ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿ ಮೂಲದ ಕಲಬುರಗಿಯ ಅಬುತಲಾ ಉರಫ್ ಅಬರಾರ್ ಮಹೆಬೂಬ ಪಟೇಲ್ ಈಚೆಗೆ ಹರಿಯಾಣಾದಲ್ಲಿ ನಡೆದ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನ 60ನೇ ಎನ್‌ಎನ್‌ಸಿಸಿ ಸ್ಪರ್ಧೆಯಲ್ಲಿ ಅತ್ಯುತ್ತಮ ಪಾಯಿಂಟ್ ಮಾಡುವ ಮೂಲಕ ಭಾರತದ ಜೂನಿಯರ್ ರಿನೀಯಸ್ ಶೂಟರ್ ಆಗಿ ಹೊರಹೊಮ್ಮಿದ್ದಾರೆ.
ಕರ್ನಾಟಕದ ಕಲಬುರಗಿಯವರಾದರೂ ಪಕ್ಕದ ತೆಲಂಗಾಣ ರಾಜ್ಯದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಅಬುತಲಾ, ನಗರದ ಎಸ್. ಆರ್.ಎಸ್. ಮೆಹತಾ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ. ಸ್ಪರ್ಧೆಯಲ್ಲಿ ಒಟ್ಟು 600ರಲ್ಲಿ 470 ಅಂಕ ಪಡೆದರೆ ಅರ್ಹರಾಗುತ್ತಿದ್ದರು.
ಆದಾಗ್ಯೂ, ಅಬುತಲಾ ಉರಫ್ ಅಬರಾರ್ 540 ಅಂಕ ಪಡೆಯುವ ಮೂಲಕ ಮೊಟ್ಟ ಮೊದಲ ದರ್ಜೆ ಪಡೆದು ಜೂನಿಯರ್ ಶೂಟರ್ ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ ಎಂದು ತಂದೆ ಮಹೆಬೂಬ ಪಟೇಲ್ ಹಾಗೂ ಖಾಸಗಿ ಕೋಚ್ ಮೊಹ್ಮದ್ ಸಾಜೀದ್ ಹುಸೇನ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಜ್ಜ ಸೇನೆಯಲ್ಲಿ ಕೆಲಸ ಮಾಡಿದ್ದಾರೆ. ಅದರಿಂದಾಗಿ ಸಹಜವಾಗಿ ಶೂಟಿಂಗ್ ಕಡೆಗೆ ಆಸಕ್ತಿವಹಿಸಿದ್ದ ಅಬುತಲಾ, ಇವತ್ತು ರಾಜ್ಯ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾನೆ ಎಂದರು. ವಿದ್ಯಾರ್ಥಿಯ ಸಾಧನೆಯನ್ನು ಗಮನಿಸಿದ ಓಲಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಗಗನ್ ಅವರು ಒಂದು ತಿಂಗಳು ತರಬೇತಿ ನೀಡಿ,
ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆಯುವ ಹಾಗೆ ಸಹಾಯ ಮಾಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು. ತರಬೇತಿದಾರ ಹುಸೇನ್ ಪಟೇಲ್ ಇಜೇರಿ, ಮತಿನ್ ಪಟೇಲ್, ಮುಸ್ತಾಫ್ ಅಲಿ ಪಟೇಲ್ ಹಾಜರಿದ್ದರು.