Advertisement
ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆ ಕಲ್ಯಾಣ ಕರ್ನಾಟಕದ 800ಕ್ಕೂ ಹೆಚ್ಚು ಶಾಲೆಗಳಲ್ಲಿ ಜಾರಿಗೆ ತರುತ್ತಿರುವುದು ನಮಗೆ ಗೊತ್ತಿಲ್ಲ. ಅದೂ ಅಲ್ಲದೆ ಬಹುತೇಕ ಶಾಸಕರಿಗೂ ಈ ವಿಷಯ ತಿಳಿದಿಲ್ಲ ಎಂದು ಅವರು, ಶಿಕ್ಷಣ ಇಲಾಖೆ ಮತ್ತು ಕೆಕೆಆರ್‌ಡಿಬಿ ಸಂಯುಕ್ತವಾಗಿ “ಅಕ್ಷರ ಆವಿಷ್ಕಾರ”ವನ್ನು ಜಾರಿಗೆ ತರುತ್ತಿರುವುದರ ಹಿಂದಿನ ಹಕೀಕತ್ತು ಅರ್ಥವಾಗಿಲ್ಲ ಎಂದರು.
Related Articles
Advertisement
ಈ ಯೋಜನೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಇಂದ ಅನುದಾನ ಬಾಳಕೆ ಮಾಡಲಾಗುತ್ತಿದೆ ಆದರೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಶಿಕ್ಷಣ ಇಲಾಖೆಯಿಂದ ನೇರವಾಗಿ ಹಣ ನೀಡಲಾಗುತ್ತಿದೆ. ಇದು ತಾರತಮ್ಯವಲ್ಲವೇ ಇದೇ ಹಣವನ್ನ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಶಿಕ್ಷಣ ಗುಣಮಟ್ಟವನ್ನು ಎತ್ತರಿಸಲು ಮತ್ತು ಮೆಟ್ರಿಕ್ ಫಲಿತಾಂಶಗಳನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಬಳಕೆ ಮಾಡಿದರೆ ಚೆನ್ನಾಗಿತ್ತು ಎಂದು ಸಲಹೆ ನೀಡಿದರು.
ಇಡಿ ದೇಶದಲ್ಲಿ ಪೆಟ್ರೋಲ್ ಡಿಸೆಲ್ ಬೆಲೆ ಏರಿಕೆ ಆದಾಗ ಚರ್ಚೆ ಆಗಿಲ್ಲ. ಮೋದಿ ಸರ್ಕಾರದ ಬೆಲೆ ಏರಿಕೆ ಬಗ್ಗೆಯೂ ಕೂಡ ಮಾತಾಡ್ಬೇಕು ಅಲ್ವಾ…? ರಾಜ್ಯ ಸರ್ಕಾರ ಪೆಟ್ರೋಲ್, ಡಿಸೇಲ್ ದರ ಏರಿಕೆ ವಿಚಾರ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡುತ್ತೇನೆ ಎಂದರು.
ಕೇಂದ್ರ ಸರ್ಕಾರ ರೈತರಿಂದ ಸರ್ಕಾರದಿಂದ ವಿಮೆ ಕಟ್ಟಿಸಿಕೊಂಡು ಅದಾನಿ ಕಂಪೆನಿ ಲೂಟಿ ಮಾಡ್ತಿದ್ದಾರೆ. ಬೆಳೆ ವಿಮೆ ಕಂಪೆನಿಗಳು ಮನಸ್ಸಿಗೆ ಬಂದ ಹಾಗೆ ಕೊಡ್ತಿದ್ದವು. ಬೆಳೆ ವಿಮೆ ಸಂಬಂಧಿಸಿದಂತೆ ಕಂದಾಯ ಅಧಿಕಾರಿಗಳ ಜೊತೆ ಮೀಟಿಂಗ್ ಮಾಡಿದ್ದೆ. ಹಾಗಾಗಿ ಈ ಬಾರಿ ಆಳಂದ ತಾಲ್ಲೂಕಿನ ರೈತರಿಗೆ ಅತಿ ಹೆಚ್ಚು ವಿಮೆ ಬಂದಿದೆ.
ಕಲಬುರಗಿ ಜಿಲ್ಲೆಯಲ್ಲಿ 185 ಕೋಟಿ ಬೆಳೆ ವಿಮೆ ಪರಿಹಾರ ಬಂದಿದೆ. ಆಳಂದ ತಾಲ್ಲೂಕಿಗೆ 82 ಕೋಟಿ 88 ಲಕ್ಷ ಬಂದಿದೆ. ಇದು ನಮ್ಮ ಪ್ರಯತ್ನದ ಫಲದಿಂದ ರೈತರಿಗೆ ಸಿಕ್ಕ ಪರಿಹಾರ. ಇದು ಕ್ಲೈಮ್ ಆದ ಮೇಲೆ ಕಂಪೆನಿಯವರು ಕಾಲ್ಕಿತ್ತುಕೊಂಡು ಹೋಗಿದ್ದಾರೆ. ಇವಾಗ ಇಫ್ಕೋ ಕಂಪೆನಿ ಬಂದಿದೆ ಅದರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ ಎಂದರು.
ಉದ್ದು, ಹೆಸರು, ಸೋಯಾಬಿನ್ ಗೆ ಬೆಳೆ ವಿಮೆ ಪರಿಹಾರ ಬಂದಿಲ್ಲ. ಉದ್ದು, ಹೆಸರಿಗೆ ಯಾಕೆ ಪರಿಹಾರ ಕೊಟ್ಟಿಲ್ಲವೆಂದು ಗೊತ್ತಾಗ್ತಿಲ್ಲ. ಆಳಂದ ತಾಲ್ಲೂಕಿನ ಹದನೂರ ಮತ್ತು ಖಜೂರಿ ಗ್ರಾಮದ ರೈತರಿಗೆ ಬೆಳೆ ಪರಿಹಾರ ಸಿಕ್ಕಿಲ್ಲ. ಅಕ್ಕ ಪಕ್ಕದ ಪಂಚಾಯ್ತಿ ಊರಿನ ರೈತರಿಗೆ ಪರಿಹಾರ ಬಂದಿದೆ. ಅಧಿಕಾರಿಗಳನ್ನ ಕೇಳಿದರೆ ಉಡಾಫೆ ಉತ್ತರ ಕೊಡ್ತಿದ್ದಾರೆ. ಅಧಿಕಾರಿಗಳನ್ನ ಬಿಡೋದಿಲ್ಲ ನಾನು ಮಣಿಸ್ತೇನೆ. ಸರ್ಕಾರವೆ ಬರಗಾಲ ಅಂತಾ ಘೋಷಣೆ ಮಾಡಿದರೂ ವಿಮೆ ಪರಿಹಾರ ಸಿಕ್ಕಿಲ್ಲ ಎಂದರು ಅಸಮಾಧಾನ ಹೊರಹಾಕಿದರು.
ನಾನು ಹಾಗೂ ಹಲವರು ಸೇರಿ ಮಾಡಿದ ಪ್ರಯತ್ನದಿಂದ 70 ಸಾವಿರಕ್ಕೂ ಹೆಚ್ಚು ರೈತರಿಗೆ ಬೆಳೆ ವಿಮೆ ಪರಿಹಾರ ಹೆಚ್ಚು ಸಿಗುತ್ತಿದ್ದು ಒಟ್ಟು 82 ಕೋಟಿ ಪರಿಹಾರ ಆಳಂದ ತಾಲೂಕಿಗೆ ಒಂದಕ್ಕೆ ಲಭಿಸಿದೆ ಎಂದರು.