ಕಲಬುರಗಿ: ಕಮಲಾಪುರ ತಾಲೂಕಿನ ದಿನಸಿ ತಾಂಡಾದಲ್ಲಿ ಶುಕ್ರವಾರ ತಡರಾತ್ರಿ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಮಾರುತಿ ದೇವಲಾ ಜಾಧವ್ (45), ಪತ್ನಿ ಶಾರದಾಬಾಯಿ (35) ಎಂಬುವವರೇ ಕೊಲೆಯಾದ ದಂಪತಿ. ದುಷ್ಕರ್ಮಿಗಳು ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಮೃತ ದಂಪತಿಗೆ ಆರು ಜನ ಪುತ್ರಿಯರು, ಓರ್ವ ಪುತ್ರನಿದ್ದು, ಕೆಲ ದಿನಗಳ ಹಿಂದೆ ಒಬ್ಬ ಮಗಳೊಂದಿಗೆ ಯುವಕನೋರ್ವ ಅನುಚಿತವಾಗಿ ವರ್ತಿಸಿದ್ದ. ಈ ಬಗ್ಗೆ ಯುವಕನ ವಿರುದ್ಧ ಮಾರುತಿ ದೇವಲಾ ಪೊಲೀಸರಿಗೆ ದೂರು ಸಹ ನೀಡಿದ್ದರು ಎನ್ನಲಾಗಿದೆ. ಇದೇ ದ್ವೇಷದಿಂದ ತಂದೆ-ತಾಯಿ ಇಬ್ಬರನ್ನೂ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ:ಹಳೇ ವೈಷಮ್ಯದ ಹಿನ್ನಲೆ: ಮಂಡ್ಯದಲ್ಲಿ ಯುವಕನ ಕೊಚ್ಚಿ ಕೊಲೆ
ಸ್ಥಳಕ್ಕೆ ಕಮಲಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.