Advertisement

ಜಾಗೃತಿಗೆ 200 ಸ್ವಯಂ ಸೇವಕರ ಬಳಕೆ

04:24 PM May 06, 2020 | Naveen |

ಕಲಬುರಗಿ: ಕೋವಿಡ್ ಸೋಂಕು ನಿಯಂತ್ರಿಸುವ ಜಾಗೃತಿ ಮತ್ತು ಸಾಮಾಜಿಕ ಅಂತರದ ಬಗ್ಗೆ ಅರಿವು ಮೂಡಿಸಲು ಮಹಾನಗರ ಪಾಲಿಕೆಯು 200 ಜನ ಸ್ವಯಂ ಸೇವಕರ ಕೋವಿಡ್ ವಾರಿಯರ್ಸ್‌ ಬಳಸಿಕೊಳ್ಳುತ್ತಿದ್ದು, ಈ ವಾರಿಯರ್ಸ್‌ಗಳು ಹಲವು ಕಡೆಗಳಲ್ಲಿ ಸಾರ್ವಜನಿಕರು ಮತ್ತು ವ್ಯಾಪಾರಸ್ಥರಿಗೆ ತಿಳಿವಳಿಕೆ ಮೂಡಿಸಿದರು.

Advertisement

ಮಹಾನಗರ ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ ಮಾರ್ಗದರ್ಶನದಲ್ಲಿ ಸ್ವಯಂ ಸೇವಕರ ಕೊರೊನಾ ವಾರಿಯರ್ಸ್‌ ತಂಡದ ಸದಸ್ಯರು ನಗರದ ಹಾಗರಗಾ ಕ್ರಾಸ್‌ ಸಮೀಪದ ಹಣ್ಣು ಮತ್ತು ತರಕಾರಿ ಮಾರಾಟಗಾರರಿಗೆ ಅರಿವು ಮೂಡಿಸಿದರು. ಕೋವಿಡ್ ರೋಗದ ಲಕ್ಷಣ, ಸಾಮಾಜಿಕ ಅಂತರ ಕಾಪಾಡುವುದು, ಸೋಂಕು ಹರಡದಂತೆ ತಡೆಯಲು ಮಾಸ್ಕ್ ಮತ್ತು ಸ್ಯಾನಿಟೈಸರ್‌ ಉಪಯೋಗಿಸುವಂತೆ ಹೇಳಿದರು.

ಕೊರೊನಾ ವಾರಿಯರ್ಸ್‌ ಗಳಾದ ಮಾನವ ಹಕ್ಕುಗಳ ಹೋರಾಟಗಾರರಾದ ಮೊಹ ಮ್ಮದ್‌ ರಿಯಾಜುದ್ದೀನ್‌, ಪಟೇಲ್‌ ಅಜಹರುದ್ದೀನ್‌, ಅಬ್ದುಲ್‌ ಬಸೀತ್‌, ಅಬ್ದುಲ್‌ ಹಮೀದ್‌,
ಅಬ್ದುಲ್‌ ಸತ್ತಾರ್‌ ಸೇರಿದಂತೆ ಹಲವರು ಆರೋಗ್ಯದ ಜಾಗೃತಿ ಮೂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next