Advertisement

Ram Mandir ಆಮಂತ್ರಣದಲ್ಲಿ ಕಲಬುರಗಿ ಕಲಾವಿದನ ಲೋಗೋ

12:38 AM Jan 20, 2024 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕದ ಕಲಬುರಗಿಯ ಕಲಾವಿದ ವಿನ್ಯಾಸಗೊಳಿಸಿರುವ ಲೋಗೋವನ್ನು ಅಯೋಧ್ಯೆ ರಾಮ ಮಂದಿರದ ಆಮಂತ್ರಣದಲ್ಲಿ ಬಳಸಲಾಗಿದೆ.

Advertisement

“ಸೇವಾಭಾರತಿ’ಯ ಉತ್ತರ ಕರ್ನಾಟಕ ಪ್ರಾಂತದ ಟ್ರಸ್ಟಿಯಾಗಿರುವ ನಗರದ ಬಂಧು ಪ್ರಿಂಟರ್ಸ್‌’ ಮಾಲಕ ಹಾಗೂ ಕಲಾ ವಿದ ರಮೇಶ ತಿಪ್ಪನೂರ ವಿನ್ಯಾಸ ಗೊಳಿಸಿರುವ ಲೋಗೋ ಆಮಂತ್ರಣ ಪತ್ರದಲ್ಲಿ ಬಳಕೆ ಯಾಗಿದೆ. ರಾಮ ಮಂದಿರ ನಿರ್ಮಾಣದ ಪ್ರಮುಖ ರೊಂದಿಗೆ ಚರ್ಚಿಸಿ, ನಾಲ್ಕು ದಿನಗಳ ಕಾಲ ಸಮಾಲೋಚಿಸಿ ಎಂಟು ವಿಧದ ಲೋಗೋಗಳನ್ನು ಡಿಜಿಟಲ್‌ ಆಗಿ ರಚಿಸಿ ಕಳುಹಿಸಲಾಗಿತ್ತು. ಅದರಲ್ಲಿ ಶ್ರೀರಾಮನ ಸುತ್ತ ಸೂರ್ಯನ ಕಿರಣಗಳು ಪ್ರಜ್ವಲಿಸುವ ಹಾಗೂ ಕೆಳಗಡೆ ಹನುಮಂತ ಕುಳಿತಿರುವ ಜತೆಗೆ ಸಂಸ್ಕೃತದಲ್ಲಿ ರಾಮೋ ವಿಗ್ರಹವಾನ್‌ ಧರ್ಮ’ ಎಂದು ಬರೆದಿರುವ ಲೋಗೋ ಅಂತಿಮಗೊಂಡಿದೆ ಎಂದು ರಮೇಶ ವಿವರಣೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next