Advertisement

ಕಲಬುರಗಿ: ಎಂಆರ್ ಎಂಸಿ ವಜ್ರಮಹೋತ್ಸವಕ್ಕೆ ರಾಷ್ಟ್ರಪತಿಗಳನ್ನು ಆಹ್ವಾನಿಸಲು ನಿರ್ಧಾರ

03:49 PM Feb 22, 2023 | Team Udayavani |

ಕಲಬುರಗಿ: ಪ್ರತಿಷ್ಠಿತ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯ (ಎಂಆರ್ ಎಂಸಿ)ನ ವಜ್ರಮಹೋತ್ಸವ ಹಾಗೂ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಮಾವೇಶ ಬರುವ ಡಿಸೆಂಬರ್ ತಿಂಗಳಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಹೈದ್ರಾಬಾದ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ತಿಳಿಸಿದರು.

Advertisement

ಮಹಾವಿದ್ಯಾಲಯದಲ್ಲಿಂದು ನಡೆದ ಮಹಾವಿದ್ಯಾಲಯದ ಸಿ ಮತ್ತು ಡಿ ಬ್ಲಾಕ್ ಹೊಸ ಕಟ್ಟಡಗಳ ಅಡಿಗಲ್ಲು ಸಮಾರಂಭ ಉದ್ದೇಶಿಸಿ ಮಾತನಾಡಿದರು. ‌ಮೂರು ದಿನಗಳ ಕಾಲ‌ ಮಹೋತ್ಸವ ಆಚರಿಸಲು ಉದ್ದೇಶಿಸಲಾಗಿದೆ. ಸಮಾರಂಭ ಉದ್ಘಾಟನೆಗೆ ರಾಷ್ಟ್ರ ಪತಿಗಳಾದ ದ್ರೌಪದಿ ಮುರ್ಮು ಅವರನ್ನು ಆವ್ಹಾನಿಸಲಾಗುವುದು. ಮುಂಬರುವ ದಿನಗಳಲ್ಲಿ ಸಂಸ್ಥೆಯಿಂದ ಆಹ್ವಾನ ಸಲ್ಲಿಸಲಾಗುವುದು ಎಂದು ಡಾ. ಬಿಲಗುಂದಿ ವಿವರಣೆ ನೀಡಿದರು.

ಮಹಾವಿದ್ಯಾಲಯದ ಈಗಿನ ಕಟ್ಟಡ 60 ವರ್ಷಗಳಷ್ಟು ಹಳೇಯದಾಗಿದ್ದು, ನವೀಕರಣ ಬದಲು ಹೊಸದಾಗಿ ನಿರ್ಮಾಣ ಸೂಕ್ತ ಎಂಬುದನ್ನು ಮನಗಂಡು ಈಗ ಸಿ ಮತ್ತು ಡಿ ಬ್ಲಾಕ್ ಹೊಸ ಕಟ್ಟಡಗಳನ್ನು ಸುಮಾರು 6 ಕೋ.ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.‌ ವಜ್ರ ಮಹೋತ್ಸವ ಹೊತ್ತಿಗೆ ಈ ಹೊಸ ಕಟ್ಟಡ ಗಳನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಪೂಜ್ಯರಿಂದು ಹೊಸ ಕಟ್ಟಡಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದು, ಕಾಮಗಾರಿ ಬೇಗ ಮುಗಿಯುವ ದೃಢ ವಿಶ್ವಾಸ ಹೊಂದಲಾಗಿದೆ ಎಂದರು.

ತಾವು ಸಂಸ್ಥೆ ಅಧ್ಯಕ್ಷರಾದ ಮೇಲೆ ಆಡಳಿತದಲ್ಲಿ ಪಾರದರ್ಶಕತೆ ತಂದ ಪರಿಣಾಮ ಇಷ್ಟೆಲ್ಲ‌ ಸಾಧನೆಗಳನ್ನು ಮಾಡಲು ಸಾಧ್ಯವಾಗುತ್ತಿದೆ ಎಂದು ಡಾ.‌ಬಿಲಗುಂದಿ ಹೇಳಿದರು.

ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳವರು ಹಾಗೂ ಹಾರಕೂಡದ ಡಾ. ಚೆನ್ನವೀರ ಶಿವಾಚಾರ್ಯರು ಮಹಾವಿದ್ಯಾಲಯದ ಹೊಸ ಸಿ ಮತ್ತು ಡಿ ಬ್ಲಾಕ್ ಗಳ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿದರು.

Advertisement

ಸಂಸ್ಥೆಯ ಕಾರ್ಯದರ್ಶಿ ಡಾ.‌ಜಗನ್ನಾಥ ವಿಜಾಪುರ, ಜಂಟಿ ಕಾರ್ಯದರ್ಶಿ ಮಹಾದೇವಪ್ಪ ರಾಂಪೂರೆ, ಆಡಳಿತ ಮಂಡಳಿ ಸದಸ್ಯ ರಾದ ಡಾ.‌ಶರಣಬಸಪ್ಪ ಕಾಮರೆಡ್ಡಿ, ಡಾ. ಅನೀಲ ಪಟ್ಟಣ, ಬಸವರಾಜ ಖಂಡೇರಾವ್, ಸೋಮನಾಥ ನಿಗ್ಗುಡಗಿ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next