Advertisement

Kalaburagi; ಬೆಂಕಿ ಅವಘಡದಲ್ಲಿ 10 ಬೈಕ್ ಸುಟ್ಟು ಭಸ್ಮ

02:56 PM Jan 29, 2024 | Team Udayavani |

ಕಲಬರಗಿ: ನಗರದ ಪಿಲ್ಟರ್ ಬೆಡ್ ನಲ್ಲಿರುವ ಸರ್ವೀಸ್ ಕೇಂದ್ರಕ್ಕೆ ಬೆಂಕಿ ತಗುಲಿ ಹತ್ತು ಬೈಕ್ ಗಳು ಸುಟ್ಟು ‌ಕರಕಲಾದ ಘಟನೆ ಸೋಮವಾರ ನಡೆದಿದೆ. ಘಟನೆಯಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ.

Advertisement

ಮಲ್ಲೇಶ್ ಹಾಗೂ ನಾಗೇಶ ಲಾಡೆ ಎನ್ನುವವರಿಗೆ ಸೇರಿದ ಆಟೋಮೊಬೈಲ್ ಹಾಗೂ ಸರ್ವೀಸ್ ಸೆಂಟರ್ ಗೆ ಬೆಂಕಿ ತಗುಲಿದೆ.

ಅವಘಡದಲ್ಲಿ ಅಂದಾಜು 20 ಲಕ್ಷ ರೂ ಮೌಲ್ಯದ ಬೈಕ್ ಸುಟ್ಟಿವೆ ಎಂದು ಗೊತ್ತಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next