ಕಲಬುರಗಿ: ನಗರದ ಕೋಟನೂರ ಡಿ ಯಲ್ಲಿನ ಡಾ. ಬಿ.ಆರ್.ಅಂಬೇಡ್ಕರ್ ಮೂರ್ತಿಗೆ ಅವಮಾನಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಕಿರಣ್ (26), ಹನುಮಂತ (25), ಮನು (31), ಸಂಗಪ್ಪ ಅಲಿಯಾಸ್ ಸಂಗಮೇಶ (38) ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇವರು ಕೊಟನೂರ ಗ್ರಾಮದವರೇ ಆಗಿದ್ದು, ಇನ್ನೊಬ್ಬನನ್ನು ಬಂಧಿಸಬೇಕಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಆರೋಪಿಗಳ ಬಂಧನಕ್ಕಾಗಿ ಮೂರು ತಂಡಗಳನ್ನು ರಚಿಸಲಾಗಿದ್ದು, ಕಲಬುರಗಿಯ ವಿವಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧನವನ್ನು ಕಲಬುರಗಿ ಪೊಲೀಸ್ ಆಯುಕ್ತ ಆರ್. ಚೇತನ್ ದೃಢಪಡಿಸಿದ್ದಾರೆ.
ಇದನ್ನೂ ಓದಿ:Aavesham Teaser: ʼಆವೇಶಮ್ʼನಲ್ಲಿ ಲೋಕಲ್ ಗೂಂಡಾನಾಗಿ ಮಿಂಚಿದ ಫಾಫಾ
ನಿನ್ನೆ ಕೆಲವು ಕಡೆ ಕಲ್ಲು ತೂರಾಟ ಮಾಡಿದ್ದಾರೆ. ಅಂತವರ್ಯಾರು ಅಂಬೇಡ್ಕರ್ ಅಭಿಮಾನಿಗಳಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ, ಧರಣಿ ಕೂಡಲು ಅವಕಾಶವಿದೆ. ಅದು ಬಿಟ್ಟು ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದ್ದು ಸರಿಯಲ್ಲ. ಅಂತವರ ಮೇಲೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಈಗ ಅಂಬೇಡ್ಕರ್ ಅವಮಾನ ಮಾಡಿದವರನ್ನ ಬಂಧಿಸಿದ್ದೇವೆ. ಸದ್ಯ ಆಸ್ತಿ ಪಾಸ್ತಿ ಹಾನಿ ಮಾಡಿದವರನ್ನೂ ಬಂಧಿಸುತ್ತೇವೆ. ಅಂಬೇಡ್ಕರ್, ಬಸವಣ್ಣನನ್ನು ಅವಮಾನಿಸುವುದು ಮನುವಾದಿಗಳ ಕೆಲಸ ಎಂದು ಟೀಕಿಸಿದರು.