯಲಸತ್ತಿ, ಯಶ್ವಂತ ಧನ್ನೇಕರ ಹಾಗೂ ನೂರಾರು ಬೌದ್ಧಉಪಾಸಕರು ಪಾಲ್ಗೊಂಡಿದ್ದರು. ಸಂತೋಷ ಕೋಮಟೆ ನಿರೂಪಿಸಿ, ವಂದಿಸಿದರು

Advertisement

Udayavani is now on Telegram. Click here to join our channel and stay updated with the latest news.

Next