ಕಲಬುರಗಿ: ಪುರಾತತ್ವ ಸಂಗ್ರಹಾಲಯಗಳು, ಪರಂಪರೆ ಇಲಾಖೆ, ಕನ್ನಡ ಕಾನ್ವೆಂಟ್ ಪ್ರೌಢಶಾಲೆ ಓಕಳಿ ವಿದ್ಯಾಮಂದಿರ, ವಿಕಾಸ ಆಂಗ್ಲ ಮಾಧ್ಯಮ ಶಾಲೆ ಓಕಳಿ ವಿದ್ಯಾಮಂದಿರ, ಕರ್ನಾಟಕ ಪಬ್ಲಿಕ್ ಶಾಲೆ (ಸರಕಾರಿ ಪದವಿ ಪೂರ್ವ ಕಾಲೇಜು) ಎಂ.ಬಿ. ನಗರ ಸಂಯುಕ್ತಾಶ್ರಯದಲ್ಲಿ ಗುಬ್ಬಿ ಬಡಾವಣೆ ಗುಂಬಜದಿಂದ ಮಹಾತ್ಮಾ ಬಸವೇಶ್ವರ ಬಡಾವಣೆ ಗುಂಬಜ ವರೆಗೆ ಪ್ರೌಢಶಾಲೆ ಮಕ್ಕಳಿಗೆ ಸ್ಮಾರಕಗಳ ಸಂರಕ್ಷಣೆ ಮಹತ್ವ ಕುರಿತು ಅರಿವು ಮೂಡಿಸುವ ಸಲುವಾಗಿ ಪರಂಪರೆ ನಡಿಗೆ ನಡೆಸಲಾಯಿತು.
ಸರಕಾರಿ ಮಹಿಳಾ ಪದವಿ ಕಾಲೇಜು ಸ್ನಾತಕೋತ್ತರ ಕೇಂದ್ರದ ಇತಿಹಾಸ ವಿಭಾಗದ ಮುಖ್ಯಸ್ಥ ಶಂಭುಲಿಂಗವಾಣಿ, ಕಲಬುರಗಿಯಲ್ಲಿರುವ ಹಲವು ಗುಂಬಜಗಳ ಬಗ್ಗೆ ಉಪನ್ಯಾಸ ನೀಡಿದರು.
ಇಲಾಖೆ ಉಪ ನಿರ್ದೇಶಕರಾದ ಪ್ರಹ್ಲಾದ ಜಿ. ಕಲಬುರಗಿ ಪಾರಂಪರಿಕ ನಗರ ಕುರಿತು ಮಾತನಾಡಿದರು. ಪುರಾತತ್ವ ಸಹಾಯಕ ನಿರ್ದೇಶಕ ಶಿವಪ್ರಕಾಶ, ಗುಂಬಜಗಳ ರಚನೆ, ಮಹತ್ವ ವಿವರಿಸಿದರು.
ಕನ್ನಡ ಕಾನ್ವೆಂಟ್ ಪ್ರೌಢಶಾಲೆ ಓಕಳಿ ವಿದ್ಯಾಮಂದಿರ ದೈಹಿಕ ಶಿಕ್ಷಕ ಬಸವರಾಜ ಎನ್., ವಿಜ್ಞಾನ ಶಿಕ್ಷಕ ಶರಣ ಬಸಪ್ಪಾ ಸಿ., ಹಿಂದಿ ಶಿಕ್ಷಕಿ ಸುಧಾ ಎಚ್., ವಿಕಾಸ ಆಂಗ್ಲ ಮಾಧ್ಯಮ ಶಾಲೆ ಓಕಳಿ ವಿದ್ಯಾಮಂದಿರ ಶಿಕ್ಷಕ ಅನಿಲಕುಮಾರ, ಎಂ.ಬಿ. ನಗರದ ಕರ್ನಾಟಕ ಪಬ್ಲಿಕ್ ಶಾಲೆ (ಸರಕಾರಿ ಪದವಿ ಪೂರ್ವ ಕಾಲೇಜು)ಯ ಶಿಕ್ಷಕರಾದ ಅಮೋಗೆಪ್ಪಾ ಪೂಜಾರಿ , ಶಶಿಕಲಾ ದೊಡ್ಡಮನಿ, ವಿದ್ಯಾವತಿ ಶೆಟ್ಟಿ, ಎಸ್.ಎಸ್. ಶೆಟ್ಟಿ, ಮುಖ್ಯಶಿಕ್ಷಕಿ ಪ್ರತಿಮಾ ಜಿ. ದೇವೂರ, ಪ್ರಾಚಾರ್ಯ ಅರುಣಕುಮಾರ ಪಾಟೀಲ, ಚಿತ್ರಕಲಾವಿದ ನಾರಾಯಣ ಎಂ. ಜೋಶಿ, ಇಲಾಖೆ ಸಿಬ್ಬಂದಿ, ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.