Advertisement
ಚುನಾವಣೆಗೆ ಅಧಿಸೂಚನೆ ಹೊರ ಬಿದ್ದ ನಂತರ ದಿನಾಲು ಒಂದಿಲ್ಲ ಒಂದು ತಂತ್ರ- ಪ್ರತಿತಂತ್ರ ನಡೆಯುತ್ತಿರುವ ಪರಿಣಾಮ ಚುನಾವಣೆಗೆ ಇನ್ನಿಲ್ಲದ ರಂಗು ಬಂದಿದೆ. ಒಂದು ಸಲವಾದರೂ ಹೇಗಾದರೂ ಮಾಡಿ ಬ್ಯಾಂಕ್ ನ ಆಡಳಿತದ ಗದ್ದುಗೆ ಹಿಡಿಯಲೇಬೇಕೆಂದು ಬಿಜೆಪಿ ಪಣ ತೊಟ್ಟಿದ್ದರಿಂದ ಕಾಂಗ್ರೆಸ್ ಪಕ್ಷ ಯಾವುದೇ ಕಾರಣಕ್ಕೂ ತನ್ನ ಕೈಯಿಂದ ಅಧಿಕಾರ ತಪ್ಪಬಾರದು ಎಂದು ರಣತಂತ್ರ ರೂಪಿಸಿದೆ. ಸಹಕಾರಿ ಕ್ಷೇತ್ರದ ಚುನಾವಣೆ ಸಾರ್ವತ್ರಿಕ ಚುನಾವಣೆ ಮೀರಿಸುವ ಮಟ್ಟಿಗೆ ಕಾವೇರಿದೆ.
Related Articles
Advertisement
ಬೆಳಿಗ್ಗೆ 9ಕ್ಕೆ ಮತದಾನ ಶುರುವಾಗಿದ್ದು, ಮಧ್ಯಾಹ್ನ 12ರ ಹೊತ್ತಿಗೆ ಶೇ 88 ರಷ್ಟು ಮತದಾನವಾಗಿದೆ.
ಅವಿರೋಧವಾಗಿ ಆಯ್ಕೆಯಾಗಿರುವ ಏಳು ನಿರ್ದೆಶಕರಲ್ಲಿ ಐವರು ಕಾಂಗ್ರೆಸ್ ಬೆಂಬಲಿತರಿದ್ದರೆ ಇಬ್ಬರು ಬಿಜೆಪಿಯವರಿದ್ದಾರೆ. 13 ಸ್ಥಾನಗಳ ಜತೆಗೇ ಸರ್ಕಾರದಿಂದ ಒಬ್ಬರು ನಾಮನಿರ್ದೇಶನ ಇಬ್ಬರು ಸಹಕಾರಿ ಅಧಿಕಾರಿಗಳು ಸೇರಿ ಒಟ್ಟಾರೆ 16 ಸದಸ್ಯ ಬಲಾಬಲ ಹೊಂದಲಿದ್ದು, ಬ್ಯಾಂಕ್ ನಲ್ಲಿ ಆಡಳಿತದ ಅಧಿಕಾರ ಹೊಂದಲು 9 ಸದಸ್ಯ ನಿರ್ದೇಶಕರ ಬೆಂಬಲದ ಅಗತ್ಯವಿದೆ. ಬ್ಯಾಂಕ್ ನ ಆಡಳಿತ ಪಡೆಯಲು ಬಿಜೆಪಿ- ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.