Advertisement

ಉಕ್ಕಿನಮನುಷ್ಯನಜಯಂತಿ; ಏಕತಾಓಟ

11:11 AM Nov 01, 2019 | |

ಕಲಬುರಗಿ: ದೇಶದ ಮೊದಲ ಉಪ ಪ್ರಧಾನಿ ಹಾಗೂ ಗೃಹ ಸಚಿವ ಸರ್ದಾರ ವಲ್ಲಭಭಾಯಿ ಪಟೇಲ್‌ ಜನ್ಮ ದಿನದ ಅಂಗವಾಗಿ ಗುರುವಾರ ನಗರದಲ್ಲಿ ರಾಷ್ಟ್ರೀಯ ಏಕತಾ ದಿನ ಆಚರಿಸಲಾಯಿತು.

Advertisement

ನಗರದ ತಿಮ್ಮಾಪುರಿ ವೃತ್ತದಲ್ಲಿರುವ ಸರ್ದಾರ ವಲ್ಲಭಭಾಯಿ ಪಟೇಲ್‌ ಪುತ್ಥಳಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು, ಹೋರಾಟಗಾರರು ನಮನ ಸಲ್ಲಿಸಿದರು. ವಿವಿಧ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಏಕತಾ ಓಟ ಹಾಗೂ ಶ್ರಮದಾನ ಕೈಗೊಂಡರು.

ಬೆಳಗ್ಗೆ 6 ಗಂಟೆಗೆ ನಗರ ಪೊಲೀಸ್‌ ಆಯುಕ್ತಾಲಯದ ವತಿಯಿಂದ ನಗರದ ತಿಮ್ಮಾಪುರಿ ವೃತ್ತದಿಂದ ಜಗತ್‌ ವೃತ್ತದ ವರೆಗೆ ಬಹೃತ್‌ ಏಕತಾ ಓಟ ನಡೆಯಿತು. ಜಿಲ್ಲಾಧಿಕಾರಿ ಬಿ. ಶರತ್‌, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಪಿ. ರಾಜಾ, ನಗರ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜು, ಉಪ ಆಯುಕ್ತ ಡಿ. ಕಿಶೋರ್‌ ಬಾಬು, ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ ಹಾಗೂ ಎಸಿಪಿಗಳು, ಇನ್ಸ್‌ಪೆಕ್ಟರ್‌ಗಳು, ಪೊಲೀಸ್‌ ಸಿಬ್ಬಂದಿ, ನಾಗನಹಳ್ಳಿ ಪೊಲೀಸ್‌ ತರಬೇತಿ ಕೇಂದ್ರದ ಪೊಲೀಸ್‌ ಪ್ರಶಿಕ್ಷಣಾರ್ಥಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ನಾಗರಿಕರು ಪಾಲ್ಗೊಂಡಿದ್ದರು.

ಬಿಜೆಪಿಯಿಂದ ಓಟ: ರಾಷ್ಟ್ರೀಯ ಏಕತಾ ದಿನದ ನಿಮಿತ್ತ ನಗರದ ಉತ್ತರ ಮಂಡಲದ ಬಿಜೆಪಿ ವತಿಯಿಂದ ಏಕತಾ ಓಟ ಏರ್ಪಡಿಸಲಾಗಿತ್ತು. ಸಂಸದ ಡಾ| ಉಮೇಶ ಜಾಧವ ಮತ್ತು ಯುವ ಮುಖಂಡ ಚಂದು ಪಾಟೀಲ ಸರ್ದಾರ ವಲ್ಲಭಭಾಯಿ ಪಟೇಲ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಉಕ್ಕಿನ ಮನುಷ್ಯನಿಗೆ ಗೌರವ ಸಲ್ಲಿಸಿದರು.

ನಂತರದ ಗಂಜ್‌ ಪ್ರದೇಶದ ನಗರೇಶ್ವರ ಶಾಲೆಯಲ್ಲಿ ಏಕತಾ ಓಟ ಸಂಸದರು ಚಾಲನೆ ನೀಡಿದರು. ಅಲ್ಲಿಂದ ಕಿರಾಣಾ ಬಜಾರ, ಸೂಪರ್‌ ಮಾರ್ಕೆಟ್‌, ಜಗತ್‌ ವೃತ್ತದ ಮಾರ್ಗವಾಗಿ ಸರ್ದಾರ ವಲ್ಲಭಭಾಯಿ ಪಟೇಲ್‌ ವೃತ್ತದವರೆಗೆ ಓಟ ನಡೆಯಿತು.

