Advertisement

ಶಿಕ್ಷಕ್ಷರು-ಸ್ವಯಂ ಸೇವಕರಿಗೆ ನಾಡಿದ್ದು ತರಬೇತಿ: ತಿಣ್ಣಪ್ಪ

03:20 PM Jan 31, 2020 | Naveen |

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಫೆ.5ರಿಂದ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ನೋಂದಣಿ ಪ್ರತಿನಿಧಿಗಳಿಗೆ ವ್ಯವಸ್ಥಿತ ಸೌಲಭ್ಯ ವಿತರಣೆಗಾಗಿ ಫೆ.2ರಂದು 250 ಎನ್‌ಎಸ್‌ಎಸ್‌ ಸ್ವಯಂ ಸೇವಕರು ಮತ್ತು ಶಿಕ್ಷಕರಿಗೆ ನೋಂದಣಿ ಕುರಿತು ವಿಶೇಷ ತರಬೇತಿ ನೀಡಲಾಗುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯರಾದ ನೋಂದಣಿ ಸಮಿತಿ ಅಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ ತಿಳಿಸಿದರು.

Advertisement

ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ನೋಂದಣಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಫೆ.5ರಂದು ಬೆಳಗ್ಗೆ 6 ಗಂಟೆಗೆ 25 ನೋಂದಣಿ ಕೌಂಟರ್‌ ಗಳನ್ನು ತೆರೆಯಲಾಗುವುದು. ಸಾಹಿತ್ಯ ಸಮ್ಮೇಳನಕ್ಕೆ ನೋಂದಣಿಯಾದ 22252 ಮಂದಿಗೆ ಗುಣಮಟ್ಟದ ಕಿಟ್‌ಗಳನ್ನು ವಿತರಿಸಲಾಗುವುದು, ವಿಶೇಷ ಪ್ರತಿನಿಧಿ ಗಳಿಗೆ 72 ಬ್ರಿಫ್‌ಕೇಸ್‌ ನೀಡಲಾಗುವುದು. ಕಿಟ್‌ ವಿತರಿಸಲು ಮುಂಚಿತವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಫೆ.4ರೊಳಗಾಗಿ ಕಿಟ್‌ ನೀಡಲಾಗುವುದು ಎಂದರು.

ಕೌಂಟರ್‌ಗಳ ಸ್ಥಳ ಪರಿಶೀಲಿಸಿ ನಂತರ ಪ್ರತಿಯೊಂದು ಜಿಲ್ಲೆಯ ಪ್ರತಿನಿಧಿಗಳಿಗೆ ಕಿಟ್‌ ವಿತರಿಸಲು ಕಾರ್ಯದರ್ಶಿ ಮತ್ತು ಸದಸ್ಯರನ್ನು ನೇಮಿಸಲಾಗುತ್ತದೆ. ಪ್ರತಿ ನೋಂದಣಿ ಕೌಂಟರ್‌ಗೆ ಪೊಲೀಸ್‌ ಭದ್ರತೆ ಒದಗಿಸಲಾಗುತ್ತದೆ. ಕಿಟ್‌ ವಿತರಿಸುವ ಸಂದರ್ಭದಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದ ನೀಡಬಾರದು. ವ್ಯವಸ್ಥಿತವಾಗಿ ವಿತರಣೆಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವೀರಭದ್ರ ಸಿಂಪಿ, ನೋಂದಣಿ ಸಮಿತಿ ಕಾರ್ಯಾಧ್ಯಕ್ಷರಾದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ್‌ ಸಂಗಾ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಯುಸೂಫ್‌ ಅಲಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಬನ್ಸಿ ಪವಾರ್‌, ಸರ್ವ ಶಿಕ್ಷಣ ಅಭಿಯಾನ ಇಲಾಖೆ ಯೋಜನಾ ಸಮನ್ವಯಾಧಿಕಾರಿ ವೆಂಕಯ್ಯ ಇನಾಂದಾರ್‌, ಜಿಪಂ ಸದಸ್ಯರಾದ , ಶಿವರಾಜ ಪಾಟೀಲ ರದ್ದೇವಾಡಗಿ, ಶಿವರಾಜ ಅಪ್ಪಾ ಸಾಹೇಬ ಪಾಟೀಲ, ಶಿವರುದ್ರ, ಕಸಾಪ ಪದಾಧಿಕಾರಿಗಳಾದ ದೌಲತರಾಯ ಮಾಲಿಪಾಟೀಲ, ಅಂಬಾಜಿ ಕೌವಲಗಾ, ಡಿ.ಎಂ.ನದಾಫ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next