ವಹಿಸಿಕೊಳ್ಳಲು ಕಾಂಗ್ರೆಸ್-ಬಿಜೆಪಿ ನಡುವೆ ಪೈಪೋಟಿ ಏರ್ಪಟ್ಟಿರುವುದು ಕಂಡು ಬರುತ್ತದೆ.
Advertisement
ಮಹಾನಗರ ಪಾಲಿಕೆಯಲ್ಲಿ ನಾಲ್ಕು ದಶಕಗಳ ಅವಧಿಯುದ್ದಕ್ಕೂ ಹೆಚ್ಚಿನ ಪಾಲು ಅಧಿಕಾರ ನಡೆಸಿರುವ ಕಾಂಗ್ರೆಸ್ ಮತ್ತೆ ಆಡಳಿತ ಕಾರ್ಯಭಾರವಹಿಸಿಕೊಳ್ಳಬೇಕೆಂದು ಮನೋಬಲ ಹೊಂದಿದ್ದರೆ, ಹೇಗಾದರೂ ಮಾಡಿ ಈ ಸಲ ಪಾಲಿಕೆಯಲ್ಲಿ ಕಮಲ ಪಕ್ಷದ ಆಡಳಿತದ ಶಕೆ ಆರಂಭ ವಾಗಲೇ ಬೇಕೆಂದು ಬಿಜೆಪಿ ದೃಢ ನಿಶ್ಚಯ ಹೊಂದಿದ್ದರಿಂದ ಮುಂದಿನ ಬೆಳವಣಿಗೆಗಳು ಅತ್ಯಂತ ಕುತೂಹಲದಿಂದ ಕೂಡಿದೆ.
Related Articles
Advertisement
ಇದನ್ನೂ ಓದಿ:ಕೇರಳದಲ್ಲಿ ನಿಫಾ ವೈರಸ್ ಪತ್ತೆ ; ಗಡಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ತೀವ್ರ ನಿಗಾ
19 ಮುಸ್ಲಿಂ ಅಭ್ಯರ್ಥಿಗಳು ಜಯ: ಪಾಲಿಕೆಯ ಒಟ್ಟಾರೆ 55 ಸದಸ್ಯ ಸ್ಥಾನಗಳಲ್ಲಿ 19 ಜನ ಮುಸ್ಲಿಂ ಅಭ್ಯರ್ಥಿಗಳು ಜಯಶಾಲಿಯಾಗಿದ್ದಾರೆ. 16 ಜನ ಕಲಬುರಗಿ ಉತ್ತರದಲ್ಲಿ ಗೆದ್ದರೆ ಮೂವರು ಕಲಬುರಗಿ ದಕ್ಷಿಣದಲ್ಲಿ ಗೆದ್ದಿದ್ದಾರೆ. ಕಾಂಗ್ರೆಸ್ ಪಕ್ಷ 21 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಬಿಜೆಪಿ ಇದೇ ಮೊದಲ ಬಾರಿಗೆ 10 ಸ್ಥಾನಗಳಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಿತ್ತು. ಆದರೆ ಒಂದೂ ಸ್ಥಾನ ಗೆಲ್ಲದಿರುವುದು ಇಲ್ಲಿ ಕಾಣಬಹುದಾಗಿದೆ. ಲಿಂಗಾಯಿತರು 11 ಅಭ್ಯರ್ಥಿಗಳು ಗೆದ್ದಿದ್ದಾರೆ.
