Advertisement
ಕಡಿಮೆ ಸಮಯ, ಹಲವು ಅಡೆ-ತಡೆಗಳ ನಡುವೆಯೂ ಫೆ.5ರಿಂದ ನಡೆಯುವ ಮೂರು ದಿನಗಳ ಅಕ್ಷರ ಜಾತ್ರೆಯನ್ನು ಅಚ್ಚುಕಟ್ಟಾಗಿ ಸಂಘಟಿಸಲು ಶ್ರಮಿಸಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ನುಡಿ ತೇರು ಎಳೆಯಲು ಆಗಮಿಸುವ ಕನ್ನಡಾಭಿಮಾನಿಗಳಿಗೆ ವಸತಿ ಹಾಗೂ ಸಮ್ಮೇಳನ ಸ್ಥಳಕ್ಕೆ ತೆರಳಲು ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ತೊಡಕು ಉಂಟಾಗದಂತೆ ನೋಡಿಕೊಳ್ಳಲು ಕ್ರಮ ಹಿಸಲಾಗುತ್ತಿದೆ.
ರಾಜ್ಯದ ವಿವಿಧ ಜಿಲ್ಲಾ ಕಸಾಪ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಹಾಗೂ ಪ್ರತಿನಿಧಿಗಳು, 72 ಜನ ಕಲಬುರಗಿ ಜಿಲ್ಲಾ ಕಸಾಪ ಘಟಕ ಮತ್ತು ತಾಲೂಕುಗಳ ಪ್ರತಿನಿಧಿಗಳು, 500 ಪತ್ರಕರ್ತರು ಸೇರಿ 22252 ಜನ ನೋಂದಣಿ ಪ್ರತಿನಿಧಿಗಳೆಂದು ಪರಿಣಿಸಲಾಗಿದೆ. ಎಲ್ಲರಿಗೂ ಸಮ್ಮೇಳನದ ನೆನಪಿನಲ್ಲಿ ಪೆನ್, ಬ್ಯಾಡ್ಜ್ ಮತ್ತು ನೋಟ್‌ಬುಕ್ ಒಳಗೊಂಡ ಗುಣಮಟ್ಟದ ಬ್ಯಾಗ್ ವಿತರಿಸಲಾಗುವುದು ಎಂದು ಎಂದು ನೋಂದಣಿ ಸಮಿತಿ ಕಾರ್ಯಾಧ್ಯಕ್ಷರಾದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ ಸಂಗಾ ತಿಳಿಸಿದ್ದಾರೆ.
Related Articles
Advertisement
ಅತಿಥಿಗಳು ಉಳಿದುಕೊಳ್ಳುವ ಎಲ್ಲ ಕಡೆಗಳಲ್ಲಿ ಅಗತ್ಯ ಸೌಲಭ್ಯಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಶಾಲೆ-ಕಾಲೇಜುಗಳ ಕೊಠಡಿಗಳಲ್ಲಿ 6000 ಜನ, ಕಲ್ಯಾಣ ಮಂಪಟಗಳಲ್ಲಿ 5000 ಮಂದಿ ಹಾಗೂ ವಸತಿ ಗೃಹಗಳಲ್ಲಿ 2000 ಜನರು ಉಳಿದುಕೊಳ್ಳಲು ಅವಕಾಶ ಇದೆ. ಎಲ್ಲ ವಾಸ್ತವ್ಯ ಸ್ಥಳಗಳಲ್ಲಿ ಉಸ್ತುವಾರಿ ಅಧಿಕಾರಿಗಳನ್ನು ನೇಮಿಸಲಾಗುತ್ತದೆ ಎಂದು ಸಮ್ಮೇಳನದ ವಸತಿ ಹಾಗೂ ಸಾರಿಗೆ ಸಮಿತಿಯ ಕಾರ್ಯಾಧ್ಯಕ್ಷರಾದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ರಾಜಾ ಪಿ. ಮಾಹಿತಿ ನೀಡಿದ್ದಾರೆ.
270 ವಾಹನಗಳು: ಸಮ್ಮೇಳನಕ್ಕೆ ಬರುವ ಅತಿಥಿಗಳಿಗಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಲು ಒಟ್ಟಾರೆ 270 ವಿವಿಧ ವಾಹನಗಳನ್ನು ನಿಗದಿ ಮಾಡಲಾಗಿದೆ. 200 ಶಾಲಾ ಬಸ್‌ಗಳು, 150 ಟ್ಯಾಕ್ಸಿ ಕಾರುಗಳು ಹಾಗೂ 20 ಸಾರಿಗೆ ಬಸ್‌ಗಳು ಸೇವೆ ಕಲ್ಪಿಸಲಿವೆ. ಸಮ್ಮೇಳನಕ್ಕಾಗಿ ಟ್ಯಾಕ್ಸಿಯವರು ಕಡಿಮೆ ದರದಲ್ಲಿ ಕಾರುಗಳ ಒದಗಿಸಲು ಒಪ್ಪಿಕೊಂಡಿದ್ದರೆ, ಶಾಲಾ ಬಸ್‌ಗಳನ್ನು ಉಚಿತವಾಗಿ ಶಾಲಾ ಮಂಡಳಿಯವರು ನೀಡಿದ್ದು, ಸಮಿತಿ ವತಿಯಿಂದ ಡೀಸೆಲ್ ಹಾಕಲಾಗುವುದು ಎಂದು ಸಿಇಒ ಡಾ| ರಾಜಾ ಪಿ. ತಿಳಿಸಿದರು.
ರಂಗಪ್ಪ ಗಧಾರ