Advertisement
ರವಿವಾರದಿಂದ ಆರಂಭವಾದ ಎರಡು ದಿನಗಳ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ವಸತಿ ಶಾಲೆ (ಎಸ್‌ಬಿಆರ್) ಸುವರ್ಣ ಮಹೋತ್ಸವದ ಪ್ರಥಮ ವಾರ್ಷಿಕೋತ್ಸವ, ಶರಣಬಸವೇಶ್ವರ ಸಂಯುಕ್ತ ವಸತಿ ಪಿಯು ಕಾಲೇಜಿನ ಬೆಳ್ಳಿ ಮಹೋತ್ಸವ, ಅಪ್ಪ ಸಿಬಿಎಸ್‌ಸಿ ಶಾಲೆಯ ದಶಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
Related Articles
Advertisement
ಸುಲಫಲ ಮಠದ ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಶರಣಬಸವೇಶ್ವರರ ಪರಂಪರೆಯಲ್ಲಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಬೆಳೆದು ಬಂದಿದ್ದಾರೆ. ದೊಡ್ಡಪ್ಪ ಅಪ್ಪ ನೆಟ್ಟ ಶಿಕ್ಷಣ ಸಸಿಯನ್ನು ಶರಣಬಸವಪ್ಪ ಅಪ್ಪ ಹೆಮ್ಮರವಾಗಿ ಬೆಳೆಸಿದ್ದಾರೆ. 30 ವಿದ್ಯಾರ್ಥಿಗಳಿಂದ ಆರಂಭವಾದ ಶಿಕ್ಷಣ ಸಂಸ್ಥೆಯಲ್ಲಿ ಈಗ 30 ಸಾವಿರ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವುದು ಸಾಮಾನ್ಯ ವಿಷಯವಲ್ಲ ಎಂದರು.
ಕ್ರಿಶ್ಚನ್ ಮಿಷಿನರಿಗಳ ನಂತರ ಲಿಂಗಾಯತರು ಶಿಕ್ಷಣ ಕ್ರಾಂತಿ ಮಾಡಿದ್ದಾರೆ ಎಂದು ಜ್ಞಾನಪೀಠ ಪುರಸ್ಕೃತ ಯು.ಆರ್. ಅನಂತಮೂರ್ತಿ ಅನೇಕ ವರ್ಷಗಳ ಹಿಂದೆಯೇ ಹೇಳಿದ್ದರು. 19ನೇ ಶತಮಾನದಿಂದ ಲಿಂಗಾಯತರು ಅಕ್ಷರ ಕ್ರಾಂತಿಯಲ್ಲಿ ತೊಡಗಿದ್ದಾರೆ. ಈಗ ಅಪ್ಪ ವಿದ್ಯಾ ಭಂಡಾರಿ ಎಂದು ಖ್ಯಾತಿ ಪಡೆದಿದ್ದಾರೆ ಎಂದು ಹೇಳಿದರು.
ಬೀದರ್‌ನ ಸಿದ್ಧಾರೂಢ ಮಠದ ಡಾ| ಶಿವಕುಮಾರ ಮಹಾಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಸದ ಡಾ| ಉಮೇಶ ಜಾಧವ, ಜೇವರ್ಗಿ ಶಾಸಕ ಡಾ| ಅಜಯಸಿಂಗ್ ಮಾತನಾಡಿದರು. ಸಮಾಧಾನ ಧ್ಯಾನ ಮಂದಿರದ ಜಡೆ ಶಾಂತಲಿಂಗೇಶ್ವರ ಮಹಾಸ್ವಾಮೀಜಿ, ತುಮಕೂರಿನ ಶ್ರೀ ಹಿರೇಮಠದ ಡಾ| ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಶುಭಕೋರಿ ಸಂದೇಶ ಕಳುಹಿಸಿದ್ದರು.
ಚೌದಾಪುರಿ ಮಠದ ರಾಜಶೇಖರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ದಾಕ್ಷಾಯಿಣಿ ಎಸ್. ಅಪ್ಪ, ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಪ್ರಾಚಾರ್ಯ ಎನ್.ಎಸ್. ದೇವರಕಲ್ ಹಾಜರಿದ್ದರು.
ಕಲಬುರಗಿ ನಗರ ಕ್ಷೇತ್ರದ ದತ್ತಾತ್ರೇಯ ಪಾಟೀಲ ರೇವೂರ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಮಾಜಿ ಮೇಯರ್ ಶರಣು ಮೋದಿ, ವಿಧಾನ ಪರಿಷತ್ ಮಾಜಿ ಸದಸ್ಯ ಶಶೀಲ ನಮೋಶಿ, ಮುಖಂಡರಾದ ನಾರಾಯಣರಾವ್ ಕಾಳೆ, ಸಿ.ಎ. ಪಾಟೀಲ, ಎಪಿಎಂಸಿ ಅಧ್ಯಕ್ಷ ಅಪ್ಪು ಕಣಕಿ ಹಾಗೂ ಎಸ್‌ಬಿಆರ್ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಾದ ಬಸವರಾಜ ಖಂಡೇರಾವ್, ಉದಯಗಿರಿ ನವಣಿ, ಪ್ರಶಾಂತ ಮಾನಕರ, ಉಮೇಶ ಶೆಟ್ಟಿ, ದಿನೇಶ ಪಾಟೀಲ, ಶಂಕರಗೌಡ, ಶ್ರೀಶೈಲ ಹೊಗಾಡೆ ಹಾಗೂ ಸಂಸ್ಥೆಯ ಶಿಕ್ಷಕರು, ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾಲೇಜಿನ ವಿದ್ಯಾರ್ಥಿನಿಯರು “ಏಕದಂತಾಯ ವಕ್ರತುಂಡಾಯ ಗೌರಿತನಯಾಯ ಧೀಮಹಿ ಗಜೇಶಾಣಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ’ ನೃತ್ಯವನ್ನು ಅದ್ಭುತವಾಗಿ ಪ್ರಸ್ತುತ ಪಡಿಸಿದರು.