ಹೊಸಬರಿಗೆ ಮಣೆ: ಪಾಲಿಕೆ ಚುನಾವಣೆಯಲ್ಲಿ ಮತದಾರರ ಹೊಸಬರಿಗೆ ಮಣೆ ಹಾಕಿದ್ದು, ಈ ಸಲ ಹೊಸಬರಿಗೆ 45 ಹೊಸಬರಿಗೆ ಮಣೆ ಹಾಕಿರುವುದು ಕಂಡು ಬಂದಿದ್ದು, ಹತ್ತು ಅಭ್ಯರ್ಥಿಗಳು ಮಾತ್ರ ಪಾಲಿಕೆ ಪುನಃ ಪ್ರವೇಶಿಸಿದ್ದಾರೆ. ಪುತಳಿಬೇಗಂ, ಪ್ರಭು ಹಾದಿಮನಿ, ಸೈಯದ್ ಅಹ್ಮದ, ಪರ್ವಿನ್ ಬೇಗಂ, ಅಜ್ಮಲ ಗೋಲಾ, ವಿಜಯಕುಮಾರ ಸೇವಲಾನಿ, ವಿಶಾಲ ದರ್ಗಿ, ವೀರಣ್ಣ ಹೊನ್ನಳ್ಳಿ, ಲತಾ ರವಿ ರಾಠೊಡ, ಯಲ್ಲಪ್ಪ ನಾಯಿಕೊಡಿ ಮತ್ತೆ ಪಾಲಿಕೆಗೆ ಲಗ್ಗೆ ಇಟ್ಟಿದ್ದಾರೆ. ವಿಠಲ್ ಜಾಧವ, ಹುಲಿಗೆಪ್ಪ ಕನಕಗಿರಿ, ಸೂರಜ್‌ಪ್ರಸಾದ ತಿವಾರಿ, ಅಸ್ಪಾಕ್ ಅಹ್ಮದ್ಚುಲ್ಬುಲ್, ಸಜ್ಜಾದ್‌ಅಲಿ ಮತ್ತೂಮ್ಮೆ ಪಾಲಿಕೆ ಪ್ರವೇಶಿಸುವಲ್ಲಿ ಎಡವಿದ್ದಾರೆ. ಪಕ್ಷೇತರ ಫಲಿತಾಂಶದೊಂದಿಗೆ ಶುಭಾರಂಭ: ಮತ ಏಣಿಕೆ ಶುರುವಾಗಿ ಮೊದಲ ಫಲಿತಾಂಶವೇ ವಾರ್ಡ್ 36 ಹೊರ ಬಿದ್ದು, ಪಕ್ಷೇತರ ಅಭ್ಯರ್ಥಿ ಡಾ| ಶಂಭುಲಿಂಗ ಬಳಬಟ್ಟಿ ಗೆಲುವು ಸಾಧಿಸಿ ಶುಭಾರಂಭಿಸಿದರು. ಇದನ್ನು ನೋಡಿ ಪಕ್ಷೇತರ ಕಳೆದ ಸಲದಂತೆ ಈ ಸಲವೂ ಏಳೆಂಟು ಅಭ್ಯರ್ಥಿ ಗಳು ಗೆಲುವು ಸಾಧಿಸುತ್ತಾರೆಂದು ಭಾವಿಸಲಾಗಿತ್ತು. ಆದರೆ ಪಕ್ಷೇತರರಾಗಿ ಬಳಬಟ್ಟಿ ಒಬ್ಬರೇ ಗೆಲುವು ಸಾಧಿಸಿದರು. ಅತಿ ಹೆಚ್ಚಿನ-ಅತ್ಯಲ್ಪ ಮತಗಳಿಂದ ಗೆಲುವು: ಪಾಲಿಕೆಯ 55 ಸ್ಥಾನಗಳ ಚುನಾವಣೆಯಲ್ಲಿ ವಾರ್ಡ್ ನಂ 5ರಲ್ಲಿ ಬಿಜೆಪಿ ಅಭ್ಯರ್ಥಿ ಗಂಗಮ್ಮ ಮುನ್ನೋಳಿ 3238 ಭಾರಿ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಗಂಗಮ್ಮ ಮುನ್ನೋಳ್ಳಿ 4106 ಮತ ಪಡೆದಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಪೂಜಾ ಜಮಾದಾರ ಕೇವಲ 868 ಮತ ಪಡೆದರು. ಆದರೆ ವಾರ್ಡ್ ನಂ 46ರಲ್ಲಿ ವಿಶಾಲ ದರ್ಗಿ ಕೇವಲ 10 ಮತಗಳಿಂದ ಚುನಾಯಿತ ರಾಗಿದ್ದಾರೆ. ದರ್ಗಿ 1500 ಮತ ಪಡೆದರೆ ಕಾಂಗ್ರೆಸ್‌ನ ಅಭ್ಯರ್ಥಿ ಸಂಜಯ ಮಾಕಲ್ 1490 ಮತ ಪಡೆದು ಕೂದಲಳತೆ ಅಂತರದಲ್ಲಿ ಸೋಲು ಅನುಭವಿಸಿದರು. ಮೇಯರ್ ಯಾರು? ಚರ್ಚೆ ಜೋರು: ಪಾಲಿಕೆ ಮೇಯರ್ ಸ್ಥಾನ ಸಾಮಾನ್ಯ ಮಹಿಳಾ ಸ್ಥಾನಕ್ಕೆ ಹಾಗೂ ಉಪಮಹಾಪೌರ ಬಿಸಿಬಿ ವರ್ಗಕ್ಕೆ ಅಂದರೆ ಹಿಂದುಳಿದ ವರ್ಗ ಬಗೆ ಮೀಸಲಾಗಿದೆ. ಮೇಯರ್ ಸ್ಥಾನ ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಾಗಿರುವುದರಿಂದ ಪೈಪೋಟಿ
