Advertisement

ಕೈಲಾಸ-ಮಾನಸ ಸರೋವರ ಯಾತ್ರೆ ಸಹಾಯಧನ ಹೆಚ್ಚಳಕ್ಕೆ ಚಿಂತನೆ

11:20 PM Dec 22, 2021 | Team Udayavani |

ಬೆಳಗಾವಿ: ಕೈಲಾಸ – ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಈಗಿರುವ 30 ಸಾವಿರ ರೂ.ಗಳ ಸಹಾಯಧನದ ಮೊತ್ತವನ್ನು ಹೆಚ್ಚಿಸುವ ಚಿಂತನೆ ಇದೆ.

Advertisement

ಜತೆಗೆ ಕಾಶಿ ಯಾತ್ರೆಗೆ ವಿಶೇಷ ರೈಲು ಸೇವೆ ಕಲ್ಪಿಸುವ ನಿಟ್ಟಿನಲ್ಲೂ ಮುಖ್ಯಮಂತ್ರಿ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಮುಜರಾಯಿ, ಹಜ್‌ ಹಾಗೂ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಬಿಜೆಪಿ ಸದಸ್ಯೆ ಡಾ| ತೇಜಸ್ವಿನಿ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2006-07ರಿಂದ ಸಹಾಯಧನ ನೀಡುವ ಯೋಜನೆ ಜಾರಿಗೊಳಿಸಲಾಗಿತ್ತು. ಕೈಲಾಸ – ಮಾನಸ ಸರೋವರ ಯಾತ್ರೆಗೆ ಸಹಾಯ ಧನ ತುಂಬಾ ಕಡಿಮೆಯಾಗಿದೆ ಎಂಬುದು ನನ್ನ ಅಭಿಪ್ರಾಯವಾಗಿದೆ. ಇದನ್ನು ಹೆಚ್ಚಿಸಲು ಮುಖ್ಯಮಂತ್ರಿಗಳ ಜತೆಗೆ ಚರ್ಚಿಸುತ್ತೇನೆ. ಜತೆಗೆ ಸುಂದರವಾಗಿ ಮರು ನಿರ್ಮಾಣಗೊಂಡಿರುವ ಕಾಶಿ ಕ್ಷೇತ್ರಕ್ಕೆ ತೆರಳಲು ಅನುಕೂಲವಾಗುವಂತೆ ವಿಶೇಷ ರೈಲು ವ್ಯವಸ್ಥೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಇದನ್ನೂ ಓದಿ:ಕುಂದಾಪುರ: ಕ್ರಿಸ್ಮಸ್‌ ಪ್ರಾರ್ಥನೆಗೆ ಶರತ್ತುಬದ್ಧ ಅನುಮತಿ

ದೇಗುಲ ದತ್ತು ಅಭಿಯಾನ
ರಾಜ್ಯದಲ್ಲಿ ಮುಜರಾಯಿ ಇಲಾಖೆ ಅಧೀನದಲ್ಲಿರುವ ಅತ್ಯಂತ ಕಡಿಮೆ ಆದಾಯವಿರುವ ಸಿ ದರ್ಜೆಯ ಸುಮಾರು 34,219 ದೇವಸ್ಥಾನಗಳನ್ನು ದಾನಿಗಳಿಗೆ ದತ್ತು ನೀಡಲು ಸರಕಾರ ಮುಂದಾಗಿದ್ದು, ಈ ಕುರಿತು ಅಭಿಯಾನ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

Advertisement

ತಸ್ತೀಕ್‌ ಹೆಚ್ಚಳಕ್ಕೆ ಕ್ರಮ
ಸಿ ದರ್ಜೆ ದೇವಸ್ಥಾನ ಅರ್ಚಕರಿಗೆ ಮಾಸಿಕ ತಸ್ತೀಕ್‌ ಎಂದು 4,000 ರೂ. ನೀಡಲಾಗುತ್ತಿದೆ. ಇದನ್ನು ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದರು.

ಕೈಲಾಸ-ಮಾನಸ ಸರೋವರ ಯಾತ್ರೆಗೆ ನೀಡುವ ಸಹಾಯಧನವನ್ನು 100 ಕೋಟಿ ರೂ.ಗೆ ಹೆಚ್ಚಿಸಬೇಕೆಂದು ಡಾ| ತೇಜಸ್ವಿನಿ ಗೌಡ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next