Advertisement

Bike Theft ಕೈಕಂಬ: ಬೈಕ್‌ ಕಳವು; ಪ್ರಕರಣ ದಾಖಲು

11:27 PM Jul 07, 2024 | Team Udayavani |

ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬ ಬಳಿ ಸವಾರ ಬೈಕ್‌ ನಿಲ್ಲಿಸಿ ಊಟಕ್ಕೆ ಹೋಗಿ ಮರಳಿ ಬಂದು ನೋಡಿದಾಗ ಬೈಕನ್ನು ಯಾರೋ ಕಳವು ಮಾಡಿದ ಘಟನೆ ಜೂ. 29ರಂದು ನಡೆದಿದೆ.

Advertisement

ಬಿ.ಸಿ.ರೋಡು ನಿವಾಸಿ ಪವನ್‌ಕುಮಾರ್‌ ಅವರು ಜೂ. 29ರಂದು ಮಂಗಳೂರಿಗೆ ಕೆಲಸಕ್ಕೆ ಹೋಗಿ ರಾತ್ರಿ ಹಿಂದಿರುಗುವ ಸಂದರ್ಭ ಕೈಕಂಬ ಬಳಿ ತನ್ನ ಯಮಹಾ ಎಫ್‌ಝಡ್‌ ಬೈಕನ್ನು ನಿಲ್ಲಿಸಿ ಊಟಕ್ಕೆ ತೆರಳಿದ್ದರು.

ಊಟ ಮುಗಿಸಿ ಬಂದು ನೋಡಿದಾಗ ಬೈಕ್‌ ನಿಲ್ಲಿಸಿದ್ದ ಸ್ಥಳದಲ್ಲಿರಲಿಲ್ಲ.ಬಳಿಕ ಪರಿಸರದಲ್ಲಿ ಹುಡುಕಾಡಿದರೂ ಬೈಕ್‌ ಪತ್ತೆಯಾಗಿಲ್ಲ.

ಕಳವಾದ ಬೈಕಿನ ಮೌಲ್ಯ 70 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next