ಸಹಜವಾಗಿ ಏರ್ಪಡುತ್ತದೆ. ಇನ್ನೂ ಉಪಮೇಯರ್ ಸ್ಥಾನಕ್ಕೆ ಲಿಂಗಾಯಿತರು ಅದರಲ್ಲೂ ತೆರಿಗೆ ಪಾವತಿಸುವ ಅಭ್ಯರ್ಥಿಯಾಗಿರದೇ ಸಾಮಾನ್ಯರು ಆಗಬಹುದಾಗಿದೆ. ಬಹು ಮುಖ್ಯವಾಗಿ ಬಿಜೆಪಿಯಲ್ಲಿ ಮಹಾಪೌರರ ಸ್ಥಾನಕ್ಕೆ ಹಲವರ ಹೆಸರು ಕೇಳಿ ಬರುತ್ತಿದೆ. ವಾರ್ಡ್ ನಂ6ರ ಅರುಣಾದೇವಿ, ವಾರ್ಡ್ ನಂ 51 ರ ಪಾರ್ವತಿ ದೇವದುರ್ಗ ವಾರ್ಡ್ ನಂ 5ರ ಗಂಗಮ್ಮ ಮುನ್ನೋಳಿ, ವಾರ್ಡ್ 52 ರ ಶೋಭಾ ದೇಸಾಯಿ, ಉಪಮೇಯರ್ ಜೆಡಿಎಸ್ ಕೇಳಬಹುದಾಗಿದೆ.ಆದರೆ ಎರಡೂ ಸ್ಥಾನಗಳು ಬಿಜೆಪಿಯೇ ಪಡೆಯಲಿದೆ ಎಂದು ಬಿಜೆಪಿ ವರಿಷ್ಠರು ಹೇಳಿದ್ದಾರೆ. ಹೀಗಾದಲ್ಲಿ ಬಿಜೆಪಿಯಲ್ಲಿ ಬಿಸಿಬಿ ವರ್ಗದವರು ಅನೇಕರಿದ್ದಾರೆ. ಇನ್ನೂ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದಲ್ಲಿ ಇಲ್ಲೂ ಕೂಡಾ ಅನೇಕರು ಮುಂಚೂಣಿಗೆ ಬರಲಿದ್ದಾರೆ. ಪಕ್ಷೇತರ ಅಭ್ಯರ್ಥಿ ನಮಗೆ ಬೆಂಬಲ: ಬಿಜೆಪಿಗರು ಪಕ್ಷೇತರ ಡಾ| ಶಂಭುಲಿಂಗ ಬಳಬಟ್ಟಿ ತಮಗೆ ಬೆಂಬಲ ಎನ್ನುತ್ತಿದ್ದಾರೆ. ಮತ್ತೊಂದೆಡೆ ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ್ ಪಕ್ಷೇತರ ಅಭ್ಯರ್ಥಿ ತಮಗೆ ಬೆಂಬಲಿಸಲಿದ್ದಾರೆ ಎಂದು ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಾಸಕರ ವಾರ್ಡ್‌ನಲ್ಲೇ ಕಾಂಗ್ರೆಸ್: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಮನೆ ವಾರ್ಡ್ ನಂ 54ರಲ್ಲಿ ಬರುತ್ತದೆ. ಆದರೆ ಇಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ನಿಂಗಮ್ಮ ಚಂದಪ್ಪ ಕಟ್ಟಿಮನಿ ಜಯಶಾಲಿಯಾಗಿದ್ದಾರೆ. ಈ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಲಕ್ಷ್ಮೀ ರಮೇಶ ವಾಡೇಕರ ಸೋಲು ಅನುಭವಿಸಿದ್ದಾರೆ. ಅದೇ ರೀತಿ ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಖನೀಜಾ ಫಾತೀಮಾ ಅವರ ಮನೆ ವಾರ್ಡ್ ನಂ 50ರಲ್ಲಿ ಬರುತ್ತದೆ. ಇಲ್ಲಿ ಬಿಜೆಪಿಯ ಅಭ್ಯರ್ಥಿ ಮಲ್ಲಿಕಾರ್ಜುನ ಉದನೂರ ಗೆಲುವು ಸಾಧಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಗಿದ್ದ ಹುಲಿಗೆಪ್ಪ ಕನಕಗಿರಿ ಸೋಲು ಅನುಭವಿಸಿದ್ದಾರೆ. ವಾರ್ಡ್ ಪುನರ್‌ವಿಂಗಡಣೆಯಲ್ಲೇ ಚಾಣಾಕ್ಷತೆ: ಪಾಲಿಕೆಯ ಎಲ್ಲ 55 ವಾರ್ಡ್‌ಗಳು ಪುನರ್ ವಿಂಗಡಣೆಯಾಗಿ ಅದರ ಮೇಲೆಯೇ ಚುನಾವಣೆ
