Advertisement

ಕೈದಿಗಳ ದಿನಗೂಲಿ 75 ರೂ. ಹೆಚ್ಚಳ

10:56 AM Oct 05, 2019 | Naveen |

ಕಲಬುರಗಿ: ವಿವಿಧ ಪ್ರಕರಣಗಳಲ್ಲಿ ಸಜೆಯಾಗಿ ಕಾರಾಗೃಹಕ್ಕೆ ಸೇರಿದ ಕೈದಿಗಳು ಅಡುಗೆ ಕೋಣೆ, ಪಾತ್ರೆ ಸ್ವತ್ಛತೆ, ಕೃಷಿ ಚಟುವಟಿಕೆಗಾಗಿ ನೀಡಲಾಗುತ್ತಿರುವ 25 ರೂ. ಕೂಲಿಯನ್ನು ಅಕ್ಟೋಬರ್‌ 1ರಿಂದ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಕೇಂದ್ರ ಕಾರಾಗೃಹದ ಮುಖ್ಯ ಅ ಧೀಕ್ಷಕ ಪಿ.ಎಸ್‌. ರಮೇಶ ತಿಳಿಸಿದ್ದಾರೆ.

Advertisement

ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಮತ್ತು ತಾಲೂಕು ಲೋಕ ಶಿಕ್ಷಣ ಸಮಿತಿ, ಕೇಂದ್ರ ಕಾರಾಗೃಹದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ 54ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ, ಕಲಿಕಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ಕಾರಾಗೃಹ ಕೈದಿಗಳಿಗೆ ಮೊದಲು ದಿನಕ್ಕೆ 75 ರೂ. ನೀಡಲಾಗುತ್ತಿತ್ತು. ಈಗ 25 ರೂ. ಹೆಚ್ಚಳ ಮಾಡಿದ್ದರಿಂದ ಒಟ್ಟು ದಿನಕ್ಕೆ 100 ರೂ. ನಿಗದಿ ಮಾಡಿದಂತಾಗಿದೆ ಎಂದರು.

ರಾಷ್ಟ್ರಮಟ್ಟದಲ್ಲಿ ಸಾಕ್ಷರತಾ ಪ್ರಮಾಣ ಶೇ.74 ರಷ್ಟು ಇದ್ದರೆ ಕಲಬುರಗಿ ಜಿಲ್ಲೆಯಲ್ಲಿ ಶೇ.65 ರಷ್ಟಿದೆ. ಇದು ಮುಂದಿನ ದಿನಗಳಲ್ಲಿ ಶೇ.100 ಆಗಬೇಕು. ಈ ಕಾರಾಗೃಹದಲ್ಲಿ ಮೊದಲನೇ ಹಂತದಲ್ಲಿ 250 ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡಲು 25 ಕಲಿಕಾ ಕೇಂದ್ರಗಳಿಗೆ ಚಾಲನೆ ನೀಡಲಾಗಿದೆ. ಪ್ರತಿಯೊಬ್ಬರನ್ನು ಸಾಕ್ಷರರನ್ನಾಗಿ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಸುವರ್ಣ ಹಣಮಂತರಾವ ಮಲಾಜಿ ಮಾತನಾಡಿದರು. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಗೌಡ ಪಾಟೀಲ ಸಾಕ್ಷರತಾ ಪ್ರಮಾಣ ಬೋಧಿ ಸಿ, ಬಿತ್ತಿ ಪತ್ರ ಬಿಡುಗಡೆ ಮಾಡಿದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿ ಕಾರಿ ಭರತರಾಜ ಸಾವಳಗಿ ಪ್ರಾಸ್ತಾವಿಕ ಮಾತನಾಡಿದರು. ಜಿ.ಪಂ ಉಪಾಧ್ಯಕ್ಷೆ ಶೋಭಾ ಶಿರಸಗಿ ಉದ್ಘಾಟಿಸಿದರು.

Advertisement

ಅಧೀಕ್ಷಕ ಐಜಿ ಮ್ಯಾಗೇರಿ, ಸಾಕ್ಷರತಾ ಸಂಯೋಜಕಿ ಅರ್ಚನಾ ಮಾಡ್ಯಾಳಕರ್‌, ಉಪನ್ಯಾಸಕಿ ಶಾಂತಾ ಬಿ.ರಾವ್‌ ಉಪನ್ಯಾಸ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಪಾಟೀಲ, ಶಿವಲಿಂಗ ತೇಲಕರ್‌, ಬಸವರಾಜ ಜೇವರ್ಗಿ, ಸುನಿತಾ ರಾಠೊಡ, ಪ್ರಿಯಾ ವಗ್ಗನ್‌, ಸಂಯೋಜಕ ಮಲ್ಲಯ್ಯ ಹಿರೇಮಠ ಆಳಂದ, ಪ್ರಕಾಶ ಕಟ್ಟಿಮನಿ ಚಿತ್ತಾಪುರ, ಪ್ರಭು ಜಾಧವ, ಮುರುಗೇಂದ್ರ ಮಸಳಿ, ಲಕ್ಷ್ಮೀಪುತ್ರ ಜೇವರ್ಗಿ, ಬಾಬು ಚವ್ಹಾಣ ಚಿಂಚೋಳಿ, ಸುರೇಶ ಸೇಡಂ, ಗೋಪಾಲ ರಾಠೊಡ ಹಾಜರಿದ್ದರು.

2018-19ನೇ ಸಾಲಿನಲ್ಲಿ ನಗರ ಮತ್ತು ಕೊಳಚೆ ಪ್ರದೇಶದಲ್ಲಿ ನಡೆದ ಸಾಕ್ಷರತಾ ಕಾರ್ಯಕ್ರಮದಲ್ಲಿ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಿದ ಬೋಧಕರಿಗೆ ಉತ್ತಮ ಬೋಧಕರೆಂದು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಮಲ್ಲಯ್ಯ ಹಿರೇಮಠ ಸಾಕ್ಷರ ಗೀತೆ ಹಾಡಿದರು. ನಾಗರಾಜ ಮುಲಗೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next