ಕಲಬುರಗಿ: ನಗರದ ವಾರ್ಡ್ ನಂಬರ್ 24 ಸೂಪರ್ ಮಾರ್ಕೆಟ್, ಮೇನ್ ರೋಡ್, ಮತ್ತು ಸೆಂಟ್ರಲ್ ಪೋಸ್ಟ್ ಆಫೀಸ್, ಮಾರ್ಕೆಟ್ ನಗರ ಬಸ್ಸು ನಿಲ್ದಾಣ ಪ್ರದೇಶಗಳಲ್ಲಿ ಮಿಂಚಿನ ಸಂಚಾರ ನಡೆಸಿದ ಲೋಕಾಯುಕ್ತ ಕಲಬುರಗಿ ಎಸ್ ಪಿ. ಜಾನ್ ಅಂಟೋನಿ ಮಹಾನಗರ ಪಾಲಿಕೆ ಅಧಿಕಾರಿಗಳ ಚಳಿ ಬಿಡಿಸಿದ ಪ್ರಸಂಗ ಶುಕ್ರವಾರ (ಆ.02) ಜರುಗಿದೆ.
ಕಲ್ಬುರ್ಗಿ ನಗರದ ಕಸ ಮತ್ತು ಪ್ಲಾಸ್ಟಿಕ್ ರಾಶಿ ರಾಶಿಯಾಗಿ ಬಿದ್ದಿವೆ. ಮಾರ್ಕೆಟ್ ನಲ್ಲಿ ಮಳೆಗಾಲದಲ್ಲಿ ಸಾಕಷ್ಟು ನೈರ್ಮಲ್ಯ ಸಮಸ್ಯೆ ಆಗುತ್ತದೆ. ಸ್ಥಳೀಯರು ಸಾರ್ವಜನಿಕರಿಗೆ ನೀರು ನಿಂತು ವಾಸನೆ ಬರಲ್ಲವೇ? ಏನು ಮಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಮಹಾನಗರ ಪಾಲಿಕೆ ವಲಯ 3 ರ್ನೈರ್ಮಲ್ಯ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ್ ಅವರನ್ನು ಸ್ಥಳದಲ್ಲಿ ಕರೆಯಿಸಿ, ನೀನ್ ಏನು ಮಾಡ್ತಿದ್ದೀಯಾ? ಕಸ ಎಲ್ಲಾ ರಾಶಿ ರಾಶಿ ಬಿದ್ದಿದೆ. ನೀನೆಷ್ಟು ಫೈನ್ ಹಾಕಿದ್ದೀಯಾ. ಪ್ಲಾಸ್ಟಿಕ್ ಬ್ಯಾನ್ ಆಗಿಲ್ಲವೇ? ನೀನೇನ್ ಕೆಲಸ ಮಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದರು.
ಮಲ್ಲಿಕಾರ್ಜುನ್ ಉತ್ತರ ನೀಡುತ್ತಾ, ಕಸ ಎಲ್ಲ ತೆಗೆಸಿದ್ದೀನಿ ಸರ್. ಪ್ಲಾಸ್ಟಿಕ್ ಅಂಗಡಿಗೆ ಹೋಗಿ. ಫೈನ್ ಹಾಕುತ್ತೇನೆ. ಸಂಬಂಧ ಪಟ್ಟವರಿಗೆಲ್ಲರಿಗೂ ನೋಟಿಸ್ ಕೊಡುತ್ತೇನೆ ಸರ್ ಎಂದು ಹೇಳಿದರು.
ಮಾರ್ಕೆಟ್ ನಲ್ಲಿ ರೋಡಿನ ಮೇಲೆ ಕಲ್ಲು, ಸ್ಟೀಲ್ ಗಳು, ಜಲ್ಲಿಗಳು, ಮರಳು ಹಾಕಿದ್ದಾರೆ. ಯಾರಾದ್ರೂ ಸಾರ್ವಜನಿಕರು ಬೈಕ್ ನಿಂದ ಜಾರಿ ಬಿದ್ದರೆ ಹೊಣೆ ಯಾರು ಎಂದು ಲೋಕಾಯುಕ್ತ ಅಂಟೋನಿ ಕೇಳಿದರು.
ನಿನ್ನ ಕೆಲಸ ನೀನು ಚೆನ್ನಾಗಿ ಮಾಡು, ಮಾರ್ಕೆಟ್ ನಲ್ಲಿ ಕಸ ತೆಗಿ ಎಂದು ಹೇಳಿ ಎಸ್ಪಿ ಹೇಳಬೇಕೇನು ನಿಮಗೆ ಕೆಲಸದ ಅರಿವಿಲ್ಲವೇ ಎಂದು ಗುಡುಗಿದರು.