Advertisement

ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಉಮೇಶ ಪಾಟೀಲ, ಚನ್ನವೀರ ಲಿಂಗನವಾಡಿ, ಸಿದ್ದಾಜಿ ಪಾಟೀಲ, ರಮಾನಂದ ಉಪಾಧ್ಯಾಯ, ಅಶೋಕ ಮಾನಕರ, ಸಾವಿತ್ರಿ ಕುಳಗೇರಿ, ಸಂಗು ಮನ್ನಳ್ಳಿ, ಶರಣು ಟೆಂಗಳಿ ಹಾಗೂ ಉತ್ತರ ಮಂಡಲದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮುಖಂಡರಿಂದ ನಮನ: ಹೈದ್ರಾಬಾದ ಕರ್ನಾಟಕ ವಿಮೋಚನಾ ಮತ್ತು ಅಭಿವೃದ್ಧಿ ಸಮಿತಿ ಮುಖಂಡರು ಹಾಗೂ ಹೋರಾಟಗಾರರು ಪಟೇಲ್‌ರ ಜನ್ಮದಿನ ಆಚರಿಸಿದರು. ವಿಧಾನ ಪರಿಷತ್‌ನ ಮಾಜಿ ಸದಸ್ಯ ಶಶೀಲ ನಮೋಶಿ, ಹೋರಾಟಗಾರರ ಲಕ್ಷ್ಮಣ ದಸ್ತಿ, ಮಾರುತಿರಾವ್‌ ಡಿ.ಮಾಲೆ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಮುಖಂಡರಾದ ಶಿವರಾಜ ಪಾಟೀಲ, ದತ್ತು ಭಾಸಗಿ, ಲಿಂಗರಾಜ ಸಿರಗಾಪುರ, ಶಿವಲಿಂಗಪ್ಪ ಬಂಡಕ, ಮನಿಷ ಜಾಜು, ಎಂ.ಎಸ್‌. ಪಾಟೀಲ ನರಿಬೋಳ, ಮಂಜುನಾಥ ನಾಲವಾರಕರ್‌ ಮತ್ತಿತರರು ಇದ್ದರು.

ಗಂಜ್‌ನಲ್ಲಿ ಶ್ರಮದಾನ: ನಗರದ ಕೃಷಿ ಉತ್ವನ್ನ ಮಾರುಕಟ್ಟೆ ಸಮಿತಿ ಕಚೇರಿ ಆವರಣದಲ್ಲಿ ಪಟೇಲರ ಜನ್ಮ ದಿನದ ಅಂಗವಾಗಿ ಪ್ಲಾಸ್ಟಿಕ್‌ ನಿಷೇಧ ಜಾಗೃತಿ ಮತ್ತು ಸ್ವಚ್ಛ ಭಾರತ ಅಭಿಯಾನ ಹಮ್ಮಿಕೊಂಡು ಶ್ರಮದಾನ ಮಾಡಲಾಯಿತು.

ಶ್ರಮದಾನಕ್ಕೆ ಎಪಿಎಂಸಿ ಅಧ್ಯಕ್ಷ ಗುರುಬಸಪ್ಪ ಎಸ್‌. ಕಣಕಿ ಚಾಲನೆ ನೀಡಿದರು. ಉಪಾಧ್ಯಕ್ಷ ರಾಜಕುಮಾರ ಕೋಟಿ, ಕಾರ್ಯದರ್ಶಿ ಎಂ.ವಿ.ಶೈಲಜಾ ಹಾಗೂ ವಿವಿಧ ಸಂಘ-ಸಂಘಟನೆಗಳ ಸದಸ್ಯರು ಹಾಗೂ ಎಪಿಎಂಸಿ ಕಚೇರಿಯ ಸಿಬ್ಬಂದಿ ಆವರಣ ಸ್ವಚ್ಛಗೊಳಿಸಿ, ಶ್ರಮದಾನ ಮಾಡಿದರು.

ಕಾಂಗ್ರೆಸ್‌ ಕಚೇರಿ: ನಗರದ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಉಕ್ಕಿನ ಮನುಷ್ಯ ಸರ್ದಾರ ವಲ್ಲಭಭಾಯಿ ಪಟೇಲ ಜಯಂತಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ  ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಠೊಡ, ವಾಣಿಶ್ರೀ ಸಗರಕರ್‌, ಭೀಮರಾವ ತೇಗಲತಿಪ್ಪಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next