ಈಗ ನಡೆದಿದೆ. ಆಡಳಿತಾರೂಢ ಬಿಜೆಪಿ ವಾರ್ಡ್‌ಗಳನ್ನು ಅತ್ಯಂತ ಚಾಣಾಕ್ಷತನದಿಂದ ವಿಂಗಡಣೆ ಮಾಡಿರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇ ಹೆಚ್ಚಿನ ಸ್ಥಾನಗಳನ್ನು ಪಡೆಯಲು ಸಾಧ್ಯ ಎಂದು ವಿಶ್ಲೇಷಿಸಲಾಗುತ್ತಿದೆ. ಕಲಬುರಗಿ ಮಹಾನಗರದ ಸರ್ವತೋಮುಖ ಅಭಿವೃದ್ಧಿ ದೃಷ್ಟಿ ಹಿನ್ನೆಲೆಯಲ್ಲಿ ಮತದಾರರು ಬಿಜೆಪಿಗೆ ನಿರೀಕ್ಷೆ ಇಟ್ಟುಕೊಂಡು ಬೆಂಬಲಿಸಿದ್ದಾರೆ. ಅವರ ನಿರೀಕ್ಷೆಯಂತೆ ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಹಿಡಿದು ಕಲಬುರಗಿ ಮಹಾನಗರ ಸ್ಮಾರ್ಟ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು.
–ಸಿದ್ಧಾಜೀ ಪಾಟೀಲ್,
ಬಿಜೆಪಿ ನಗರಾಧ್ಯಕ್ಷ ಬಿಜೆಪಿಗರ ಅಧಿಕಾರ ಹಾಗೂ ತೋಲ್ಬಲ ಪ್ರದರ್ಶನ ನಡುವೆ ಮತದಾರರು ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ನೀಡಿದ್ದಾರೆ. ಮತದಾರರ ನಿರೀಕ್ಷೆಯಂತೆ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಬೇಕು. ಕೋಮುವಾದಿ ಬಿಜೆಪಿಗೆ ಯಾರೂ ಕೈ ಜೋಡಿಸಬಾರದು.
-ಜಗದೇವ ಗುತ್ತೇದಾರ,
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜೆಡಿಎಸ್ ಕನಿಷ್ಠ 10ರಿಂದ 12 ಸ್ಥಾನಗಳಲ್ಲಿ ಜಯಗಳಿಸುತ್ತದೆ ಎಂಬುದಾಗಿ ದೃಢ ವಿಶ್ವಾಸ ಹೊಂದಲಾಗಿತ್ತು. ಆದರೆ ಬಿಜೆಪಿ ಹಾಗೂ ಕಾಂಗ್ರೆಸ್ಸಿಗರ ಹಣದ ಹೊಳೆ ಹರಿಸಿದ್ದರಿಂದ ಸ್ವಲ್ಪ ಹಿನ್ನೆಡೆಯಾಯಿತು. ಬಹು ಮುಖ್ಯವಾಗಿ 8 ವಾರ್ಡ್‌ಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕಡಿಮೆ ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ. ಪಾಲಿಕೆಯಲ್ಲಿ ಯಾರಿಗೆ ಬೆಂಬಲಿಸಬೇಕೆಂಬುದನ್ನು ಪಕ್ಷದ ವರಿಷ್ಠ
ಎಚ್.ಡಿ.ಕುಮಾರಸ್ವಾಮಿ ಅವರು ನಿರ್ಧರಿಸುತ್ತಾರೆ.
-ಕೇದಾರಲಿಂಗಯ್ಯ ಹಿರೇಮಠ,
ಜೆಡಿಎಸ್ ಜಿಲ್ಲಾಧ್ಯಕ್ಷ -ಹಣಮಂತರಾವ ಭೈರಾಮಡಗಿ