Advertisement

ನುಡಿ ತೇರಿನ ಪ್ರಚಾರ ರಥಕ್ಕೆ ಚಾಲನೆ

11:37 AM Feb 01, 2020 | Naveen |

ಕಲಬುರಗಿ: ಫೆ.5 ರಿಂದ 7ರ ವರೆಗೆ ನಡೆಯಲಿರುವ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜಿಲ್ಲೆಯಲ್ಲಿ ಅಕ್ಷರ ಜಾತ್ರೆ ಕುರಿತು ಜನಜಾಗೃತಿ ಮೂಡಿಸಲು ಮತ್ತು ನುಡಿ ಸಮ್ಮೇಳನಕ್ಕೆ ಆಹ್ವಾನಿಸುವ ವಿಶೇಷ ವಿನ್ಯಾಸದ ಪ್ರಚಾರ ರಥಕ್ಕೆ ಶಾಸಕರಾದ ಖನೀಜ್‌ ಫಾತಿಮಾ, ಎಂ.ವೈ.ಪಾಟೀಲ, ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಚಾಲನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರಚಾರ ಸಮಿತಿಯಿಂದ ಸಿದ್ಧಪಡಿಸಲಾದ ತಾಯಿ
ಭುವನೇಶ್ವರಿ ಭಾವಚಿತ್ರ ಒಳಗೊಂಡ ಅನುಭವ ಮಂಟಪದ ಮಾದರಿಯ ಈ ಭವ್ಯ ಪ್ರಚಾರ ರಥಕ್ಕೆ ಚಾಲನೆ ನೀಡಿದ ಶಾಸಕದ್ವಯರು ಮತ್ತು ಜಿಲ್ಲಾಧಿಕಾರಿಗಳು ರಥವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಭವ್ಯ ಪ್ರಚಾರ ರಥವು ಜಿಲ್ಲೆಯ ಎಲ್ಲ ತಾಲೂಕಾ ಕೇಂದ್ರಸ್ಥಾನ, ಪ್ರಮುಖ ಹೋಬಳಿ, ಹೆದ್ದಾರಿಗಳಲ್ಲಿ ಸಂಚರಿಸಿ ನುಡಿ ಜಾತ್ರೆಗೆ ಆಹ್ವಾನ ನೀಡಲಿದೆ. ರಥದಲ್ಲಿ ಸಮ್ಮೇಳನದ ಪ್ರಚಾರ ಸಾಮಗ್ರಿಗಳಾದ ಪೋಸ್ಟರ್‌ ಮತ್ತು ಕರಪತ್ರಗಳಿದ್ದು, ಸಿಬ್ಬಂದಿಗಳು ಇದನ್ನು ಪ್ರತಿ ಊರಿನಲ್ಲಿ ಸಾರ್ವಜನಿಕರಿಗೆ ಹಂಚಲಿದ್ದಾರೆ.

ಅಲ್ಲದೇ ನುಡಿ ಜಾತ್ರೆಯ ಪ್ರಚಾರದ ಜಿಂಗಲ್ಸ್‌ ಹಾಡುಗಳು, ಬಾರಿಸು ಕನ್ನಡ ಡಿಂಡಿಮವಾ ಓ ಕರ್ನಾಟಕ ಹೃದಯ ಶಿವ, ನುಡಿ ತೇರ.. ಹೀಗೆ ಕನ್ನಡಾಭಿಮಾನ ಹೆಚ್ಚಿಸುವ ಗೀತೆಗಳನ್ನು ರಥವು ಪ್ರಸಾರ ಮಾಡುತ್ತಾ ಕನ್ನಡಿಗರಲ್ಲಿ ನಾಡಿನ ನೆಲ-ಜಲ ಭಾಷೆ ಬಗ್ಗೆ ಅಭಿಮಾನ ಮೂಡಿಸಲಿದೆ.

ಎಲ್‌ಇಡಿ ವಾಹನಕ್ಕೂ ಚಾಲನೆ: ಇದೇ ವೇಳೆ ನುಡಿ ಜಾತ್ರೆಗೆ ಸ್ವಯಂ ಪ್ರೇರಿತರಾಗಿ ಸೇವೆ ಸಲ್ಲಿಸಲು ತಮ್ಮ ಎಲ್‌ಇಡಿ ವಾಹನದಲ್ಲಿ ಸಮ್ಮೇಳನಕ್ಕೆ ಆಹ್ವಾನಿಸುವ ದೃಶ್ಯ ಜಾಹೀರಾತುಗಳು, ಕನ್ನಡ ಹಾಡುಗಳನ್ನು ಪ್ರಸಾರ ಮಾಡಲು ಮುಂದೆ ಬಂದಿರುವ ಕಲಬುರಗಿ ನಗರದ ಧ್ರುವಾ ಜಾಹೀರಾತು ಸಂಸ್ಥೆಯ ಎಲ್‌ಇಡಿ ಪ್ರಚಾರ ವಾಹನಕ್ಕೂ ಚಾಲನೆ ನೀಡಿದ ಗಣ್ಯರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಿರ್ಮಿಸಿದ “ಬಾರಿಸು
ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವಾ” ದೃಶ್ಯ ಗೀತೆಯನ್ನು ನೋಡಿ ಸಂತಸಪಟ್ಟರು.

Advertisement

ನಾಡು ನುಡಿಗೆ ಉಚಿತ ಸೇವೆ ನೀಡಲು ಬಂದ ಸಂಸ್ಥೆಯ ಪ್ರತಿನಿಧಿ  ಸಂಜಯ ಸುತ್ರಾವೆ ಅವರಿಗೆ ಜಿಲ್ಲಾಧಿಕಾರಿ ಶರತ್‌ ಬಿ. ಅಭಿನಂದನೆ ಸಲ್ಲಿಸಿದರು. ಜಿಲ್ಲಾ ಪಂಚಾಯತ್‌ ಸದಸ್ಯ ಶಿವರಾಜ ರದ್ದೆವಾಡಗಿ, ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವೀರಭದ್ರ ಸಿಂಪಿ, ಪ್ರಚಾರ ಸಮಿತಿ ಕಾರ್ಯಧ್ಯಕ್ಷರಾದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರವಿರಾಜ ಹೆಚ್‌ .ಜಿ., ಡಿಡಿಎಲ್‌ಆರ್‌ ಉಪನಿರ್ದೇಶಕ ಶಂಕರ ಖಾದಿ, ಜಿಲ್ಲಾ ಬಿಸಿಎಂ ಅಧಿಕಾರಿ ರಮೇಶ ಸಂಗಾ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next