Advertisement
ತಮ್ಮ 35 ದಿನಗಳ ರಾಷ್ಟ್ರವ್ಯಾಪಿ “ಭಾರತ್ ಯಾತ್ರೆ’ ಕಾರ್ಯ ಕ್ರಮದ ಅಂಗವಾಗಿ ಗುರುವಾರ ಮುಂಬೈ ಷೇರು ಮಾರುಕಟ್ಟೆಯಲ್ಲಿ ಅವರು ಕಾರ್ಪೊರೇಟ್‌ಗಳನ್ನು ಉದ್ದೇಶಿಸಿ ಮಾತನಾಡಿದರು. ದೇಶವು ಸಮಗ್ರ ಪ್ರಗತಿ ಸಾಧಿಸಿ ನಿಜವಾದ ಅರ್ಥದಲ್ಲಿ ಸಾಧನೆ ಮಾಡಿದೆ ಎಂಬ ಮಾತಿಗೆ ಬೆಲೆ ಬರಬೇಕಾದರೆ, ಮಕ್ಕಳು ಎಲ್ಲ ರೀತಿ ಶೋಷಣೆಗಳಿಂದ ಮುಕ್ತರಾಗಿ ಬದುಕುವ ವಾತಾವರಣ ನಿರ್ಮಾಣವಾಗಬೇಕು. ಅದನ್ನು ನಿರ್ಮಿಸುವ ಹೊಣೆ ನಮ್ಮದು ಎಂದವರು ಪ್ರತಿಪಾದಿಸಿದ್ದಾರೆ.
ಮಕ್ಕಳ ಕಳ್ಳ ಸಾಗಣೆ ಮತ್ತು ಅವರ ಮೇಲಿನ ಲೈಂಗಿಕ ದೌರ್ಜನ್ಯಗಳ ವಿರುದ್ಧ ದೇಶಾದ್ಯಂತ ಜಾಗೃತಿ ಮೂಡಿಸುವ ಸಲುವಾಗಿ ಸತ್ಯಾರ್ಥಿ ಅವರು 35 ದಿನಗಳ “ಭಾರತ ಯಾತ್ರೆ’ ಕೈಗೊಂಡಿದ್ದಾರೆ. ತಮಿಳುನಾಡಿನ ಕನ್ಯಾ ಕುಮಾರಿಯಿಂದ ಸೆ.11ರಂದು ಆರಂಭವಾ ಗುವ ಯಾತ್ರೆ ಕರ್ನಾಟಕ ಸೇರಿದಂತೆ 22 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಗಳನ್ನು ಪ್ರದಕ್ಷಿಣೆ ಹಾಕಿ(ಒಟ್ಟು 15 ಸಾವಿರ ಕಿ.ಮೀ.), ಅಕ್ಟೋಬರ್ 15 ರಂದು ದೆಹಲಿ ಯಲ್ಲಿ ಸಮಾರೋಪಗೊಳ್ಳಲಿದೆ. ಈ ಯಾತ್ರೆಯಲ್ಲಿ ಲೈಂಗಿಕ ದೌರ್ಜನ್ಯದ ಸಂತ್ರಸ್ತರು, ವಿದ್ಯಾರ್ಥಿಗಳು, ರಾಜಕೀಯ ನಾಯಕರು ಹಾಗೂ ಜನಸಾಮಾನ್ಯರು ಭಾಗವಹಿಸಲಿದ್ದಾರೆ.