Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನಿಸಿದ ಇಬ್ಬರೂ ಮಹನೀಯರು ತಮ್ಮ ಲೇಖನಿ ಹಾಗೂ ಸಂಗೀತದಿಂದ ದೇಶಾದ್ಯಂತ ಪ್ರಸಿದ್ಧಿ ಪಡೆದಿದ್ದಾರೆ. ಅವರ ವ್ಯಕ್ತಿತ್ವ ನೆನಪಿಸುವ ಸಲುವಾಗಿ ನವೆಂಬರ್‌ನೊಳಗೆ ಆರು ಜಿಲ್ಲಾ ಕೇಂದ್ರಗಳು, ತಾಲೂಕು ಕೇಂದ್ರಗಳು ಸೇರಿದಂತೆ ಒಟ್ಟು 100 ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಿದ್ದೇವೆ.
Related Articles
Advertisement
ಸೆ.29ರಂದು ಬೆಳಗ್ಗೆ ಪಂ. ಸಿದ್ದರಾಮ ಜಂಬಲದಿನ್ನಿ ಜನ್ಮ ಶತಮಾನೋತ್ಸವ ಕಾರ್ಯಕ್ರಮ ನಡೆಯುವುದು. ಅಂತಾರಾಷ್ಟ್ರೀಯ ಕ್ಲಾರಿಯೊನೆಟ್ ವಾದಕ ಡಾ| ನರಸಿಂಹಲು ವಡವಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಜಂಬಲದಿನ್ನಿ ಅವರ ಪುತ್ರ ಡಾ| ಎಸ್. ಎಸ್. ಜಂಬಲದಿನ್ನಿ ತಮ್ಮ ತಂದೆ ವ್ಯಕ್ತಿತ್ವ ಕುರಿತು ಉಪನ್ಯಾಸ ನೀಡುವರು ಎಂದು ವಿವರಿಸಿದರು.
ಬಳಿಕ ವಚನ ಗಾಯನ ನಡೆಯಲಿದೆ. ಮಧ್ಯಾಹ್ನ ವಡವಾಟಿ ಅವರೊಂದಿಗೆ ಸಂಗೀತ ಸಂವಾದ ನಡೆಯಲಿದೆ. ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ| ಎಚ್.ಎಂ. ಮಹೇಶ್ವರಯ್ಯ ಭಾಗವಹಿಸುವರು ಎಂದರು.
ವಿಕಾಸ ಅಕಾಡೆಮಿ ಟ್ರಸ್ಟಿ ವಿ. ಶಾಂತರೆಡ್ಡಿ, ಜನ್ಮ ಶತಮಾನೋತ್ಸವ ಸ್ಮೃತಿ ಸಲಹೆಗಾರ ಡಾ| ಸ್ವಾಮಿರಾವ ಕುಲಕರ್ಣಿ, ಸ್ಮೃತಿ ಸಂಚಾಲಕ ಡಾ| ಶ್ರೀನಿವಾಸ ಸಿರನೂರಕರ, ಶ್ರೀನಗರೇಶ್ವರ ವೆಲ್‌ಫೇರ್ ಸೊಸೈಟಿ ಕಾರ್ಯದರ್ಶಿ ರವೀಂದ್ರ ಮುಕ್ಕಾ ಇದ್ದರು.