Advertisement

ನಾಳೆಯಿಂದ ರಾಷ್ಟ್ರಮಟ್ಟದ ನ್ಯಾಕ್‌ ಸಮ್ಮೇಳನ

12:10 PM Jul 14, 2019 | Naveen |

ಕಲಬುರಗಿ: ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಜುಲೈ 15 ಹಾಗೂ 16ರಂದು ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಳಕ್ಕಾಗಿ ನ್ಯಾಕ್‌ನ ಮುಖ್ಯ ಉದ್ದೇಶ ಕುರಿತು ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

Advertisement

ಸಮ್ಮೇಳನದಲ್ಲಿ ಉನ್ನತ ಶಿಕ್ಷಣದಲ್ಲಿನ ಗುಣಮಟ್ಟದ ಶಿಕ್ಷಣ ಹೆಚ್ಚಳ, ಮೂಲ ಸೌಕರ್ಯಗಳ ಹೆಚ್ಚಳ ಸೇರಿದಂತೆ ಶ್ರೇಣಿ ಹೆಚ್ಚಳ ಕುರಿತು ಚರ್ಚೆಯಾಗಲಿದೆ ಎಂದು ಶರಣಬಸವೇಶ್ವರ ಕಲಾ ಮಹಾ ವಿದ್ಯಾಲಯ ಪ್ರಾಚಾರ್ಯರು ಹಾಗೂ ನ್ಯಾಕ್‌ ಸಮಿತಿ ಸದಸ್ಯರಾಗಿರುವ ಡಾ| ಡಿ.ಟಿ. ಅಂಗಡಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮ್ಮೇಳನದಲ್ಲಿ ರಾಜ್ಯ ಹಾಗೂ ವಿವಿಧ ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಶರಣಬಸವ ವಿವಿ ಕುಲಾಧಿಪತಿ ಡಾ| ಶರಣಬಸವೇಶ್ವರ ಅಪ್ಪ ಮಾರ್ಗದರ್ಶನದಲ್ಲಿ ರೂಪುರೇಷೆ ಹಾಕಲಾಗಿದೆ ಎಂದರು.

ನ್ಯಾಕ್‌ದಿಂದ ‘ಎ’ ಶ್ರೇಣಿ ಮಾನ್ಯತೆ ಪಡೆದಲ್ಲಿ ಆ ಶಿಕ್ಷಣ ಮಹಾ ವಿದ್ಯಾಲಯಕ್ಕೆ ಹಲವು ನಿಟ್ಟಿನಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ತ್ರೀ ಪ್ಲಸ್‌ ಅಂಕ ಪಡೆಯುವುದು ಹೇಗೆ ಹಾಗೂ ಪಡೆಯಲು ಅನುಸರಿಸಬೇಕಾದ ಕ್ರಮಗಳ ಕುರಿತಾಗಿ ಸಮ್ಮೇಳನದಲ್ಲಿ ಆರು ಗೋಷ್ಠಿಗಳು ನಡೆಯಲಿವೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಶರಣಬಸವಪ್ಪ ಅಪ್ಪ ಸಾನ್ನಿಧ್ಯದಲ್ಲಿ ಸಮ್ಮೇಳನ ಉದ್ಘಾಟನೆ ನಡೆಯಲಿದೆ ಎಂದರು.

ಮುಂಬೈನ ಕೇಳ್ಕರ್‌ ಶಿಕ್ಷಣ ಟ್ರಸ್ಟ್‌ ಕಾರ್ಯದರ್ಶಿ ಡಾ| ಎಂ.ಆರ್‌. ಕುರುಪ್‌ ಸಮ್ಮೇಳನದ ಮುಖ್ಯ ಭಾಷಣ ಮಾಡುವರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಗೌರವ ಅತಿಥಿಯಾಗಿ ಆಗಮಿಸುವರು. ತದನಂತರ ನಡೆಯುವ ಸಂಶೋಧನೆಯಿಂದ ಸಮಾಜಕ್ಕೆ ಲಾಭವೇನು ಎನ್ನುವುದರ ಕುರಿತು ಪ್ರಥಮ ಗೋಷ್ಠಿ ನಡೆಯಲಿದೆ. ಕೊಲ್ಲಾಪುರ ಅಜ್ರ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ| ಎಚ್.ವಿ. ದೇಶಪಾಂಡೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಪ್ರಬಂಧ ಮಂಡಿಸುವರು ಎಂದು ತಿಳಿಸಿದರು.

Advertisement

ಪುಸ್ತಕ ಬಿಡುಗಡೆ: ಸಮ್ಮೇಳನದಲ್ಲಿ ನ್ಯಾಕ್‌ಗೆ ಸಂಬಂಧಪಟ್ಟಂತೆ ಉನ್ನತ ಶಿಕ್ಷಣ ನಡೆದು ಬಂದ ದಾರಿ ಕುರಿತಾಗಿ ಹೊರತರಲಾದ ಪುಸ್ತಕ ಬಿಡುಗಡೆಗೊಳಿಸಲಾಗುತ್ತಿದೆ ಎಂದರು.

ಅಂತರಿಕ ಗುಣಾತ್ಮಕ ಹೆಚ್ಚಳ, ಮಹಾ ವಿದ್ಯಾಲಯಗಳ ಮೂಲಸೌಕರ್ಯಗಳ ಹಾಗೂ ಗ್ರಂಥಾಲಯ ಬಳಕೆ ಕುರಿತಾಗಿ ಸೇರಿದಂತೆ ಒಟ್ಟಾರೆ 42 ಪ್ರಬಂಧಗಳು ಮಂಡನೆಯಾಗಲಿದೆ. ಜುಲೈ 16ರಂದು ಸಂಜೆ 4:30ಕ್ಕೆ ಸಮಾರೋಪ ನಡೆಯಲಿದೆ ಎಂದು ತಿಳಿಸಿದರು.

ಐಕ್ಯೂಎಸಿ ಸಂಚಾಲಕ ಡಾ| ಸುರೇಶ ನಂದಗಾಂವ, ನ್ಯಾಕ್‌ ಸಂಚಾಲಕಿ ರೇಣುಕಾ ಎಸ್‌., ಕನ್ನಡ ಪ್ರಾಧ್ಯಾಪಕ ಡಾ| ಶಿವರಾಜ ಶಾಸ್ತ್ರೀ ಹಾಜರಿದ್ದರು.

ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಪಠ್ಯದ ಜತೆಗೆ ಪದವಿಯೊಂದಿಗೆ ಹೊರ ಹೋದ ನಂತರ ವಿದ್ಯಾರ್ಥಿಗಳ ಕೌಶಲ್ಯ ಹೆಚ್ಚಳಕ್ಕಾಗಿ ಪ್ರಸಕ್ತ ವರ್ಷದಿಂದ ಮೂರು ಸರ್ಟಿಫಿಕೇಟ್ ಕೋರ್ಸುಗಳನ್ನು ಪ್ರಾರಂಭಿಸಲಾಗುತ್ತಿದೆ. ಬೇಸಿಕ್‌ ಕಂಪ್ಯೂಟರ್‌, ನ್ಪೋಕನ್‌ ಇಂಗ್ಲಿಷ್‌ ಹಾಗೂ ಟೂರ್‌ ಮತ್ತು ಗೈಡ್‌ ಕುರಿತಾದ ಕೋರ್ಸುಗಳನ್ನು ನಡೆಸಲಾಗುತ್ತಿದೆ.
ಡಾ| ಡಿ.ಟಿ.ಅಂಗಡಿ,
ಪ್ರಾಚಾರ್ಯರು ಶರಣಬಸವೇಶ್ವರ ಮಹಾವಿದ್ಯಾಲಯ

Advertisement

Udayavani is now on Telegram. Click here to join our channel and stay updated with the latest news.

Next